ನನಗೆ ಎರಡನೇ ಮದುವೆ ಆಗುವ ಆಸೆ ಇದೆ, ಆದರೆ ನನ್ನ ಗಂಡ ಡಿವೋರ್ಸ್ ಕೊಡ್ತಿಲ್ಲ- ಮಹಿಮಾ ಚೌಧರಿ
ಮದುವೆ ಎಂಬ ಮೂರಕ್ಷರ ಜೀವನ ಪರ್ಯಂತದ ಬದ್ದತೆ ಮತ್ತು ಭರವಸೆ. ಆದರೆ.. ವಾಸ್ತವದಲ್ಲಿ ಕೆಲ ಒಮ್ಮೆ ಈ ಬದ್ದತೆ ಮರೆಯಾಗುತ್ತೆ. ಬದುಕಿನ ಪ್ರಯಾಣದಲ್ಲಿ ಸಂಬಂಧ ಅರ್ಧದಲ್ಲಿಯೇ ಮುರಿದು ಬೀಳುತ್ತೆ. ಹೀಗಾದಾಗ ಕೆಲವರು ಗೌರವಯುತವಾಗಿ ತಮ್ಮ ಸಂಬಂಧಕ್ಕೆ ಎಳ್ಳು-ನೀರು ಬಿಡುತ್ತಾರೆ. ಮತ್ತೂ ಕೆಲವರು ತಮ್ಮ ವ್ಯೆಯಕ್ತಿಕ ಬದುಕನ್ನು ಬೀದಿಗೆ ತಂದು ನೋಡುಗರ ಬಾಯಿಗೆ ಆಹಾರವಾಗುತ್ತಾರೆ.
ಇನ್ನೂ.. ಮೊದಲ ಮದುವೆ ಮುರಿದು ಬಿದ್ದ ತಕ್ಷಣ ಹಲವರು ತಮ್ಮ ಬದುಕೇ ಮುಕ್ತಾಯವಾಯ್ತು ಎಂದುಕೊಳ್ಳುವರು ಕೂಡ ಇದ್ದಾರೆ. ಆದರೆ ಇವರ ನಡುವೆ ಇನ್ನೂ ಕೆಲವರು ಮತ್ತೊಮ್ಮೆ ಪ್ರೀತಿಗೆ ಹಾತೊರೆಯುತ್ತಾರೆ. ತಮ್ಮ ಕಷ್ಟಕ್ಕೆ..ಕಣ್ಣೀರಿಗೆ.. ಹೆಗಲಾಗುವ ಸಂಗಾತಿಯನ್ನು ಹುಡುಕಲು ಬಯಸುತ್ತಾರೆ. ಆದರೆ.. ಇದೇ ಸಮಯದಲ್ಲಿ ಸಮಾಜದ ಭಯ ಇವರಲ್ಲಿ ಮನೆ ಮಾಡಿರುತ್ತೆ. ನೋಡಿದವರು ಏನಂತಾರೆ..? ಎನ್ನುವ ಚಿಂತೆ ಶುರುವಾಗುತ್ತೆ.

ಅದರಲ್ಲಿಯೂ ಮೊದಲ ಮದುವೆಯಿಂದ ಮಕ್ಕಳಿದ್ದರೆ ಈ ದುಗುಡ-ದುಮ್ಮಾನ ಹಲವರಲ್ಲಿ ಹೆಚ್ಚಿರುತ್ತೆ. ಆದರೂ ಕೂಡ ಧೈರ್ಯ ಮಾಡಿ ಮುನ್ನುಗ್ಗುವ ಪ್ರಯತ್ನ ಮಾಡುತ್ತಾರೆ. ಹೊಸ ಬದುಕಿನತ್ತ ಹೆಜ್ಜೆ ಇಡಲು ಬಯಸುತ್ತಾರೆ. ಆದರೆ ಇಲ್ಲಿಯೂ ಕೂಡ ಯಾವುದಾದರೂ ಅಡೆ ತಡೆ ಎದುರಾಗಿಯೇ ಆಗುತ್ತೆ. ಉದಾಹರಣೆಗೆ ಮೊದಲ ಗಂಡ ಅಥವಾ ಹೆಂಡತಿಯ ಜೊತೆ ಒಂದೇ ಸೂರಿನಡಿ ಬದುಕದಿದ್ದರೂ ... ಸಂಬಂಧ ಮುರಿದು ಬಿದ್ದಿದ್ದರೂ.. ಅಧಿಕೃತವಾಗಿ ವಿಚ್ಛೇದನವನ್ನು ಇವರು ಪಡೆದಿರುವುದಿಲ್ಲ. ಈ ಹಿನ್ನೆಲೆ.. ಇವರ ಎರಡನೇ ಮದುವೆಯ ಕನಸು ಕನಸಾಗಿಯೇ ಕೆಲ ಒಮ್ಮೆ ಉಳಿದು ಬಿಡುತ್ತೆ. ಮನಸು ಮತ್ತೊಂದು ಮದುವೆಗೆ ಹಾತೊರೆದರೂ ಕೂಡ ಅದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಮಹಿಮಾ ಚೌಧರಿ ಅವರ ವ್ಯೆಯಕ್ತಿಕ ಬದುಕು.
ಹೌದು, ಮಹಿಮಾ ಚೌಧರಿ .. ಬಾಲಿವುಡ್‌ನ ಬೆಡಗಿ. ''ಪರ್‌ದೇಸ್''.. ''ಧಡ್ಕನ್''.. ''ದಿಲ್ ಕ್ಯಾ ಕರೇ''.. ''ದೀವಾನೆ''.. ''ಓಂ ಜೈ ಜಗದೀಶ್''.. ''ದಿಲ್ ಹೈ ತುಮಾರಾ''.. ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಮಹಿಮಾ ಚೌಧರಿ ಮೂರು ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಸದ್ಯ ಮಹಿಮಾ ಕ್ಯಾನ್ಸರ್‌ದಿಂದ ಚೇತರಿಸಿಕೊಂಡು ಚಿತ್ರರಂಗಕ್ಕೆ ಮರಳಿದ್ದಾರೆ. ಹೊಸ ಚಿತ್ರಗಳನ್ನು ಒಪ್ಪಿಕೊಂಡು ಅಭಿನಯಿಸಲು ಶುರು ಮಾಡಿದ್ದಾರೆ.
ಇಂಥಾ ಮಹಿಮಾ ಚೌಧರಿಗೆ ಈಗ 52 ವರ್ಷ. ಇವರಿಗೆ ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಳೆ. ತಾಯಿಯಂತೆ ಚಿತ್ರರಂಗದಲ್ಲಿ ಮಿಂಚುವ ಆಸೆಯಲ್ಲಿ ತಯಾರಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾಳೆ. ಮಹಿಮಾ ಕೂಡ ಮಗಳ ಖುಷಿಯಲ್ಲಿಯೇ ತಮ್ಮ ಖುಷಿಯನ್ನು ಕಾಣುತ್ತಿದ್ದಾರೆ. 52ನೇ ವಯಸ್ಸಿನಲ್ಲಿ ತಮ್ಮ ಮಗಳ ಜೊತೆ ಮತ್ತು ತಾಯಿಯ ಜೊತೆ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಆದರೂ ಕೂಡ ಮಹಿಮಾ ಚೌಧರಿಗೆ ಮತ್ತೊಂದು ಮದುವೆ ಆಗುವ ಆಸೆ ಇದೆ. ಆದರೆ.. ಇವರ ಈ ಕನಸು ನನಸಾಗಲು ಅಡಚಣೆ ಎದುರಾಗುತ್ತಿದೆ. ಅದುವೇ ವಿಚ್ಛೇದನ.
ಹೌದು, ಅಸಲಿಗೆ ವೃತ್ತಿ ಬದುಕಿನಲ್ಲಿ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ, ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದಾಗ, 2006ರಲ್ಲಿ ಮಹಿಮಾ ಚೌಧರಿ ಮದುವೆಯಾಗಿದ್ದರು. ಕೋಲ್ಕತ್ತಾ ಮೂಲದ ಉದ್ಯಮಿ ಬಾಬಿ ಮುಖರ್ಜಿ ಜೊತೆ ಸಪ್ತಪದಿಯನ್ನು ತುಳಿದಿದ್ದರು. 2007ರಲ್ಲಿ ಹೆಣ್ಣು ಮಗುವಿಗೆ ಜನ್ಮವನ್ನು ಕೂಡ ನೀಡಿದರು.

ಆದರೆ. ದೌರ್ಭಾಗ್ಯ .. ಮದುವೆಯಾದ 7 ವರ್ಷಗಳಲ್ಲಿಯೇ ಇವರ ದಾಂಪತ್ಯದಲ್ಲಿ ಬಿರುಕು ಮೂಡಿತು. ಭಿನ್ನಾಭಿಪ್ರಾಯಗಳಿಂದ ಮಹಿಮಾ ಸಾಂಸಾರಿಕ ಜೀವನ ಹಳಿ ತಪ್ಪಿತ್ತು. ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದುಕೊಂಡು ಮಹಿಮಾ ತಮ್ಮ ಮಗಳ ಜೊತೆ ಮನೆಯಿಂದ ಹೊರ ಬಂದರು.
ಆದರೆ.. ಹೀಗೆ ಮನೆಯಿಂದ ಹೊರ ಬಂದು ಹನ್ನೆರಡು ವರ್ಷಗಳಾದರೂ ಕೂಡ ಮಹಿಮಾ ಚೌಧರಿ ಅವರಿಗೆ ಪತಿ ಬಾಬಿ ಮುಖರ್ಜಿ ವಿಚ್ಛೇದನವನ್ನು ನೀಡಿಲ್ಲ. ಹೀಗಾಗಿ ಎರಡನೇ ಮದುವೆ ಆಗುವ ಬಯಕೆ ಇದ್ದರೂ ಕೂಡ ಮಹಿಮಾಗೆ ಈಗ ಮದುವೆ ಮರಿಚೀಕೆಯಾದಂತೆ ಇದೆ. ಇದೇ ವಿಚಾರದಕ್ಕೆ ಸಂಬಂಧಿಸಿದಂತೆ ಮಹಿಮಾ ಇತ್ತೀಚೆಗೆ ಮಾತನಾಡಿದ್ಧಾರೆ.
ಈ ಕುರಿತು ''ನವಭಾರತ ಟೈಮ್ಸ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಹಿಮಾ ಚೌಧರಿ ನನ್ನ ತಂದೆ ಮತ್ತು ತಾಯಿಯ ಸುಂದರವಾದ ವೈವಾಹಿಕ ಜೀವನವನ್ನು ನಾನು ನೋಡಿದ್ದೇನೆ, ಅವರ ನಡುವೆ ಇದ್ದ ಪ್ರೀತಿಯನ್ನು ಕಂಡಿದ್ಧೇನೆ, ಈ ಕಾರಣಕ್ಕೆ ವ್ಯೆಯಕ್ತಿಕ ಬದುಕಿನಲ್ಲಿಯೂ ಪ್ರೀತಿಯ ಸಿಂಚನ ನಿರಂತರವಾಗಿರುತ್ತೆ ಎಂದು ನಾನು ಅಂದುಕೊಂಡಿದ್ದೇ ಎಂದು ಹೇಳಿದ್ದಾರೆ. ಡಿವೋರ್ಸ್ ಕುರಿತು ನಾನು ಕನಸು ಮನಸಿನಲ್ಲಿಯೂ ಕೂಡ ಯೋಚನೆ ಮಾಡಿರಲಿಲ್ಲ ಎಂದಿದ್ದಾರೆ.
ಮುಂದುವರೆದು ಯಾರದ್ದಾದರೂ ವಿಚ್ಛೇದನದ ಸುದ್ದಿಯನ್ನು ನಾನು ಕೇಳಿದಾಗ ನಾನು ಮರಗುತ್ತಿದ್ದೆ, ಛೇ.. ಇಬ್ಬರಲ್ಲಿ ಒಬ್ಬರಾದರೂ ಮದುವೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಆದರೆ.. ಅವರು ಪ್ರಯತ್ನ ಮಾಡಿರಲಿಕ್ಕಿಲ್ಲ ಎಂದು ಯೋಚನೆ ಮಾಡುತ್ತಿದ್ದೆ ಎಂದು ಹೇಳಿರುವ ಮಹಿಮಾ ಒಂದೊಮ್ಮೆ ನಾನು ಅವರ ಜಾಗದಲ್ಲಿದ್ದರೆ ನಾನು ಸಂಬಂಧ ಉಳಿಸಿಕೊಳ್ಳಲು ಬೇಕಾದ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದೆ ಎಂದು ಅಂದುಕೊಳ್ಳುತ್ತಿದ್ದೇ ಎಂದು ಹೇಳಿದ್ದಾರೆ. ನನ್ನ ದುರಾದೃಷ್ಟಕ್ಕೆ ನನ್ನ ಬದುಕಿನಲ್ಲಿಯೇ ಬಿರುಗಾಳಿ ಎದ್ದ ನಂತರ ವಾಸ್ತವದ ಅರಿವು ನನಗಾಯ್ತು ಎಂದು ಕೂಡ ಹೇಳಿದ್ದಾರೆ.

ನಮ್ಮ ಸಂಬಂಧ ಮುರಿದು ಬಿದ್ದಾಗ ನಾನು ಮಾನಸಿಕವಾಗಿ ಬಲಶಾಲಿಯಾಗಿರಲಿಲ್ಲ. ಆತ್ಮಸೈರ್ಯ ಇರಲಿಲ್ಲ. ಬದಲಿಗೆ ಸಂಪೂರ್ಣ ಕುಗ್ಗಿ ಹೋಗಿದ್ದೇ ಎಂದು ಹೇಳಿರುವ ಮಹಿಮಾ ಚೌಧರಿ ಆ ಸಮಯದಲ್ಲಿ ನನ್ನ ತಾಯಿ ಮತ್ತು ನನ್ನ ಅಜ್ಜಿ ನನಗೆ ಧೈರ್ಯ ತುಂಬಿದರು, ನಾವೆಲ್ಲ ಸೇರಿ ಮಗಳನ್ನು ಬೆಳೆಸೋಣ ಎಂದು ಹೇಳಿದರು ಎಂದು ಹೇಳಿದ್ಧಾರೆ.
ಇದೇ ಸಮಯದಲ್ಲಿ ಎರಡನೇ ಮದುವೆ ಕುರಿತು ಕೂಡ ಮಾತನಾಡಿರುವ ಮಹಿಮಾ ಚೌಧರಿ ನಾನು ಎರಡನೇ ಮದುವೆ ಕುರಿತು ಯೋಚನೆ ಮಾಡಿದಾಗೆಲ್ಲಾ ನನ್ನ ವಿಚ್ಛೇದನ ಇನ್ನೂ ಆಗಿಲ್ಲ ಎನ್ನುವ ಸತ್ಯ ನನಗೆ ಅರಿವಾಗುತ್ತೆ ಎಂದು ಹೇಳಿರುವ ಮಹಿಮಾ ವಿಚ್ಛೇದನ ಪ್ರಕರಣ ಇನ್ನೂ ಬಾಕಿ ಇದೆ. ಹಾಗಂಥ ನಾನು ನಂಬಿಕೆ ಕಳೆದುಕೊಂಡಿಲ್ಲ, ಮದುವೆ ಎಂಬ ವ್ಯವಸ್ಥೆ ಮೇಲೆ ನನಗೆ ಇನ್ನೂ ನಂಬಿಕೆ ಇದೆ, ಮದುವೆಯಾದರೆ ಇಬ್ಬರು ಖುಷಿಯಾಗಿ ಜೀವನ ಮಾಡಬಹುದು ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಮಹಿಮಾ ಚೌಧರಿ ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಅವರ ಜೊತೆ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ದುರ್ಲಭ್ ಪ್ರಸಾದ್ ಕೀ ಶಾದಿ''. ಈ ಚಿತ್ರದಲ್ಲಿ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ಮದುವೆಯಾಗುವ ದೃಶ್ಯ ಇದೆ. ಈ ದೃಶ್ಯದ ಫೋಟೊ ಮತ್ತು ಚಿತ್ರೀಕರಣ ನಡೆಯುವ ಸಮಯದಲ್ಲಿ ತೆಗೆದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ವೈರಲ್ ಆದ ಈ ಫೋಟೊ ಮತ್ತು ವಿಡಿಯೋಗಳನ್ನು ನೋಡಿ ಹಲವರ ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ನಿಜವಾಗಿಯೂ ಮದುವೆಯಾಗಿದ್ದಾರೆ ಎಂದುಕೊಂಡಿದ್ದರು. ಈ ವಿಚಾರವನ್ನು ಕೂಡ ತಮ್ಮ ಸಂದರ್ಶನದಲ್ಲಿ ಪ್ರಸ್ತಾಪ ಮಾಡಿರುವ ಮಹಿಮಾ ಚೌಧರಿ ತೀರಾ ಇತ್ತೀಚೆಗೆ ನನ್ನ ಮತ್ತು ಸಂಜಯ್ ಮಿಶ್ರಾ ಅವರ ಮದುವೆಯ ಫೋಟೊಗಳು ವೈರಲ್ ಆದ ನಂತರ ನನ್ನ ಎರಡನೇ ಮದುವೆಯ ಕುರಿತು ನನಗೆ ಆಶಾಭಾವನೆ ಮೂಡಿದೆ ಎಂದು ಹೇಳಿದ್ದಾರೆ. ನನಗಿಂತ ಜನ ನಾನು ಎರಡನೇ ಮದುವೆಯಾಗಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ನೋಡಿ ಖುಷಿಯಾಯ್ತು ಎಂದು ಹೇಳಿದ್ದಾರೆ.


Click it and Unblock the Notifications











