ತನಗಿಂತ 12 ವರ್ಷ ಕಿರಿಯ ಪ್ರಿಯಕರನ ಜೊತೆ ಮಲೈಕಾ ಹೊಸ ವರ್ಷ ಸಂಭ್ರಮ.!
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ರಿಂದ ವಿಚ್ಛೇದನ ಪಡೆದ ಮೇಲೆ ನಟಿ ಮಲೈಕಾ ಅರೋರ ಹೆಸರು ಹೆಚ್ಚಾಗಿ ತಳುಕು ಹಾಕಿಕೊಂಡಿದ್ದು ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಜೊತೆಗೆ.!
ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸು ಗುಸು ಬಾಲಿವುಡ್ ತುಂಬೆಲ್ಲಾ ಕೇಳಿಬಂದರೂ, ಅದಕ್ಕೆ ಸ್ಪಷ್ಟನೆ ಕೊಡುವ ಗೋಜಿಗೆ ಈ ಜೋಡಿ ಹೋಗಿರಲಿಲ್ಲ.
ಅಸಲಿಗೆ, ಅರ್ಜುನ್ ಕಪೂರ್ ಜೊತೆಗಿನ ಸಂಬಂಧದಿಂದಾಗಿಯೇ ಅರ್ಬಾಜ್ ಖಾನ್ ರಿಂದ ಮಲೈಕಾ ವಿಚ್ಛೇದನ ಪಡೆದರು ಅಂತ ಹೇಳುವವರೂ ಇದ್ದಾರೆ. ಯಾರು ಏನೇ ಅಂದರೂ ಕೇರ್ ಮಾಡದ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಸದ್ಯ ಪ್ರೀತಿಯ ನಶೆಯಲ್ಲಿ ತೇಲುತ್ತಿದ್ದಾರೆ.
ಪ್ರೇಮ ಪಾಶದಲ್ಲಿ ಸಿಲುಕಿರುವ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಹೊಸ ವರ್ಷವನ್ನು ರೊಮ್ಯಾಂಟಿಕ್ ಆಗಿ ಬರಮಾಡಿಕೊಂಡಿದ್ದಾರೆ. ಮುಂದೆ ಓದಿರಿ...

ಅರ್ಜುನ್ ಕೆನ್ನೆಗೆ ಕಿಸ್ ಕೊಟ್ಟ ಮಲೈಕಾ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿರುವ ಫೋಟೋ ಇದೇ.! ನಟ ಅರ್ಜುನ್ ಕಪೂರ್ ಕೆನ್ನೆಗೆ ಮಲೈಕಾ ಅರೋರ ಮುತ್ತು ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಸಲಿಗೆ ಈ ಫೋಟೋವನ್ನ ಶೇರ್ ಮಾಡಿರುವುದು ಸ್ವತಃ ಮಲೈಕಾ ಅರೋರ. ''ಸೂರ್ಯ, ನಕ್ಷತ್ರ, ಬೆಳಕು, ಸಂತೋಷ 2020'' ಎಂದು ಬರೆದುಕೊಂಡು ಅರ್ಜುನ್ ಕಪೂರ್ ಗೆ ಮುತ್ತು ಕೊಟ್ಟಿರುವ ಫೋಟೋವನ್ನ ಹೊಸ ವರ್ಷದ ಪ್ರಯುಕ್ತ ಇನ್ಸ್ಟಾಗ್ರಾಮ್ ನಲ್ಲಿ ಮಲೈಕಾ ಅರೋರ ಹಂಚಿಕೊಂಡಿದ್ದಾರೆ.

ಪ್ರೇಮ ಪಕ್ಷಿಗಳು
ಕೆಲ ಸೆಲೆಬ್ರಿಟಿಗಳು ಪಾರ್ಟಿ ಮಾಡಿ ಹೊಸ ವರ್ಷವನ್ನು ಬರಮಾಡಿಕೊಂಡರೆ, ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರ ರೊಮ್ಯಾಂಟಿಕ್ ಆಗಿ 2020 ವೆಲ್ ಕಮ್ ಮಾಡಿದ್ದಾರೆ. ಇವರಿಬ್ಬರು ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

12 ವರ್ಷ ಗ್ಯಾಪ್.!
ನಟಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ತನಗಿಂತ 12 ವರ್ಷ ಕಿರಿಯ ಅರ್ಜುನ್ ಕಪೂರ್ ಜೊತೆಗೆ ನಟಿ ಮಲೈಕಾ ಅರೋರ ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ವರ್ಷದ ಅರ್ಜುನ್ ಕಪೂರ್ ಹುಟ್ಟುಹಬ್ಬದಂದು ಈ ವಿಚಾರವನ್ನು ಮಲೈಕಾ ಅರೋರ ಬಹಿರಂಗ ಪಡಿಸಿದ್ದರು.

19 ವರ್ಷಗಳ ಸುದೀರ್ಘ ದಾಂಪತ್ಯ
46 ವರ್ಷ ವಯಸ್ಸಿನ ಮಲೈಕಾ ಅರೋರ 1998 ರಲ್ಲಿ ಅರ್ಬಾಜ್ ಖಾನ್ ರನ್ನ ವಿವಾಹವಾಗಿದ್ದರು. 19 ವರ್ಷಗಳ ಕಾಲ ದಾಂಪತ್ಯ ನಡೆಸಿದ ಅರ್ಬಾಜ್ ಖಾನ್-ಮಲೈಕಾ ಅರೋರ 2017 ರಲ್ಲಿ ಡಿವೋರ್ಸ್ ಪಡೆದರು. ಈ ದಂಪತಿಗೆ 17 ವರ್ಷ ವಯಸ್ಸಿನ ಅರ್ಹಾನ್ ಎಂಬ ಪುತ್ರನಿದ್ದಾನೆ.


Click it and Unblock the Notifications











