ರಿಯಾ ಮಾತ್ರವಲ್ಲ, ನಟಿ ಜಿಯಾ ಖಾನ್ ಜೊತೆಯೂ ಹೀಗೆ ನಡೆದುಕೊಂಡಿದ್ದರು ಮಹೇಶ್ ಭಟ್: ಇಲ್ಲಿದೆ ವಿಡಿಯೋ ಸಾಕ್ಷಿ
ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿವೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಮಹೇಶ್ ಭಟ್ ಹೆಸರು ಬಾಲಿವುಡ್ ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸುಶಾಂತ್ ಸಾವಿಗೆ ಪ್ರೇಯಸಿ ರಿಯಾ ಜೊತೆಗೆ ಮಹೇಶ್ ಭಟ್ ಕೂಡ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಮಹೇಶ್ ಭಟ್ ನಡುವಿನ ಆತ್ಮೀಯತೆ ಮತ್ತು ಇಬ್ಬರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಅನುಮಾನ ಮೂಡಿಸುತ್ತಿದೆ. ಮಹೇಶ್ ಭಟ್ ಜೊತೆ ರಿಯಾ ತೀರಾ ಆಪ್ತವಾಗಿರುವ ಒಂದಿಷ್ಟು ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೀಗ ಮಹೇಶ್ ಭಟ್ ಅವರ ಮತ್ತೊಂದು ವಿಡಿಯೋ ನೆಟ್ಟಿಗರಿಗೆ ಶಾಕ್ ನೀಡಿದೆ. ಮುಂದೆ ಓದಿ...

ಜಿಯಾ ಖಾನ್ ಜೊತೆಗಿನ ಮಹೇಶ್ ಭಟ್ ವಿಡಿಯೋ ವೈರಲ್
ರಿಯಾ ಚಕ್ರವರ್ತಿ ಜೊತೆ ಮಹೇಶ್ ಸಂಬಂಧ ಚರ್ಚೆಯಾಗುತ್ತಿರುವ ನಡುವೆಯೇ ಮತ್ತೊಂದು ವಿಡಿಯೋ ಹರಿದಾಡುತ್ತಿದೆ. ದಿವಂಗತ ನಟಿ ಜಿಯಾ ಖಾನ್ ಜೊತೆ ಮಹೇಶ್ ಭಟ್ ಆತ್ಮೀಯರಾಗಿರುವ ವಿಡಿಯೋ ಇದಾಗಿದೆ. ಕೇವಲ ರಿಯಾ ಮಾತ್ರವಲ್ಲ ಅಂದು ಜಿಯಾ ಖಾನ್ ಜೊತೆಯೂ ಮಹೇಶ್ ಅಷ್ಟೆ ಆಪ್ತರಾಗಿದ್ದರು ಎನ್ನುವುದನ್ನು ಈ ವಿಡಿಯೋ ಹೇಳುತ್ತಿದೆ.

16ರ ಜಿಯಾ ಜೊತೆ ಮಹೇಶ್ ಭಟ್ ಆಪ್ತತೆ
ಸುಮಾರು 16 ವರ್ಷದ ಹಳೆಯ ವಿಡಿಯೋ ಇದಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ ಜಿಯಾ ಖಾನ್, ಮಹೇಶ್ ಭಟ್ ಭುಜಕ್ಕೊರಗಿ ಕುಳಿತಿದ್ದಾರೆ. ಜಿಯಾ ಮೈ ಮೇಲೆ ಕೈ ಹಾಕಿ, ಆಕೆಯ ಕೈ ಬೆರಳುಗಳನ್ನು ಹಿಡಿದುಕೊಂಡು ಮಹೇಶ್ ಏನೋ ಹೇಳುತ್ತಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ಆ ಸಮಯದಲ್ಲಿ ಜಿಯಾ ಖಾನ್ ಗೆ ಇನ್ನೂ 16 ವರ್ಷ ವಯಸ್ಸು ಇರಬಹುದು ಎಂದು ಹೇಳಲಾಗುತ್ತಿದೆ.

ಮಹೇಶ್ ಭಟ್ ಮೇಲೆ ಅನುಮಾನ
ನಟಿಯರ ಜೊತೆ ಮಹೇಶ್ ಭಟ್ ನಡೆದುಕೊಳ್ಳುತ್ತಿರುವ ರೀತಿ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಯಾ ಖಾನ್ ಜೊತೆಗಿನ ಮಹೇಶ್ ಭಟ್ ನಡವಳಿಕೆ ನೋಡಿ ನೆಟ್ಟಿಗರು ಕಾಮೆಂಟ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ವಿಡಿಯೋ ಮಹೇಶ್ ಭಟ್ ವಿರುದ್ಧ ಮತ್ತಷ್ಟು ಅನುಮಾನ ಮೂಡಿಸಿದ್ದು, ಜಿಯಾ ಆತ್ಮಹತ್ಯೆಗೂ ಮಹೇಶ್ ಭಟ್ ಗೂ ಸಂಬಂಧ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

2013ರಲ್ಲಿ ಜಿಯಾ ಖಾನ್ ಆತ್ಮಹತ್ಯೆ
ಜಿಯಾ ಖಾನ್ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿಯಾ ಆತ್ಮಹತ್ಯೆಯ ಸುತ್ತ ಹಲವಾರು ಅನುಮಾನ ಹುಟ್ಟಿಕೊಂಡಿತ್ತು. ಜಿಯಾ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಗೊಂದಲ ಅಭಿಮಾನಿಗಳನ್ನು ಇನ್ನೂ ಕಾಡುತ್ತಿದೆ.

ಮಹೇಶ್ ಭಟ್ ಚಿತ್ರದ ಮೇಲೆ ವ್ಯತಿರಿಕ್ತ ಪರಿಣಾಮ
ಮಹೇಶ್ ಭಟ್ ಅವರ ಈ ಎಲ್ಲಾ ನಡವಳಿಕೆಗಳು ಅವರ ಸಿನಿಮಾದ ಮೇಲೆ ಎಫೆಕ್ಟ್ ಆಗಿದೆ. ಅನೇಕ ವರ್ಷಗಳ ಬಳಿಕ 'ಸಕಡ್-2' ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳಿದ್ದ ಮಹೇಶ್ ಭಟ್ ವಿರುದ್ಧ ಪ್ರೇಕ್ಷಕರು ತಿರುಗಿಬಿದ್ದಿದ್ದಾರೆ. 'ಸಡಕ್-2' ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಅತೀ ಹೆಚ್ಚು ಡಿಸ್ ಲೈಕ್ ಪಡೆದುಕೊಂಡಿದೆ.


Click it and Unblock the Notifications











