For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಬರಲಿದೆ ವೀರ ಸಾವರ್ಕರ್ ಸಿನಿಮಾ, ಪೋಸ್ಟರ್ ಬಿಡುಗಡೆ

  |

  ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ 138ನೇ ಜನುಮದಿನದ ವಿಶೇಷವಾಗಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಬಯೋಪಿಕ್ ಘೋಷಣೆಯಾಗಿದೆ. ಮಹೇಶ ಮಂಜೇರ್ಕರ್ ಈ ಚಿತ್ರ ನಿರ್ದೇಶನ ಮಾಡಲಿದ್ದು, ಚಿತ್ರದ ಫಸ್ಟ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ.

  ಮಹೇಶ್ ಮಂಜೇರ್ಕರ್ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಎಂದು ಹೆಸರಿಡಲಾಗಿದೆ. ಸಂದೀಪ್ ಸಿಂಗ್ ಮತ್ತು ಅಮಿತ್ ಬಿ ವಾಧ್ವಾನಿ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ರಿಷಿ ವರ್ಮಾನಿ ಈ ಚಿತ್ರಕಥೆ ರಚಿಸುತ್ತಿದ್ದು, ಮಹೇಶ್ ಮಂಜೇರ್ಕರ್ ಸಹ ಕೈ ಜೋಡಿಸಲಿದ್ದಾರೆ. ಮಹಾರಾಷ್ಟ್ರ, ಲಂಡನ್ ಹಾಗೂ ಅಂಡಮಾನ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಸಾವರ್ಕರ್ ಜೀವನ ಮತ್ತು ಪಯಣ ನಮ್ಮ ಆಧ್ಯತೆ

  ಸಾವರ್ಕರ್ ಜೀವನ ಮತ್ತು ಪಯಣ ನಮ್ಮ ಆಧ್ಯತೆ

  ಬಯೋಪಿಕ್ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ನಿರ್ಮಾಪಕ ಸಂದೀಪ್ ಸಿಂಗ್ ''ವೀರ್ ಸಾವರ್ಕರ್ ಅವರನ್ನು ಪೂಜಿಸಲಾಗುತ್ತದೆ ಮತ್ತು ಅಷ್ಟೇ ಪ್ರಮಾಣದಲ್ಲಿ ವಿರೋಧವೂ ಇದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗಿದ್ದರು. ಅವರ ಜೀವನ ಮತ್ತು ಪ್ರಯಾಣದ ಬಗ್ಗೆ ಒಂದು ಇಣುಕು ನೋಟವನ್ನು ಪ್ರಸ್ತುತಪಡಿಸುವುದು ನಮ್ಮ ಪ್ರಯತ್ನ'' ಎಂದಿದ್ದಾರೆ.

  ಅಪ್ರತಿಮ ದೇಶಭಕ್ತ ವೀರ ಸಾವರಕರ್ ಜನ್ಮದಿನ

  ಸಾವರ್ಕರ್ ಪಾತ್ರದಲ್ಲಿ ಯಾರು?

  ಸಾವರ್ಕರ್ ಪಾತ್ರದಲ್ಲಿ ಯಾರು?

  ಚಿತ್ರದ ಕಥೆ, ಚಿತ್ರೀಕರಣದ ಯೋಜನೆ ಈಗಾಗಲೇ ರೂಪುಗೊಂಡಿದೆ. ಲಂಡನ್, ಮಹಾರಾಷ್ಟ್ರ, ಅಂಡಮಾನ್‌ನಲ್ಲಿ ಶೂಟಿಂಗ್ ನಡೆಸುವ ನಿರ್ಧಾರ ಮಾಡಲಾಗಿದೆ. ಇದರ ನಡುವೆ ವೀರ್ ಸಾವರ್ಕರ್ ಪಾತ್ರ ಯಾರು ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ಸದ್ಯಕ್ಕೆ ಪಾತ್ರವರ್ಗದ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಮಯ ನೋಡಿ ಪ್ರಕಟಿಸುವುದಾಗಿ ತಿಳಿಸಲಾಗಿದೆ.

  ಪಿಎಂ ಮೋದಿ ನಿರ್ಮಿಸಿದ್ದ ನಿರ್ಮಾಪಕ

  ಪಿಎಂ ಮೋದಿ ನಿರ್ಮಿಸಿದ್ದ ನಿರ್ಮಾಪಕ

  ನಟನೆ ಮತ್ತು ನಿರ್ದೇಶನದಲ್ಲಿ ಪಳಗಿರುವ ಮಹೇಶ್ ಮಂಜೇರ್ಕರ್‌ಗೆ ಸಾಕಷ್ಟು ಅನುಭವ ಇದೆ. ಜೊತೆಗೆ ಸಂದೀಪ್ ಸಿಂಗ್ ಸಹ ಒಳ್ಳೊಳ್ಳೆ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ಮೇರಿ ಕೋಮ್' ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. ಐಶ್ವರ್ಯ ರೈ, ರಣದೀಪ್ ಹೂಡ ನಟನೆಯ ಸರಬ್ಜಿತ್, ಸಂಜಯ್ ದತ್ ನಟಿಸಿದ್ದ ಭೂಮಿ, ವಿವೇಕ್ ಒಬೆರಾಯ್ ನಟಿಸಿದ್ದ ಪಿಎಂ ನರೇಂದ್ರ ಮೋದಿ ಅಂತಹ ಸಿನಿಮಾ ನಿರ್ಮಾಣ ಮಾಡಿದ್ದರು.

  'ವೀರ ಸಾವರ್ಕರ್ ಬಗ್ಗೆ ಮೊದಲು ಅರಿತು ತಿಳಿದು ನಂತರ ಮಾತನಾಡಿ'

  Protima Bediಯ ಜೀವನ ಚರಿತ್ರೆ ವೆಬ್ ಸಿರೀಸ್ ನಲ್ಲಿ | Filmibeat Kannada
  ವೀರ್ ಸಾವರ್ಕರ್ ಕುರಿತು

  ವೀರ್ ಸಾವರ್ಕರ್ ಕುರಿತು

  ಸ್ವಾಂತ್ರ್ಯ ವೀರ್ ಸಾವರ್ಕರ್ ಮೂಲ ಹೆಸರು ವಿನಾಯಕ್ ದಾಮೋದರ್ ಸಾವರ್ಕರ್. ಭಾರತೀಯ ಹೋರಾಟಗಾರ ಮತ್ತು ರಾಜಕಾರಣಿ. ಹಿಂದುತ್ವ, ಹಿಂದೂ ರಾಷ್ಟ್ರೀಯತಾವಾದಿ ತತ್ವವನ್ನು ಪ್ರತಿಪಾದಿಸಿದವರು. ಹಿಂದೂ ಮಹಾಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1883ರಲ್ಲಿ ಜನಿಸಿದ ಸಾವರ್ಕರ್ 1966ರಲ್ಲಿ ನಿಧನರಾದರು.

  English summary
  On the 138th Birth Anniversary of Veersavarkar, Producers Sandeep Singh and Amitb Wadhwani Announce a Biopic. Titled Swatantra Veer Savarkar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X