ಪಾತ್ರಕ್ಕಾಗಿ ಪಲ್ಲಂಗ ; ಸ್ಟಾರ್ ನಟರ ಬೇಡಿಕೆಗೆ ಬೇಸತ್ತು ಚಿತ್ರರಂಗ ತೊರೆದ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ನಟಿ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ.

ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಎಡಗಾಲಿನಲ್ಲಿ ಒದ್ದು ಬರುತ್ತಾರೆ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಮಹಿಮಾ ಗುಪ್ತಾ ಸದ್ಯದ ಉದಾಹರಣೆ

Mahima Gupta Exposes Bhojpuri Film Industry s Dark Secret Casting Couch Pressure is Real

ಹೌದು. ಮಹಿಮಾ ಗುಪ್ತಾ.. ಭೋಜ್‌ಪುರಿ ಚೆಲುವೆ. ಒಂದು ಕಾಲದಲ್ಲಿ 15 ಚಿತ್ರಗಳನ್ನು ಒಂದಾದ ಮೇಲೊಂದರಂತೆ ಒಪ್ಪಿಕೊಂಡವರು ಇವರು. "ಪತಿ ಪತ್ನಿ ಔರ್ ಭೂತ್ನಿ".. " ಜಾನ್ ಲೇಬು ಕಾ".. "ಮಿಸ್ಟರ್ ಕಲ್ಯಾಣ್".. ಸೇರಿ ಹಲವು ಚಿತ್ರಗಳಲ್ಲಿ ಮಹಿಮಾ ಅಭಿನಯಿಸಿದ್ದಾರೆ.

ತಮ್ಮ ಅಭಿನಯ ಅಂದ ಚೆಂದದಿಂದ ಎಲ್ಲರ ಹೃದಯ ಗೆದ್ದು ಅಭಿಮಾನಿ ಬಳಗವನ್ನು ಕೂಡ ಹೊಂದಿರುವ ಮಹಿಮಾ ಗುಪ್ತಾ, ಸದ್ಯ ಭೋಜ್‌ಪುರಿ ಚಿತ್ರರಂಗವನ್ನು ತೊರೆದಿದ್ದಾರೆ. ಬಾಲಿವುಡ್ ನತ್ತ ಗಮನ ವಹಿಸಿದ್ದಾರೆ. ಇಂಥಾ ಮಹಿಮಾ ಹೆಸರು ಕೀರ್ತಿ ನೀಡಿದ ಭೋಜ್‌ಪುರಿ ಚಿತ್ರರಂಗದಿಂದ ದೂರವಾಗಿದ್ದೇಕೆ ಎನ್ನುವುದನ್ನು ಹೇಳಿದ್ದಾರೆ.

ಈ ಕುರಿತು " ಫಿಲ್ಮಿಬೀಟ್ ಹಿಂದಿ"ಯ ''ನೀಲಂ ತ್ರಿಪಾಠಿ''ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ಮಹಿಮಾ ಗುಪ್ತಾ ಭೋಜ್‌ಪುರಿ ಚಿತ್ರರಂಗದಲ್ಲಿ ನನಗೆ ಕೆಲ ಅವಕಾಶಗಳು ಬಂದಿದ್ದವು. ಆದರೆ ಅಲ್ಲಿ ರಾಜಿ‌ಮಾಡಿಕೊಳ್ಳಬೇಕಿತ್ತು. ನಾನು ಒಪ್ಪಲಿಲ್ಲ. ಈ ಹಿನ್ನೆಲೆ ಬಂದಿದ್ದ ಆ ಅವಕಾಶಗಳು ನನ್ನ ಕೈ ತಪ್ಪಿದವು ಎಂದು ಹೇಳಿದ್ದಾರೆ.

ಮುಂದುವರೆದು ಭೋಜ್‌ಪುರಿಯಲ್ಲಿ ಕೆಲ ಸ್ಟಾರ್ ಗಳು ಹಲವಾರು ವರ್ಷಗಳಿಂದ ಬಿಡಾರ ಹೂಡಿದ್ದಾರೆ. ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ. ಚಿತ್ರರಂಗ ಅವರ ಹಿಡಿತದಲ್ಲಿದೆ ಎಂದು ಹೇಳಿರುವ ಮಹಿಮಾ ಈ ಸ್ಟಾರ್ ಗಳು ಬಹಿರಂಗವಾಗಿಯೇ ಕೆಲಸ ಕೊಡುವ ನೆಪದಲ್ಲಿ ಹಾಸಿಗೆಗೆ ಕರೆಯುತ್ತಾರೆ ಎಂದು ಹೇಳಿದ್ದಾರೆ. ಒಂದು ವೇಳೆ ಒಪ್ಪದೇ ಇದ್ದರೆ ಮರು ದಿನ ನಿಮ್ಮನ್ನು ಚಿತ್ರದಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕರಿಂದ ಫೋನ್ ಬರುತ್ತೆ ಎಂದು ಹೇಳಿದ್ದಾರೆ.

Mahima Gupta Exposes Bhojpuri Film Industry s Dark Secret Casting Couch Pressure is Real

ಹೀಗೆ ಅವಕಾಶಗಳಿಂದ ವಂಚಿತಗೊಂಡ ನಾನು ಖಿನ್ನತೆಗೊಳಗಾಗಿದ್ದೆ ಹೀಗಾಗಿ ಈ ಸಹವಾಸವೇ ಬೇಡ ಎಂದು ನಾನು ಭೋಜ್‌ಪುರಿ ಚಿತ್ರರಂದಿಂದ ದೂರವಾಗಿದ್ದೇನೆ ಎಂದಿರುವ ಮಹಿಮಾ ಸದ್ಯ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಅವಕಾಶಗಳನ್ನು ಹುಡುಕುತ್ತಿದ್ದಾರೆ.

ಮಹಿಮಾ ಅವರ ಈ ಹೇಳಿಕೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆ ಶುರುವಾಗಿದೆ. ಆ ಸ್ಟಾರ್ ಗಳು ಯಾರು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅಂದ್ಹಾಗೇ ಮಹಿಮಾ ಗುಪ್ತಾ ಕನ್ನಡದ ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಆ ಚಿತ್ರದ ಹೆಸರು ''ಮಹಾಗುರು''.

2023ರ ಆಸು ಪಾಸು ಬಿಡುಗಡೆಯಾದ ಈ ''ಮಹಾಗುರು'' ಚಿತ್ರ 36 ವರ್ಷಗಳ ಹಿಂದೆ ''ಪುಷ್ಪಕ ವಿಮಾನ'' ಎಂಬ ಮಾತುಗಳೇ ಇಲ್ಲದ ಚಿತ್ರದ ನಂತರ ಬಂದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಿಧಿ ಕಾಯುವ ಏಂಜಲ್ ಆಗಿ ಈ ಚಿತ್ರದಲ್ಲಿ ಮಹಿಮಾ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ನಿರ್ದೇಶನ ಇತ್ತು. ಕೇರಳ‌ ಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಕಲೇಶಪುರ ಕಾಡಿನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು.

More from Filmibeat

English summary
Bhojpuri actress Mahima Gupta speaks out about the casting couch culture, detailing the immense pressure she and others have faced in the industry.
Read more about: casting couch metoo actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X