'ಚಿತ್ರರಂಗದ ಡಾನ್' ಎಂದ ಸಂಬಂಧಿ ಲವೀನಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಹೇಶ್ ಭಟ್

ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸಂಬಂಧಿ ಲವೀನಾ ಲೂಧ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಹೇಶ್ ಭಟ್ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಲವೀನಾ ಲೂಧ್ ನಿನ್ನ(ಅ.23) ವಿಡಿಯೋ ಮೂಲಕ ಮಹೇಶ್ ಭಟ್ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿ ಸಾಕಷ್ಟು ಆರೋಪ ಮಾಡಿದ್ದರು.

ವರದಿಗಳ ಪ್ರಕಾರ, ಮಹೇಶ್ ಭಟ್ ವಕೀಲರು ಎಲ್ಲಾ ಆರೋಪಗಳನ್ನು ನಿರಾಕರಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರಂತೆ. "ಲವೀನಾ ಲೂಧಿ ವಿಡಿಯೋ ಮೂಲಕ ಮಾಡಿರುವ ಆರೋಪವನ್ನು ನಾನು, ನನ್ನ ಕ್ಲೈಂಟ್ ಮಹೇಶ್ ಭಟ್ ಪರವಾಗಿ ನಿರಾಕರಿಸುತ್ತೇನೆ. ಇಂತಹ ಆರೋಪಗಳು ಸುಳ್ಳುಮಾತ್ರವಲ್ಲ ಮಾನಹಾನಿಕರ. ಕಾನೂನಿನಲ್ಲಿ ಗಂಭೀರ ಪರಿಣಾಮ ಬೀರುತ್ತೆ. ನನ್ನ ಕ್ಲೈಂಟ್ ಸಲಹೆಯಂತೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಲವೀನಾ ಲೂಧ್, ಮಹೇಶ್ ಭಟ್ ಅವರ ಸೋದರಳಿಯ ಸುಮಿತ್ ಸಭರ್ವಾಲ್ ಅವರ ಪತ್ನಿ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಜೊತೆಗೆ ನನ್ನ ಪತಿ ಅಮೈರಾ ದಸ್ತರ್ ಮತ್ತು ಸಪ್ನಾ ಪಬ್ಬಿ ಮುಂತಾದ ನಟಿಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು, ಜೊತೆಗೆ ಹುಡುಗಿಯರನ್ನು ಸಪ್ಲೈ ಮಾಡುತ್ತಾರೆ ಎಂದು ಬಹಿರಂಗಪಡಿಸಿದ್ದರು.

Mahesh Bhatt to Take Legal Action Against Relative Luviena Lodh After She Called Him a Don

'ಮಹೇಶ್ ಭಟ್ ಚಿತ್ರರಂಗದ ದೊಡ್ಡ ಡಾನ್. ಸಂಪೂರ್ಣ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದಾರೆ. ಅವರು ಹೇಳಿದ ಹಾಗೆ ಕೇಳದಿದ್ದರೆ ಅವರ ಜೀವನ ಹಾಳು ಮಾಡುತ್ತಾರೆ. ಎಷ್ಟೋ ಜನರನ್ನು ಕೆಲಸದಿಂದ ಕಿತ್ತುಹಾಕುವ ಮೂಲಕ ಅವರ ಜೀವನವನ್ನು ಮಹೇಶ್‌ ಭಟ್‌ ಹಾಳು ಮಾಡಿದ್ದಾರೆ' ಎಂದಿದ್ದಾರೆ. ಜೊತೆಗೆ ತನಗೆ ಏನೇ ಆದರೂ ಮಹೇಶ್ ಭಟ್ ಕುಟುಂಬ ಕಾರಣವೆಂದು ವಿಡಿಯೋ ಮೂಲಕ ಹೇಳಿದ್ದಾರೆ.

Recommended Video

Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ

More from Filmibeat

English summary
Bollywood producer Mahesh Bhatt to Take Legal Action Against Relative Luviena Lodh After She Called Him a Don.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X