ಬರೀ ಡವ್ವು ..ಬರೀ ಡವ್ವು ; ರಸ್ತೆಯ ಮೇಲೆ ಬಿದ್ದ ಕಸ ಎತ್ತಿದ ಮಲೈಕಾ ಅರೋರಾ..!

ಮೊಸರಲ್ಲಿ ಕಲ್ಲು ಹುಡುಕುವ ಕಾಲ ಇದು. ಇಂತಹ ಕಾಲದಲ್ಲಿ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಜನ ನೋಡುವುದು ಅನುಮಾನದ ದೃ‍ಷ್ಟಿಯಿಂದನೇ. ಇದಕ್ಕೆ ಅತ್ಯುತ್ತಮ ಉದಾಹರಣೆ ಮಲೈಕಾ ಅರೋರಾ ಮಾಡಿದ ಕೆಲಸ ಮತ್ತು ಅದರ ಸುತ್ತ ಮುತ್ತ ನಡೆಯುತ್ತಿರುವ ಚರ್ಚೆ

ಹೌದು, ವಯಸ್ಸು ಐವತ್ತಾದರೂ ಇವತ್ತು ಕೂಡ ಹದಿ ಹರೆಯದ ಯುವತಿಯರನ್ನ ನಾಚಿಸುವಂತೆ ತನ್ನ ದೇಹ ಸಿರಿಯನ್ನ ಕಾಪಾಡಿಕೊಂಡಿರುವ ಮಲೈಕಾ ಅರೋರಾ, ಮೊನ್ನೆ ಎಂದಿನಂತೆ ದೇಹ ದಂಡಿಸಲು ಜಿಮ್‌ಗೆ ತೆರಳಿದ್ದರು. ಇನ್ನೂ ನಿಮಗೆ ಗೊತ್ತು.. ಸ್ವಚ್ಛ ಭಾರತ ಅಭಿಯಾನ ಎಷ್ಟೇ ಮಾಡಿದರೂ, ನಮ್ಮ ಜನ ಸ್ವಚ್ಛತೆಗೆ ಆಧ್ಯತೆ ಕೊಡಲ್ಲ. ಬದಲಿಗೆ ಎಲ್ಲೆಂದರಲ್ಲಿ ಕಸ ಬೀಸಾಕ್ತಾನೇ ಇರ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಲೈಕಾ ಜಿಮ್‌ ಗೆ ತೆರಳುವ ದಾರಿಯಲ್ಲಿ ಕೆಲವರು ಕಸವನ್ನ ಎಸೆದು ಹೋಗಿದ್ದರು. ಇದನ್ನ ಗಮನಿಸಿದ ಮಲೈಕಾ ತಮ್ಮ ಕೋಮಲ ಕೈಗಳಿಂದ ಕಸವನ್ನ ಎತ್ತಿ ಅಲ್ಲಿಯೇ ಸಮೀಪದಲ್ಲಿದ್ದ ಕಸದ ಬುಟ್ಟಿಗೆ ಹಾಕಿದರು.

malaika-arora-brutally-trolled-for-picking-up-garbage-from-the-road

ಇನ್ನೂ.. ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿ ಅನೇಕ ವರ್ಷಗಳೇ ಆಗಿವೆ. ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಬಾಲಿವುಡ್ ಕೊಳ್ಳಿಯನ್ನಿಟ್ಟಿದೆ. ಇದಕ್ಕೆ ಮತ್ತೊಂದು ಪುರಾವೆ ಎಂಬಂತೆ, ಮಲೈಕಾ ಅವರ ಹಂಸನಡಿಗೆಯನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಜಿಮ್‌ ಆಚೆ ಕ್ಯಾಮರಾ ಮ್ಯಾನ್‌ಗಳ ದೊಡ್ಡ ದಂಡು ಇತ್ತು. ಈ ದಂಡು ಮಲೈಕಾ ಕಸ ಹೆಕ್ಕಿ ಕಸದ ಬುಟ್ಟಿಗೆ ಹಾಕುವ ದೃಶ್ಯಾವಳಿಯನ್ನ ಸೆರೆ ಹಿಡಿಯಿತು. ಆ ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನೂ ಹರಿಬಿಡಲಾಯಿತು. ಚರ್ಚೆ ಶುರುವಾಗಿದ್ದು ಇಲ್ಲಿಂದನೇ.

ಮಲೈಕಾ ಕಸ ಎತ್ತುವ ಈ ವಿಡಿಯೋವನ್ನ ನೋಡಿದ ಅನೇಕರು, ತನ್ನ ಸುತ್ತ-ಮುತ್ತ ಕ್ಯಾಮರಾಗಳಿರುವುದು ಮಲೈಕಾಗೆ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ಈ ನಾಟಕ ಎಂಬ ಅಭಿಪ್ರಾಯವನ್ನ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಮಲೈಕಾ ಅರೋರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಯ್ಯೋ ಸಾಕು ಬಿಡಮ್ಮ ಇನ್ನೆಷ್ಟು ಡವ್ವು ಮಾಡ್ತೀರಾ ಎಂದು ಕಾಲೆಳೆಯುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಗೇಟ್ ಬಳಿ ಕಸ ನೋಡಿದ ಕೂಡಲೇ ಹೆಕ್ಕಲ್ಲೋ ಬೇಡವೋ ಎಂದು ಅರೆಕ್ಷಣ ಮಲೈಕಾ ಅರೋರಾ ಯೋಚಿಸಿದಂತಿದೆ. ನಂತರ ಆ ಕಸವನ್ನು ಬಿದ್ದಲ್ಲಿಯೇ ಹೆಕ್ಕುವ ಬದಲು ಕಾಲಿನಿಂದ ಒಟ್ಟುಗೂಡಿಸಿಕೊಂಡು ಪೋಸ್​ ಕೊಡುವವರ ರೀತಿಯಲ್ಲಿಯೇ ಮಲೈಕಾ ಕಸವನ್ನು ಹೆಕ್ಕಿದ್ದಾರೆ.

ಹಾಗಂಥ ಮಲೈಕಾ ಅರೋರಾ ಅವರ ಈ ನಡೆಗೆ ಎಲ್ಲರೂ ಕಿಡಿ ಕಾರುತ್ತಿದ್ದಾರೆ ಅಂತಲ್ಲ. ಯಾಕೆಂದರೆ ಅನೇಕರು ಮಲೈಕಾ ಅರೋರಾ ಅವರ ಈ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ. ಮನಸಾರೆ ಮಲೈಕಾ ಅರೋರಾ ಅವರನ್ನ ಹೊಗಳಿದ್ದಾರೆ. ಮಲೈಕಾ ಅರೋರಾ ಬಾಲಿವುಡ್‌ನ ಮಾದರಿ ಹೆಣ್ಣು ಎಂದೆಲ್ಲ ಅಭಿಪ್ರಾಯವನ್ನೂ ಹೊರ ಹಾಕುತ್ತಿದ್ದಾರೆ. ಈ ಎಲ್ಲ ಚರ್ಚೆಯ ಪರಿಣಾಮ ಮಲೈಕಾ ಅರೋರಾ ಅವರ ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನೂ ವಿಡಿಯೋ ಪಡೆದಿದೆ.

More from Filmibeat

English summary
Bollywood Actress Malaika Arora Is Being Criticized For Her Act Of Picking Up Trash From The Road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X