ಕೊನೆಯವರೆಗೆ ನಾನು ಪ್ರೀತಿಗಾಗಿ ಹೋರಾಡುತ್ತೇನೆ ಎಂದ ಮಲೈಕಾ, ಹಾಗಿದ್ದರೆ ಅರ್ಜುನ್ ಕಪೂರ್ ಕಥೆ..?

ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ. ಯೌವ್ವನದ ಹುಚ್ಚಕೊಡಿ ಮನಸಿನ ಇವತ್ತಿನ ಅನೇಕ ಯುವಕ ಮತ್ತು ಯುವತಿಯರಿಗಂತೂ ಲವ್ ಅನ್ನೋದು ಶೋಕಿ. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ.ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ಬಟ್ಟೆ ಬದಲಿಸಿದಂತೆ ಪ್ರೇಮ ಸಂಬಂಧಗಳನ್ನು ಇಲ್ಲಿ ಅನೇಕರು ಬದಲಿಸುತ್ತಾ ಹೋಗ್ತಾರೆ. ಕೇವಲ ಜನಸಾಮಾನ್ಯರು ಮಾತ್ರ ಅಲ್ಲ, ಬಣ್ಣದ ಪ್ರಪಂಚದಲ್ಲಿ ಬದುಕು ಕಟ್ಟಿಕೊಂಡವರಲ್ಲಿ ಬಹುತೇಕರ ಹಣೆಬರಹ ಇಷ್ಟೇ. ಆದರೆ ಇದಕ್ಕೆ ಬಾಲಿವುಡ್‌ನ ಬ್ಯೂಟಿ ಮಲೈಕಾ ಅರೋರಾ ತದ್ವಿರುದ್ದ. ಯಾಕೆಂದರೆ ಮಲೈಕಾ ನಿಜವಾದ ಪ್ರೀತಿಯ ಕಲ್ಪನೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಖುದ್ದು ಮಲೈಕಾ ಈ ಮಾತನ್ನು ಹೇಳಿದ್ದಾರೆ.

ಹೌದು. ಆಶ್ಚರ್ಯ ಅನಿಸಿದರೂ ಇದು ನಿಜಾ. ಅರ್ಬಾಜ್ ಖಾನ್ ಅವರಿಂದ ದೂರವಾದ ನಂತರ ಅರ್ಜುನ್ ಕಪೂರ್ ಜೊತೆ ಇದ್ದ ಮಲೈಕಾ, ಈಗ ಅರ್ಜುನ್ ಕಪೂರ್ ಅವರಿಂದ ಕೂಡ ದೂರವಾಗಿದ್ದಾರೆ ಅನ್ನುವ ಸುದ್ದಿ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಆರು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದ ಈ ಜೋಡಿ ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇನ್ನೂ ಅರ್ಜುನ್ ಕಪೂರ್ ಕಳೆದ ಎರಡು ದಿನದ ಹಿಂದೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಪ್ರತಿ ಬಾರಿ ತಮ್ಮ ಪ್ರಿಯಕರನ ಹುಟ್ಟುಹಬ್ಬವನ್ನೂ ಅದ್ಧೂರಿಯಾಗಿ ಆಚರಿಸುತ್ತಿದ್ದ ಮಲೈಕಾ ಮಾತ್ರ ಈ ಬಾರಿ ಅರ್ಜುನ್ ಕಪೂರ್ ಸುತ್ತ ಮುತ್ತ ಕಂಡು ಬಂದಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೂಡ ಅರ್ಜುನ್ ಕಪೂರ್ ಜೊತೆ ಇದ್ದ ಫೋಟೋಗಳನ್ನು ಹಂಚಿಕೊಂಡಿಲ್ಲ.

malaika-arora-addresses-love-amid-breakup-rumors-with-arjun-kapoor-ill-never-give-up-but

ಹೀಗಾಗಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಖಾನ್ ದೂರವಾಗಿರುವುದು ನೂರಕ್ಕೆ ನೂರು ಸತ್ಯ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ. ಇದರ ನಡುವೆ ಈಗ ಮಲೈಕಾ ಅರೋರಾ ಪ್ರೇಮ ಪಾಠವನ್ನು ಮಾಡಿದ್ದಾರೆ. ಹೌದು, ಹೆಲೋ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಲೈಕಾ, ಬದುಕಿನಲ್ಲಿ ಏನೇ ಆಗಲಿ ಆದರೆ ನಿಜವಾದ ಪ್ರೀತಿಯಲ್ಲಿನ ನಂಬಿಕೆಯನ್ನು ನಾನು ಯಾವತ್ತು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೇಳಿ..ಕೇಳಿ.. ನನ್ನದು ವೃಶ್ಚಿಕ್ ರಾಶಿ. ಹೀಗಾಗಿ ಕೊನೆಯವರೆಗೆ ನಾನು ಪ್ರೀತಿಗಾಗಿ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಆದರೆ ನಾನು ವಾಸ್ತವದಲ್ಲಿ ಬದುಕುವವಳು. ನನಗೆ ಯಾವ ಹಂತದಲ್ಲಿ ಗೆರೆ ಹಾಕಬೇಕು ಎನ್ನುವುದು ಗೊತ್ತಿದೆ ಎಂದು ಕೂಡ ಹೇಳಿದ್ದಾರೆ

ಮುಂದುವರೆದು ಸಾಮಾಜಿಕ ಜಾಲತಾಣದಿಂದ ಆಗುವ ಮಾನಸಿಕ ಹಿಂಸೆಯ ಬಗ್ಗೆಯೂ ಮಾತನಾಡಿರುವ ಮಲೈಕಾ, ಎಷ್ಟೇ ಋಣಾತ್ಮಕತೆ ನನ್ನನ್ನು ಸುತ್ತುವರೆದರೂ, ಅದು ನನ್ನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ ಎಂದಿದ್ದಾರೆ. ಅದು ನನ್ನ ಸುತ್ತ ಮುತ್ತ ಇರುವ ಜನರಿರಬಹುದು. ಕೆಲಸ ಮಾಡುವ ಸ್ಥಳದಲ್ಲಿ ಇರಬಹುದು, ಸೋಶಿಯಲ್ ಮೀಡಿಯಾದಲ್ಲಿಯೇ ಇರಬಹುದು. ಆ ನಕಾರಾತ್ಮಕ ಶಕ್ತಿಯನ್ನು ನಾನು ಅನುಭವಿಸಿದ ಕ್ಷಣವೇ ನಾನು ಅದೆಲ್ಲದರಿಂದ ದೂರ ಆಗುತ್ತೇನೆ ಎಂದಿರುವ ಮಲೈಕಾ, ಕಾಲ..ಕಾಲಕ್ಕೆ..ಕಾಲವೇ ನನಗೆ ಕಲಿಸಿದ ಪಾಠ ಇದು ಎಂದು ಹೇಳಿದ್ದಾರೆ.

malaika-arora-addresses-love-amid-breakup-rumors-with-arjun-kapoor-ill-never-give-up-but

ಇನ್ನೂ ಮೊದಲೆಲ್ಲ ಕೆಲವು ವಿಷಯಗಳು ಮತ್ತು ಟ್ರೋಲ್‌ಗಳು ನನ್ನ ಮೇಲೆ ಕೂಡ ಪರಿಣಾಮ ಬೀರುತ್ತಿದ್ದವು ಎಂದು ಹೇಳಿರುವ ಮಲೈಕಾ, ಇದೆಲ್ಲದರಿಂದ ನನಗೆ ನಿದ್ದೆಯೇ ಬರುತ್ತಿರಲಿಲ್ಲ ಎಂದಿದ್ದಾರೆ. ಹಲವಾರು ಬಾರಿ ನೊಂದು ಬೆಂದು ಕಣ್ಣೀರು ಹಾಕಿರುವುದಾಗಿಯೂ ಹೇಳಿದ್ದಾರೆ. ಆದರೆ.. ಆ ಕಣ್ಣೀರು ಕೇವಲ ನಾಲ್ಕು ಗೋಡೆಗಳ ನಡುವೆ ಅಷ್ಟೇ ಕಾಣಿಸುತ್ತೆ ಹೊರತು, ಸಾರ್ವಜನಿಕವಾಗಿ ನಾನು ಯಾವತ್ತು ಕಣ್ಣೀರು ಹಾಕಲಾರೆ ಎಂದಿದ್ದಾರೆ ಮಲೈಕಾ ಅರೋರಾ.

ಸದ್ಯಕ್ಕೆ ಮಲೈಕಾ ಅರೋರಾ ಅವರ ಈ ಮಾತು-ಮಂಥನ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟು ಹಾಕಿದೆ. ನಿಜವಾದ ಪ್ರೀತಿಯ ಕಲ್ಪನೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲಎಂದು ಮಲೈಕಾ ಹೇಳಿದ ಬೆನ್ನಲ್ಲಿಯೇ ಅರ್ಜುನ್ ಕಪೂರ್ ಕಥೆ ಏನಾಯಿತು ಅನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಅರ್ಜುನ್ ಕಪೂರ್ ಮೇಲೆ ಮಲೈಕಾ ಗೆ ನಿಜವಾದ ಪ್ರೇಮ ಇರಲಿಲ್ಲವಾ ಹಾಗಿದ್ದರೆ ಎಂಬ ಪ್ರಶ್ನೆಯೂ ಎದ್ದಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X