51ನೇ ವಯಸ್ಸಿನಲ್ಲಿ 47ರ ಹರೆಯದ ಖ್ಯಾತ ಕ್ರಿಕೆಟರ್‌ಗೆ ಮನಸೋತ ಮಲೈಕಾ ಅರೋರಾ, ಎಲ್ಲ ಐಪಿಎಲ್ ಮಹಿಮೆ..!

ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಇದಕ್ಕೆ ಮಲೈಕಾ ಅರೋರಾ ಸದ್ಯದ ಉದಾಹರಣೆ.

ಹೌದು, ಅರ್ಜುನ್ ಕಪೂರ್‌ಗಾಗಿ ಅರ್ಬಾಜ್ ಖಾನ್‌ಗೆ ತಲಾಖ್ ನೀಡಿದ್ದ ಮಲೈಕಾ, ಈಗ ಅರ್ಜುನ್ ಕಪೂರ್ ಜೊತೆಯೂ ಇಲ್ಲ. ಇದು ಎಲ್ಲರಿಗೆ ಗೊತ್ತಿರುವಂಥದ್ದೇ. ಸದ್ಯದ ಸಮಾಚಾರ ಏನೆಂದರೆ ಅರ್ಜುನ್ ಕಪೂರ್ ಅವರಿಂದ ದೂರವಾದ ಮಲೈಕಾ ಅರೋರಾ ಸದ್ಯ ಶ್ರೀಲಂಕಾ ಕ್ರಿಕೆಟ್ ತಂಡದ ದಂತಕಥೆ ಕುಮಾರ್ ಸಂಗಕ್ಕಾರಗೆ ಮನ ಸೋತಿದ್ದಾರಾ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ಈಗ ಶುರುವಾಗಿದೆ. ಇದಕ್ಕೆ ಮುನ್ನುಡಿ ಬರೆದಿದ್ದು ನಿನ್ನೆ ನಡೆದ ಐಪಿಎಲ್ ಪಂದ್ಯ ಅನ್ನುವುದು ವಿಶೇಷ.

Malaika Arora fuels dating rumours as she enjoys an IPL match with cricketer Kumar Sangakkara

ಹೌದು, ಅಸಲಿಗೆ ಕುಮಾರ್ ಸಂಗಕ್ಕಾರ ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಕೋಚ್. ಇವರ ಜಾಗಕ್ಕೆ ಈಗ ರಾಹುಲ್ ದ್ರಾವಿಡ್ ಬಂದಿದ್ದಾರೆ. ಸದ್ಯ ಆರ್ ಆರ್ ತಂಡದ ನಿರ್ದೇಶಕ ಹುದ್ದೆಯನ್ನು ಕುಮಾರ್ ಸಂಗಕ್ಕಾರ ಅಲಂಕರಿಸಿದ್ದಾರೆ. ಹೀಗಾಗಿ ತಮ್ಮ ತಂಡವನ್ನು ಹುರಿದುಂಬಿಸಲು ಕುಮಾರ್ ಸಂಗಕ್ಕಾರ ಮೈದಾನದಲ್ಲಿ ಇದ್ದರು. ಇದೇ ಸಮಯದಲ್ಲಿ ಕುಮಾರ್ ಸಂಗಕ್ಕಾರ ಪಕ್ಕದಲ್ಲಿಯೇ ರಾಜಸ್ಥಾನ್ ರಾಯಲ್ಸ್ ತಂಡದ ಜೆರ್ಸಿಯನ್ನು ಹಾಕಿಕೊಂಡು ಮಲೈಕಾ ಅರೋರಾ ಕೂಡ ಕುಂತಿದ್ದರು.

ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದೆ. ಯಾಕೆಂದರೆ ಮಲೈಕಾ ಐಪಿಎಲ್ ಪಂದ್ಯವನ್ನು ನೋಡಲೇಬೇಕೆಂದು ಬಯಸಿದ್ದರೆ ಮುಂಬೈನಲ್ಲಿ ನಡೆಯುವ ಬೇರೆ ಪಂದ್ಯಕ್ಕೆ ಹೋಗಬಹುದಿತ್ತು. ಆದರೆ ಮಲೈಕಾ ಐಪಿಎಲ್‌ನ ಮ್ಯಾಚ್ ನೋಡಲು ಗುವಾಹಟಿವರೆಗೆ ಬಂದಿದ್ದಾರೆ. ಸಾಲದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಿದ್ದಾರೆ. ಜೆರ್ಸಿ ಹಾಕಿಕೊಂಡಿದ್ದಾರೆ. ಹೀಗಾಗಿಯೇ ಅನುಮಾನಗೊಂಡಿರುವ ಸೋಶಿಯಲ್ ಮೀಡಿಯಾದ ಪ್ರವೀಣರು ಸದ್ಯ ಇವರ ಇಬ್ಬರ ಸಂಬಂಧದ ಕುರಿತು ತನಿಖೆ ಶುರು ಮಾಡಿದ್ದಾರೆ. ಇಬ್ಬರು ಪ್ರೀತಿಸುತ್ತಿದ್ದೀರಾ ಎಂದು ಪ್ರಶ್ನೆಯನ್ನು ಕೇಳಲು ಶುರು ಮಾಡಿದ್ದಾರೆ.

ಅಂದ್ಹಾಗೇ ಕುಮಾರ್ ಸಂಗಕ್ಕಾರಾಗೆ ಈಗ 47ರ ಹರೆಯ. ಮಲೈಕಾ ಅರೋರಾಗೆ ಈಗ 51ರ ಪ್ರಾಯ. ಈ ಹಿಂದೆ ಮಲೈಕಾ ಅವರ ಮಾಜಿ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಮತ್ತು ಮಲೈಕಾ ನಡುವೆ 12 ವರ್ಷಗಳ ಅಂತರ ಇತ್ತು. ಇನ್ನು, ಕುಮಾರ್ ಸಂಗಕ್ಕಾರ ವಿವಾಹಿತ. ಯೆಹಾಲಿ ಸಂಗಕ್ಕಾರ ಅವರನ್ನು ಮದುವೆಯಾಗಿರುವ ಕುಮಾರ ಸಂಗಕ್ಕಾರಗೆ ಎರಡು ಮಕ್ಕಳಿವೆ. ಹೀಗಾಗಿ ಇಬ್ಬರ ನಡುವೆ ಪ್ರೇಮ ಅಲ್ಲ ಬದಲಿಗೆ ಸ್ನೇಹ ಇದ್ದರು ಇರಬಹುದು ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಸದ್ಯ ಸುದ್ದಿಯಲ್ಲಿರುವ ಮಲೈಕಾ ಅರೋರಾ ಈ ಹಿಂದೆ ಅರ್ಜುನ್ ಕಪೂರ್ ಅವರಿಂದ ದೂರವಾದ ನಂತರ ವೃತ್ತಿಯಲ್ಲಿ ಸ್ಟೈಲಿಸ್ಟ್. ಫ್ಯಾಷನ್ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ರಾಹುಲ್ ವಿಜಯ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪೂರಕವಾಗಿ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎ.ಪಿ. ದಿಲ್ಲೋನ್ ಅವರ ಸಂಗೀತ ಸಂಜೆಗೆ ರಾಹುಲ್ ವಿಜಯ್ ಜೊತೆ ಮಲೈಕಾ ಅರೋರಾ ಹೋಗಿದ್ದರು. ಹಾಡು ಕೇಳುತ್ತಾ ಕುಣಿದಿದ್ದರು. ಸಖತ್ ಎಂಜಾಯ್ ಮಾಡಿದ್ದರು.

ಒಟ್ನಲ್ಲಿ ಸದ್ಯ ಮಲೈಕಾ ಅರೋರಾ ಮತ್ತು ಕುಮಾರ್ ಸಂಗಕ್ಕಾರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಹಬ್ಬಿದೆ. ಇಬ್ಬರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಸಂಬಂಧದ ಕುರಿತು ಇಬ್ಬರು ಸ್ಪಷ್ಟನೆಯನ್ನು ನೀಡುತ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ. ಇಬ್ಬರ ಮೇಲೀಗ ಅನೇಕರ ಕಣ್ಣಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X