ಭದ್ರತಾ ಸಿಬ್ಬಂದಿಯಿಂದಲೇ ಖ್ಯಾತ ನಟಿಗೆ ಲೈಂಗಿಕ ಕಿರುಕುಳ, ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ..!

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ ಅಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ನರಳುವಂತಾಗಿದೆ. ಇನ್ನು ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದವರಿಗೆ ಕೇವಲ ಆಯಾ ಭಾಷೆಗಳಲ್ಲಿ ಅಥವಾ ಅವರ

ದೇಶಗಳಲ್ಲಿ ಅಭಿಮಾನಿಗಳು ಇರಲ್ಲ. ಬದಲಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿರ್ತಾರೆ. ಹೀಗಾಗಿ ಅಲ್ಲಿಯೂ ಕೂಡ ಸ್ವಾತಂತ್ರ್ಯ ಇಲ್ಲ. ನೆಮ್ಮದಿಯಿಂದ ಸ್ಟಾರ್‌ಗಳು ಓಡಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಪಾರಾಗಲು ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ.

Mahira Khan Harassed by Security Guard in London Humayun Saeed Rescues Her Watch Video

ಆದರೆ ಹೀಗೆ ನೇಮಿಸಲಾದ ಬಾಡಿಗಾರ್ಡ್‌ನಿಂದನೇ ಕಿರುಕುಳವಾದರೆ ? ಯಾರನ್ನು ದೂಷಿಸುವುದು. ಯಾರಿಂದ ರಕ್ಷಣೆಯನ್ನು ಪಡೆಯುವುದು. ಇದಕ್ಕೆ ಲಂಡನ್‌ನಲ್ಲಿ ನಡೆದ ಮಹಿರಾ ಖಾನ್ ಅವರ ಪ್ರಕರಣವೇ ಸದ್ಯದ ಉದಾಹರಣೆ.

ಹೌದು, ಮಹಿರಾ ಖಾನ್.. ಪಾಕಿಸ್ತಾನದ ಚೆಲುವೆ. ಅಲ್ಲಿನ ಪ್ರಖ್ಯಾತ ನಾಯಕಿ ಇವರು. ಮೂಲತಃ ಪಾಕಿಸ್ತಾನದವರಾದರೂ ಭಾರತದ ಅನೇಕ ಚಿತ್ರಪ್ರೇಮಿಗಳಿಗೆ ಚಿರಪರಿಚಿತವಾಗಿರುವ ಮಹೀರಾ ಈ ಹಿಂದೆ ಶಾರುಖ್ ಖಾನ್ ಅಭಿನಯದ ರಹೀಸ್ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು. ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು.

ಇಂಥಾ ಮಹಿರಾ ಸದ್ಯ ಲವ್ ಗುರು ಎಂಬ ಚಿತ್ರವನ್ನು ಮಾಡಿದ್ದಾರೆ. ಹೀಗಾಗಿ ತಮ್ಮ ಚಿತ್ರದ ಪ್ರಚಾರಕ್ಕೆ ಮಹಿರಾ ಲಂಡನ್‌ಗೆ ತೆರಳಿದ್ದರು. ಆದರೆ ಈ ಸಮಯದಲ್ಲಿ ಜೀವನ ಪರ್ಯಂತ ಮಹಿರಾ ಮರೆಯಲಾಗದ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯಿಂದಲೇ ಮಹಿರಾಗೆ ಲೈಂಗಿಕ ಕಿರುಕುಳವಾಗಿದೆ.

ಹೌದು, ಲಂಡನ್‌ನ ಇಂಡೋ-ಪಾಕ್ ಸೂಪರ್ ಮಾರ್ಕೆಟ್‌ನಲ್ಲಿ ಮಹಿರಾ ತಮ್ಮ 'ಲವ್ ಗುರು' ಚಿತ್ರದ ಪ್ರಚಾರ ಮಾಡಲು ತಮ್ಮ ಚಿತ್ರದ ನಾಯಕ ಹುಮಾಯೂನ್ ಸಹೀದ್ ಜೊತೆ ಹೋಗಿದ್ದರು. ಮಹಿರಾ ಬರುತ್ತಿರುವ ವಿಚಾರವನ್ನು ತಿಳಿದು ಅದಾಗಲೇ ಅಲ್ಲಿ ಸಾಕಷ್ಟು ಜನ ಸೇರಿದ್ದರು. ನೂಕು ನುಗ್ಗಲಿನ ವಾತಾವರಣ ಇತ್ತು.

ಈ ವಾತಾವರಣದಲ್ಲಿ ಸೂಪರ್ ಮಾರ್ಕೆಟ್‌ನತ್ತ ಹೋಗಲು ಮಹಿರಾ ಮುಂದಾದಾಗ ಅಭಿಮಾನದ ಸೋಗಿನಲ್ಲಿ ಅನೇಕರು ಮಹಿರಾ ಅವರನ್ನು ಸುತ್ತುವರೆದಿದ್ದಾರೆ. ಅವರ ಮೈ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಅಲ್ಲಿನ ಭದ್ರತಾ ಸಿಬ್ಬಂದಿ ಮಹಿರಾ ಮೈಗೆ ಮೈ ತಾಗಿಸಿ ಮಹಿರಾ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಮಹಿರಾ ಅವರ ಮೈ ಮತ್ತು ಖಾಸಗಿ ಭಾಗಗಳನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ.

ಭದ್ರತಾ ಸಿಬ್ಬಂದಿಯ ಈ ವರ್ತನೆಯಿಂದ ಬೆಚ್ಚಿ ಬಿದ್ದ ಮಹಿರಾ ಖಾನ್ ಆ ನಂತರ ಅಲ್ಲಿಯೇ ತಮ್ಮ ಹಿಂದೆ ಇದ್ದ ಚಿತ್ರದ ನಾಯಕ ಹುಮಾಯೂನ್ ಸಹೀದ್‌ ಎದುರು ತಮ್ಮ ಅಸುರಕ್ಷಿತ ಭಾವನೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಮಾಯೂನ್ ಸಹೀದ್‌ ಆ ಬಾಡಿಗಾರ್ಡ್‌ಗೆ ಮಹಿರಾ ಅವರನ್ನು ಬಿಡುವಂತೆ ಹೇಳಿದ್ದಾರೆ. ಮಹಿರಾ ಅವರಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ. ಆ ನಂತರ ಸುರಕ್ಷಿತವಾಗಿ ಮಹಿರಾ ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಕೇವಲ ಪಾಕಿಸ್ತಾನದವರು ಮಾತ್ರವಲ್ಲ ಭಾರತದ ಹಲವಾರು ಚಿತ್ರಪ್ರೇಮಿಗಳು ಈ ಘಟನೆಯನ್ನು ಖಂಡಿಸುತ್ತಿದ್ದಾರೆ.

ಇನ್ನು ಲವ್ ಗುರು ಚಿತ್ರದ ನಾಯಕ ಹುಮಾಯೂನ್ ಸಹೀದ್ ಕೂಡ ಕಾರ್ಯಕ್ರಮದ ಆಯೋಜಕರ ವಿರುದ್ದ ಕೆಂಡ ಕಾರಿದ್ದು ಕಾರ್ಯಕ್ರಮವನ್ನು ಸರಿಯಾಗಿ ವ್ಯವಸ್ಥೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿರಾ ಖಾನ್ ಅವರ ಈ ಲಂಡನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
Pakistani actress Mahira Khan was reportedly harassed by a security guard while being mobbed by fans during a public appearance in London. The situation became chaotic, but fellow actor Humayun Saeed intervened to help her escape safely. A video of the incident has since gone viral online.
Read more about: harrasment actress viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X