For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತರ ದಿನಾಚರಣೆಗೆ ಗೆಳೆಯ ಅರ್ಜುನ್‌ಗೆ ಸಖತ್ ಸರ್ಪ್ರೈಸ್ ನೀಡಿದ ಮಲೈಕಾ

  |

  ಬಾಲಿವುಡ್ ಖ್ಯಾತ ನಟಿ, ಡಾನ್ಸರ್, ಮಾಡೆಲ್ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ನಡುವಿನ ಪ್ರೀತಿ, ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಸದಾ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇರುತ್ತಾರೆ.

  ಸ್ನೇಹಿತರ ದಿನಾಚರಣೆಯ ವಿಶೇಷವಾಗಿ ಮಲೈಕಾ ಗೆಳೆಯ ಅರ್ಜುನ್ ಕಪೂರ್‌ಗಾಗಿ ಸಖತ್ ಸರ್ಪ್ರೈಸ್ ನೀಡಿದ್ದಾರೆ. ನಿನ್ನೆ ಭಾನುವಾರ ಬಾಲಿವುಡ್ ಪ್ರೇಮ ಪಕ್ಷಿಗಳಾದ ಮಲೈಕಾ ಮತ್ತು ಅರ್ಜುನ್ ಇಬ್ಬರೂ ಒಟ್ಟಿಗೆ ಸಮಯ ಕಳೆದಿದ್ದು, ಗೆಳಯನಿಗಾಗಿ ರುಚಿ ರುಚಿಯಾದ ಅಡುಗೆಯನ್ನು ಮಾಡಿ ಬಡಿಸಿದ್ದಾರೆ. ಅರ್ಜುನ್ ಕಪೂರ್‌ಗಾಗಿ ಮಾಡಿರುವ ವಿಶೇಷ ಅಡುಗೆಯ ಫೋಟೋಗಳನ್ನು ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮಲೈಕಾ ಆರೋರಾಗೆ ಮೊದಲ ಪತಿಯಿಂದ ಸಿಕ್ತು ವಿಶೇಷ ಉಡುಗೊರೆ; ಏನದು?ಮಲೈಕಾ ಆರೋರಾಗೆ ಮೊದಲ ಪತಿಯಿಂದ ಸಿಕ್ತು ವಿಶೇಷ ಉಡುಗೊರೆ; ಏನದು?

  ಅಡುಗೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟಿರುವ ಒಂದಿಷ್ಟು ಪೋಟೋಗಳನ್ನು ಮಲೈಕಾ ಶೇರ್ ಮಾಡಿದ್ದಾರೆ. ಮಲೈಕಾ ಫೋಟೋವನ್ನು ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಸಹ ಹಂಚಿಕೊಂಡಿದ್ದಾರೆ. ತಾನು ಮಾಡಿರುವ ಅಡುಗೆಯನ್ನು ಶೇರ್ ಮಾಡಿ ಮಲೈಕಾ 'ಪಾಸ್ತ ಮತ್ತು ತಯಾಕರಕರು' ಎಂದು ಬರೆದುಕೊಂಡಿದ್ದಾರೆ.

  ಮಲೈಕಾ ಮನೆಯಲ್ಲಿರುವ ಅರ್ಜುನ್ ಫೋಟೋವನ್ನು ಶೇರ್ ಮಾಡಿ, "ನನ್ನ ಭಾನುವಾರದ ನೋಟ" ಎಂದು ಹೇಳಿ ಹಾರ್ಟ್ ಇಮೋಜಿ ಹಾಕಿದ್ದಾರೆ. ಸ್ನೇಹಿತರ ದಿನಾಚರಣೆಯನ್ನು ಒಟ್ಟಿಗೆ ಆಚರಣೆ ಮಾಡಿರುವ ಬಾಲಿವುಡ್ ಪ್ರೇಮ ಪಕ್ಷಿಗಳ ಫೋಟೋಗಳೀಗ ಎಲ್ಲರ ಗಮನ ಸೆಳೆಯುತ್ತಿವೆ. 'ಇಟಲಿಗೆ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲೇ ಇಟಲಿ ತಿನಿಸು' ಎಂದು ಹೇಳಿದ್ದಾರೆ. ಅನೇಕ ಫೋಟೋಗಳನ್ನು ಶೇರ್ ಮಾಡಿರುವ ಮಲೈಕಾ ಗೆಳೆಯ ಅರ್ಜುನ್ ಗಾಗಿ ತರಹೇವಾರಿ ಅಡುಗೆ ಮಾಡಿರುವುದು ಗೊತ್ತಾಗುತ್ತಿದೆ.

  ಅಂದಹಾಗೆ ಅರ್ಜುನ್ ಮತ್ತು ಮಲೈಕಾ ಇಬ್ಬರು ಅನೇಕ ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ಇಬ್ಬರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಅರ್ಜುನ್ ಕಪೂರ್‌ಗಿಂತ ತುಂಬಾ ದೊಡ್ಡವರಾದ ಮಲೈಕಾ ಜೊತೆ ಪ್ರೀತಿಯಲ್ಲಿರುವ ವಿಚಾರ ಟ್ರೋಲ್ ಪೇಜ್ ಗಳಿಗೆ ಆಗಾಗಾ ಆಹಾರವಾಗುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆಕೊಡಿಸಿಕೊಳ್ಳದ ಈ ಜೋಡಿ ತುಂಬಾ ಸಂತೋಷವಾಗಿ ಜೀವನ ಕಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ ನಟ ಅರ್ಜುನ್ ಕಪೂರ್ ಗೆಳತಿ ಮಲೈಕಾ ಅರೋರ ಮನೆ ಸಮೀಪದಲ್ಲೇ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಮಲೈಕಾ ಮನೆ ಸಮೀಪದಲ್ಲೇ ಅರ್ಜುನ್ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ.

   Malaika Arora cooks pasta for Arjun Kapoor at her home On Friendship Day

  ಇನ್ನು ನಟಿ ಮಲೈಕಾ 1998ರಲ್ಲಿ ಅರ್ಬಾಜ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. 18 ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿ 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವ ಮೂಲಕ ಇಡೀ ಬಾಲಿವುಡ್‌ಗೆ ಶಾಕ್ ನೀಡಿದ್ದರು. 2017ರಲ್ಲಿ ಇಬ್ಬರು ಬೇರೆ ಬೇರೆ ಆದರು. ಈ ದಂಪತಿಗೆ ಅರ್ಹನ್ ಎನ್ನುವ ಮಗನಿದ್ದಾನೆ.

  ಅರ್ಬಾಜ್ ಖಾನ್ ರಿಂದ ದೂರ ಆದರೂ ಮಲೈಕಾ ಮೊದಲ ಪತಿ ಜೊತೆಗೆ ಉತ್ತಮ ಸ್ನೇಹ ಉಳಿಸಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚಿಗಷ್ಟೆ ಅರ್ಬಾಜ್ ಕಳುಹಿಸಿರುವ ವಿಶೇಷ ಗಿಫ್ಟ್. ಮಾವಿನ ಹಣ್ಣಿನ ಸೀಸನ್ ಪ್ರಾರಂಭವಾದ ಸಮಯದಲ್ಲಿ ಅರ್ಬಾಜ್ ತನ್ನ ಮೊದಲ ಪತ್ನಿಗಾಗಿ ಒಂದು ಬಾಕ್ಸ್ ಮಾವಿನ ಹಣ್ಣನ್ನು ಗಿಫ್ಟ್ ಕಳುಹಿಸಿ ಸರ್ಪ್ರೈಸ್ ನೀಡಿದ್ದರು.

  ಗಿಫ್ಟ್ ಶೇರ್ ಮಾಡಿ ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಸಂತಸ ವ್ಯಕ್ತಪಡಿಸಿದ್ದರು. ಮಾವಿನ ಹಣ್ಣನ್ನು ಉಡುಗೊರೆ ಕೊಟ್ಟ ಅರ್ಬಾಜ್ ಗೆ ಧನ್ಯವಾದ ಹೇಳಿದ್ದರು.

  ವಿಚ್ಛೇದನದ ಬಳಿಕ ಮಲೈಕಾ ಬಾಲಿವುಡ್ ನಟ ಅರ್ಜನ್ ಕಪೂರ್ ಜೊತೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಇಬ್ಬರ ಪ್ರೀತಿ-ಪ್ರೇಮದ ವಿಚಾರ ಬಹಿರಂಗವಾಗಿದ್ದರೂ ಸಹ ಉತ್ತಮ ಸ್ನೇಹಿತರಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮಲೈಕಾ ಮತ್ತು ಅರ್ಜುನ್ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯೂ ಆಗಾಗ ಕೇಳಿಬರುತ್ತಿರುತ್ತೆ. ಆದರೆ ಇಬ್ಬರು ಆರಾಮಾಗಿ ಓಡಾಡಿಕೊಂಡಿದ್ದಾರೆ.

  English summary
  Actress Malaika Arora cooks pasta for Arjun Kapoor at her home On Friendship Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X