ತಮ್ಮನ ಮದುವೆ ಗುಟ್ಟನ್ನು ರಟ್ಟು ಮಾಡಿದ ಮಹೇಶ್ ಭಟ್

ಮಹೇಶ್‌ ಭಟ್, ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ಜನಪ್ರಿಯ ನಟಿ ಆಲಿಯಾ ಭಟ್ ತಂದೆಯಾಗಿರುವ ಮಹೇಶ್ ಭಟ್ ತಮ್ಮ ಖುಲ್ಲಂಖುಲ್ಲಾ ಮಾತುಗಳಿಂದಾಗಿ ಮಾಧ್ಯಮಗಳಿಗೂ ಪ್ರಿಯರು.

ಮಹೇಶ್ ಭಟ್‌ಗೆ ವಿಕ್ರಂ ಭಟ್ ಹೆಸರಿನ ಸಹೋದರ ಇದ್ದು, ಇವರೂ ಸಹ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಹಾಗೂ ನಿರ್ಮಾಪಕರಲ್ಲೊಬ್ಬರು, 52 ವರ್ಷದ ವಿಕ್ರಂ ಭಟ್ ಗುಟ್ಟಾಗಿ ಮದುವೆ ಆಗಿದ್ದು, ಈ ವಿಷಯವನ್ನು ಮಹೇಶ್ ಭಟ್ ಅವರೇ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ವಿಕ್ರಂ ಭಟ್ 2020ರಲ್ಲಿಯೇ ಶ್ವೇತಾಂಬರಿ ಸೋನಿ ಎಂಬುವರೊಂದಿಗೆ ವಿವಾಹವಾಗಿದ್ದು, ಈ ವಿಷಯವನ್ನು ಈಗ ಮಹೇಶ್ ಭಟ್ ಮಾಧ್ಯಮಗಳೆದುರು ಹಂಚಿಕೊಂಡಿದ್ದಾರೆ.

''ಮದುವೆಯನ್ನು ಗುಟ್ಟಾಗಿ ಇಡಲಾಗುವುದಿಲ್ಲ ಎಂದು ವಿಕ್ರಂ ಭಟ್‌ಗೆ ನಾನು ಮೊದಲೇ ಹೇಳಿದ್ದೆ. ವಿಕ್ರಂ ಭಟ್ 2020ರ ಸೆಪ್ಟೆಂಬರ್‌ನ ಲಾಕ್‌ಡೌನ್ ಅವಧಿಯಲ್ಲಿ ಮದುವೆ ಆಗಿದ್ದಾನೆ. ಆದರೆ ಸುದ್ದಿ ಬಹಿರಂಗಗೊಳ್ಳದಂತೆ ನೋಡಿಕೊಂಡಿದ್ದ'' ಎಂದಿದ್ದಾರೆ ಮಹೇಶ್ ಭಟ್.

Mahesh Bhatt Revels His Brother Vikram Bhatt Married Shwethambari Moni

''ನನಗೆ ಕರೆ ಮಾಡಿ, ಬಾಸ್ ನಾನು ಮದುವೆ ಆಗುತ್ತಿದ್ದೇನೆ. ಕೋವಿಡ್ ನಿಯಮ ಜಾರಿಯಲ್ಲಿರುವ ಕಾರಣ ಹೆಚ್ಚು ಜನರನ್ನು ಆಹ್ವಾನಿಸುತ್ತಿಲ್ಲ. ನೀನು ಬರಲೇ ಬೇಕೆಂದು ಒತ್ತಾಯವೂ ಇಲ್ಲ. ನಿನ್ನ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊ. ನಾವು ಮದುವೆಯ ಸುದ್ದಿಯನ್ನು ಗೌಪ್ಯವಾಗಿಡುತ್ತಿದ್ದೇವೆ ಎಂದಿದ್ದ'' ಎಂದಿದ್ದಾರೆ ಮಹೇಶ್ ಭಟ್.

''ನಾನು ಆಗಲೇ ಅವನಿಗೆ ಬುದ್ಧಿ ಹೇಳಿದ್ದೆ. ನೀನು ಬೆಕ್ಕಿನಂತೆ ವರ್ತಿಸುತ್ತಿದ್ದೀಯಾ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗುವುದಿಲ್ಲ ಎಂದು ತಿಳಿಯುತ್ತದೆ. ನಿನ್ನ ಮದುವೆಯನ್ನು ನೀನು ಹೆಚ್ಚು ದಿನ ಗೌಪ್ಯವಾಗಿ ಇಡಲು ಆಗುವುದಿಲ್ಲ. ಅದೂ ಮಾಧ್ಯಮಗಳು ಇಷ್ಟೋಂದು ಭಾರಿ ಪ್ರಮಾಣದಲ್ಲಿ ಸಕ್ರಿಯವಾಗಿರುವಾಗ ಎಂದು ಬುದ್ಧಿ ಹೇಳಿದ್ದೆ'' ಎಂದಿದ್ದಾರೆ ಮಹೇಶ್ ಭಟ್.

ವಿಕ್ರಂ ಭಟ್ ಮದುವೆಯಾಗಿರುವ ಶ್ವೇತಾಂಬರಿ ಸೋನಿ, ಜನಪ್ರಿಯ ಮೇಕಪ್ ಕಲಾವಿದೆ ನಮ್ರತಾ ಸೋನಿಯ ಸಹೋದರಿ ಆಗಿದ್ದು, ನಮ್ರತಾ ಸೋನಿ, ಶ್ವೇತಾಂಬರಿಯ ಕೆಲವು ಚಿತ್ರಗಳನ್ನು ಹಂಚಿಕೊಂಡು, 'ಆ ದಿನ ನನ್ನ ಸಹೋದರಿ ಎಷ್ಟು ಸುಂದರವಾಗಿ ಕಾಣುತ್ತಿದ್ದಳು ಎಂದು ವರ್ಣಿಸಲಾಗದು' ಎಂದು ಬರೆದುಕೊಂಡಿದ್ದಾರೆ. ಅದನ್ನು ಗಮನಿಸಿದ ಕೆಲವು ಬಾಲಿವುಡ್ ಮಾಧ್ಯಮಗಳು ಮಹೇಶ್ ಭಟ್ ಬಳಿ ಸ್ಪಷ್ಟನೆ ಕೇಳಿದಾಗ ಎಲ್ಲ ಮಾಹಿತಿಯನ್ನು ಹೊರಚೆಲ್ಲಿದ್ದಾರೆ ಮಹೇಶ್ ಭಟ್.

ವಿಕ್ರಂ ಭಟ್ ಈ ಮೊದಲು ಅದಿತಿ ಭಟ್ ಅನ್ನು ವಿವಾಹವಾಗಿದ್ದರು ಅವರಿಗೆ ಕೃಷ್ಣಾ ಭಟ್ ಹೆಸರಿನ ಮಗಳಿದ್ದಾಳೆ. ಆ ನಂತರ ವಿಕ್ರಂ ಭಟ್ ಕೆಲ ಕಾಲ ಅಮಿಶಾ ಪಟೇಲ್ ಹಾಗೂ ನಟಿ ಸುಷ್ಮಿತಾ ಸೇನ್ ಜೊತೆಗೆ ಪ್ರೀತಿಯಲ್ಲಿದ್ದರು. ನಂತರ ಈಗ ಶ್ವೇತಾಂಬರಿಯನ್ನು ವಿವಾಹವಾಗಿದ್ದಾರೆ.

More from Filmibeat

English summary
Director, Producer Mahesh Bhatt revels his brother Vikram Bhatt married Shwethambari Modi last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X