For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್: ಹಸಿರು ಬಣ್ಣದ ಉಡುಪು ತೊಟ್ಟು ಹಾಟ್ ಅವತಾರದಲ್ಲಿ ಮಿಂಚಿದ ನಟಿ ಮಲೈಕಾ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಹಾಟ್ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೋರಾ ಸದಾ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಕ್ಯಾಮರಾ ಮುಂದೆ ಹಾಟ್ ಆಗಿ ಕಾಣಿಸಿಕೊಳ್ಳುವ ಮಲೈಕಾರ ತರಹೇವಾರಿ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ.

  ಮಲೈಕಾ ಸದ್ಯ ರೂಮರ್ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದಾರೆ. ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ಮಲೈಕಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಫೋಟೋ ಸಖತ್ ವೈರಲ್ ಆಗಿದೆ. ಗಿಡಗಳ ಮಧ್ಯೆ ನಿಂತು ಹಸಿರು ಬಣ್ಣದ ಉಡುಪಿನಲ್ಲಿ ಹಾಟ್ ಅವತಾರತಾಳಿದ ಮಲೈಕಾ ಲುಕ್ ಪಡ್ಡೆಯುವಕರ ನಿದ್ದೆಗೆಡಿಸಿದೆ.

  ಮಲೈಕಾ ಅರೋರಾಗೆ ಹುಟ್ಟುಹಬ್ಬದ ಸಂಭ್ರಮ: 'ಫೂಲ್' ಎಂದ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ಮಲೈಕಾ ಅರೋರಾಗೆ ಹುಟ್ಟುಹಬ್ಬದ ಸಂಭ್ರಮ: 'ಫೂಲ್' ಎಂದ ಬಾಯ್ ಫ್ರೆಂಡ್ ಅರ್ಜುನ್ ಕಪೂರ್

  ಅಂದಹಾಗೆ ಮಲೈಕಾ ಫೋಟೋಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ಸ್ ಹರಿದುಬರುತ್ತಿದೆ. ಅನೇಕರು ಎಲೆಕೋಸು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮಲೈಕಾ ಫೋಟೋ, ಈ ಹಿಂದೆ ಕಿಯಾರಾ ಅಡ್ವಾನಿ ಮಾಡಿಸಿದ್ದ ಫೋಟೋಶೂಟ್ ಇದ್ದಹಾಗಿದೆ ಎಂದು ಹೇಳುತ್ತಿದ್ದಾರೆ. ಖ್ಯಾತ ಡಬ್ಬು ರತ್ನಾನಿ ಅವರ ಕ್ಯಾಲೆಂಡರ್ ಫೋಟೋಶೂಟ್ ನಲ್ಲಿ ಕಿಯಾರಾ ಎಲೆಯ ಮರೆಯಲ್ಲಿ ನಿಂತು ಕ್ಯಾಮಾರಾಗೆ ಪೋಸ್ ನೀಡಿದ್ದರು. ಮಲೈಕಾ ಫೋಟೋ ಸಹ ಹಾಗೆ ಇದು ಎಂದು ಹೇಳುತ್ತಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮಲೈಕಾ ಅನೇಕ ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಲೈಕಾ ಫೋಟೋಗಳನ್ನು ಶೇರ್ ಮಾಡುತ್ತಾ, ರೂಮರ್ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಸುತ್ತಾಗಿಕೊಂಡಿದ್ದಾರೆ.

  Malaika arora and Arjun Kapoor are in Goa Vacation, She shares photo from tropical paradise

  ಸದ್ಯ ಇಬ್ಬರು ಗೋವಾದಲ್ಲಿ ಕಾಲಕಳೆಯುತ್ತಿದ್ದು, ಹೊಸ ವರ್ಷದ ಸಂಭ್ರವನ್ನು ಅಲ್ಲೇ ಆಚರಿಸಲಿದ್ದಾರೆ. ನಟಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಪ್ರೀತಿಯ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಮೂರ್ನಾಲ್ಕು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಸದಾ ಜೊತೆಯಲ್ಲೇ ಸುತ್ತಾಡುವ ಈ ಜೋಡಿ ಈ ವರ್ಷ ಮದುವೆ ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಮದುವೆ ಬಗ್ಗೆ ಹೆಚ್ಚು ತಲೆಕೆಡೆಸಿಕೊಳ್ಳದ ಈ ಜೋಡಿ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.

  English summary
  Bollywood Actres Malaika arora and Arjun Kapoor are in Goa Vacation, She drops new pic from Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion