ಫೆಬ್ರವರಿ 14 ರಿಂದ 'ಮೈದಾನ್' ಕೊನೆಯ ಹಂತದ ಚಿತ್ರೀಕರಣ ಆರಂಭ

ಬಿಡುಗಡೆ ವಿಚಾರದಲ್ಲಿ ಸುದ್ದಿಯಲ್ಲಿದ್ದ 'ಮೈದಾನ್' ಸಿನಿಮಾ ಈಗ ಕೊನೆಯ ಹಂತದ ಚಿತ್ರೀಕರಣ ಪುನರಾರಂಭಿಸಲಿದೆ. ಫೆಬ್ರವರಿ 14 ರಿಂದ ಮುಂಬೈನಲ್ಲಿ ಶೂಟಿಂಗ್ ಶುರು ಮಾಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈಗಾಗಲೇ ಶೇಕಡಾ 65 ರಷ್ಟು ಚಿತ್ರೀಕರಣ ಮುಗಿದಿದೆ. ಬಾಕಿ ಉಳಿದಿರುವ ಶೂಟಿಂಗ್‌ಗೆ ಮತ್ತೆ ಚಾಲನೆ ನೀಡಲಾಗುತ್ತಿದೆ. 2019 ರಲ್ಲಿ ಮೈದಾನ್ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆ 2020ರಲ್ಲಿ ಶೂಟಿಂಗ್ ಸ್ಥಗಿತವಾಗಿತ್ತು. ಈಗ, ಮತ್ತೆ ಕೆಲಸ ಆರಂಭಿಸಲು ನಿರ್ಧರಿಸಿದ್ದು, ಸಿನಿಮಾ ಪೂರ್ತಿ ಮಾಡಲಿದೆ.

ಕೊಲ್ಕತ್ತಾ, ಲಕ್ನೌ ಹಾಗೂ ಮುಂಬೈನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ಸಾಗಿದೆ. ಫೆಬ್ರವರಿ 14 ರಿಂದ ಮುಂಬೈನ ಪೊವಾಯಿಯಲ್ಲಿ ಮೈದಾನ್ ಶೂಟ್ ಪ್ರಾರಂಭವಾಗಲಿದೆ.

Maidaan movie last schedule will be shot from 14 Feb 2021

ಅಂದ್ಹಾಗೆ, ಮೈದಾನ್ ಸಿನಿಮಾ 2021ರ ಅಕ್ಟೋಬರ್ 15 ರಂದು ವರ್ಲ್ಡ್ ವೈಡ್ ತೆರೆಗೆ ಬರಲಿದೆ. ಅದೇ ವಾರ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರವೂ ರಿಲೀಸ್ ಆಗುತ್ತಿದೆ. ಈ ಎರಡು ಚಿತ್ರಗಳಲ್ಲಿಯೂ ಅಜಯ್ ದೇವಗನ್ ನಟಿಸಿದ್ದಾರೆ.

ಈ ವಿಚಾರವಾಗಿ ಮೈದಾನ್ ಸಿನಿಮಾದ ಸಹ ನಿರ್ಮಾಪಕ ಬೋನಿ ಕಪೂರ್, ಆರ್‌ಆರ್‌ಆರ್ ನಿರ್ದೇಶಕ ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಕೊರೊನಾದಿಂದ ಸಮಸ್ಯೆಯಲ್ಲಿರುವ ಚಿತ್ರರಂಗ ಅದರಿಂದ ಹೇಗೆ ಹೊರಬೇಕು ಎಂದು ಚಿಂತಿಸಬೇಕಾದ ಸಮಯದಲ್ಲಿ ರಾಜಮೌಳಿ ನಿರ್ಮಾಪಕರ ಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಇನ್ನುಳಿದಂತೆ ರವೀಂದ್ರನಾಥ್ ಶರ್ಮಾ ಈ ಚಿತ್ರ ನಿರ್ದೇಶಿಸುತ್ತಿದ್ದು, ಪ್ರಿಯಾಮಣಿ, ಗಜರಾಜ್ ರಾವ್, ರುದ್ರಾಣಿ ಘೋಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೀ ಸ್ಟುಡಿಯೋ, ಬೋನಿ ಕಪೂರ್, ಆಕಾಶ್ ಚಾವ್ಲಾ, ಅರುಣವ್ ಜೋಯ್ ಸೇನಗುಪ್ತ ನಿರ್ಮಾಣ ಮಾಡಿದ್ದಾರೆ. ಹಿಂದಿ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಮೈದಾನ್ ಬಿಡುಗಡೆಯಾಗಲಿದೆ.

More from Filmibeat

English summary
Ajay Devgn starrer Maidaan movie last schedule will be shot from 14 Feb 2021 at Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X