15 ವರ್ಷದ ಮಗನ ಎದುರು 02ನೇ ಮದ್ವೆಯಾದ 39 ವರ್ಷದ ಖ್ಯಾತ ನಟಿ..!
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಸಂಬಂಧ ಶುರುವಾದಷ್ಟೇ ಬೇಗ ಅಂತ್ಯ ಕಾಣುತ್ತೆ. ಇನ್ಯಾರದ್ದೋ ಮೇಲೆ ಅಷ್ಟೇ ಬೇಗ ಮತ್ತೆ ಪ್ರೇಮಾಂಕುರವಾಗುತ್ತೆ. ಇದಕ್ಕೆ ಮಹಿರಾ ಖಾನ್ ಸದ್ಯದ ಉದಾಹರಣೆ.
ಹೌದು. ಮೂಲತಃ ಪಾಕಿಸ್ತಾನದವರಾದರೂ ಭಾರತದ ಅನೇಕ ಚಿತ್ರಪ್ರೇಮಿಗಳಿಗೆ ಚಿರಪರಿಚಿತವಾಗಿರುವ ಮಹೀರಾ ಈ ಹಿಂದೆ ಶಾರುಖ್ ಖಾನ್ ಅಭಿನಯದ ರಹೀಸ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರು. ಇಂಥಾ ಮಹಿರಾ ಖಾನ್ ಕಳೆದ ವರ್ಷಅಕ್ಟೋಬರ್‌ನಲ್ಲಿ ತಮ್ಮ ಮಗನ ಮುಂದೆ ಎರಡನೇ ಮದುವೆಯಾಗಿದ್ದರು. ಸಾಂಸಾರಿಕ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆದಿದ್ದರು. ಆದರೆ, ಈ ಕುರಿತು ಮಹಿರಾ ಈ ಹಿಂದೆ ಹೆಚ್ಚೇನು ಮಾತನಾಡಿರಲಿಲ್ಲ.

ಆದರೆ ಈಗ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಹೀರಾ ತಮ್ಮ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಎರಡನೇ ಮದುವೆ ಸಮಾರಂಭದಲ್ಲಿ ತಮ್ಮ ಮಗನ ವರ್ತನೆ, ನಡುವಳಿಕೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಹೌದು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಹಿರಾ ಖಾನ್ ನಾನು ನನ್ನ 39ನೇ ವಯಸ್ಸಿನಲ್ಲಿ ಎರಡನೇ ಮದ್ವೆಗೆ ಸಿದ್ಧವಾದಾಗ ನನ್ನನ್ನು ನೋಡಿ ಖುಷಿ ಪಟ್ಟವರಲ್ಲಿ ನನ್ನ ಮಗ ಅಜ್ಲಾನ್ ಕೂಡ ಒಬ್ಬ ಎಂದು ಹೇಳಿದ್ದಾರೆ. ನನ್ನ ಬದುಕಿನಲ್ಲಿ ಪ್ರತಿಯೊಂದು ವಿಚಾರ ತಪ್ಪಾಗಿದೆ ಎಂದು ನನಗೆ ಭಾಸವಾಗುತ್ತಿತ್ತು. ಈ ಕಾರಣಕ್ಕೆ ನಾನು ಆ ದೇವರಲ್ಲಿ ನಿರಂತರವಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ ಆ ಸಮಯದಲ್ಲಿ ನನ್ನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿತು ಎಂದಿರುವ ಮಹಿರಾ ಖಾನ್ ನನ್ನ ಎರಡನೇ ಮದುವೆಯ ಸಮಯದಲ್ಲಿ ನನ್ನ ಮಗ ನನ್ನನ್ನೂ ಮದುವೆಯ ಮಂಟಪದವರೆಗೆ ಕರೆದೊಯ್ಯಬೇಕು ಎಂದು ನಾನು ಬಯಸಿದ್ದೇ, ಆ ದೇವರ ಕೃಪೆಯಿಂದ ನಾನು ಬಯಸಿದಂತೆಯೇ ಅವನು ಮಾಡಿದ ಎಂದು ಹೇಳಿದ್ದಾರೆ.
ಆ ಕ್ಷಣವನ್ನು ನಾನು ಯಾವತ್ತು ಮರೆಯಲಾರೆ ಎಂದು ಹೇಳಿದ್ದಾರೆ. ಜೀವನದಲ್ಲಿ ಪ್ರೀತಿ ಮತ್ತು ಬೆಂಬಲ ಸಿಕ್ಕರೆ ಕಠಿಣ ನಿರ್ಧಾರಗಳು ಕೂಡ ಸುಲಭವಾಗುತ್ತವೆ ನನ್ನ ಮಗನ ಬೆಂಬಲ ನನ್ನ ಮದುವೆಯನ್ನು ಇನ್ನು ಸ್ಮರಣಿಯವನ್ನಾಗಿಸಿತು ಎಂದು ಕೂಡ ಮಹಿರಾ ಹೇಳಿದ್ಧಾರೆ. ನನ್ನ ಮಗ ನನ್ನ ಹೆಮ್ಮೆ ಎಂದು ಪುನರುಚ್ಚಿಸಿದ್ದಾರೆ. ಮಗನ ಬಗ್ಗೆ ಮಾತನಾಡುತ್ತಾ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಅಂದ್ಹಾಗೇ ತಮ್ಮ 23ರ ಪ್ರಾಯದಲ್ಲಿಯೇ 2007ರಲ್ಲಿ ಪಾಕಿಸ್ತಾನದ ಉದ್ಯಮಿ ಅಲಿ ಅಸ್ಕರಿ ಜೊತೆ ಮಹಿರಾ ಖಾನ್ ಮದುವೆಯಾಗಿದ್ದರು. ಆದರೆ ಇಬ್ಬರ ದಾಂಪತ್ಯ ಬದುಕು 2015ರಲ್ಲಿ ಮುರಿದು ಬಿತ್ತು. ಆ ನಂತರ ತಮ್ಮ ಮಗನ ಜೊತೆ ಏಕಾಂಗಿಯಾಗಿದ್ದ ಮಹಿರಾ ಕಳೆದ ವರ್ಷ ತಮ್ಮ 14 ವರ್ಷದ ಮಗನ ಎದುರು ತಮ್ಮ ಬಹುಕಾಲದ ಗೆಳೆಯ ಸಲೀಂ ಕರೀಮ್ ಅವರನ್ನು ಮದುವೆಯಾಗಿದ್ದರು. ತಿಳಿ ನೀಲಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದರು. ಈಗ ಮದ್ವೆಯಾಗಿ ಒಂದು ವರ್ಷದ ಬಳಿಕ ತಮ್ಮ ಮದುವೆಯ ಕುರಿತು ಬಿಬಿಸಿ ಏಷ್ಯನ್ ನೆಟವರ್ಕ್ ಗೆ ನೀಡಿದ ಸಂದರ್ಶನದಲ್ಲಿ ಮದುವೆಯ ಕುರಿತು ಮಹಿರಾ ಮಾತನಾಡಿದ್ದಾರೆ. ಎರಡನೇ ಮದ್ವೆಗೆ ಮಗ ನೀಡಿದ ಬೆಂಬಲದ ಕುರಿತು ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.


Click it and Unblock the Notifications











