ಅರ್ಜುನ್ ಕಪೂರ್ ಅರೆ ಬೆತ್ತಲೆ ಫೋಟೊ ಹಂಚಿದ ಮಲೈಕಾಗೆ ನೆಟ್ಟಿಗರಿಂದ ತರಾಟೆ: ಶಾಂತಿ ಎಂದ ನಟ
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬಾಲಿವುಡ್‌ನ ಹಾಟೆಸ್ಟ್ ಜೋಡಿ. ಈ ಅಪರೂಪದ ಲವ್‌ಸ್ಟೋರಿಗೆ ಬಾಲಿವುಡ್ ಮಂದಿನೂ ಫಿದಾ ಆಗಿದ್ದಾರೆ. ಇಬ್ಬರದ್ದೂ ವಿವಾದಾತ್ಮಕ ಪ್ರೇಮಕಥೆಯಾಗಿದ್ದರೂ, ಯಾವುದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಂದಾಸ್ ಆಗಿ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ.
ಇಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕೆ ಆಗಾಗ ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರನ್ನೂ ನೆಟ್ಟಿಗರು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸೆಡ್ಡು ಹೊಡೆದು ಇಬ್ಬರೂ ಮುಂದಕ್ಕೆ ಸಾಗುತ್ತಿದ್ದಾರೆ.
ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನು ಅರ್ಜುನ್ ಕಪೂರ್ ಹಾಗೂ ಮಲೈಕಾ ಇಬ್ಬರೂ ಆಗಾಗ ಪ್ರೂವ್ ಮಾಡುತ್ತಲೇ ಇದ್ದಾರೆ. ಅದೆಷ್ಟೇ ಬಾರಿ ಟ್ರೋಲ್ ಆದಾಗಲೂ ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದಾರೆ.

ಇತ್ತೀಚೆಗೆ ಮಲೈಕಾ ಅರೋರಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೊವನ್ನು ಶೇರ್ ಮಾಡಿದ್ದರು. ಆ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಗಾಗಿದ್ದವು. ಮಲೈಕಾ ಕುಡಿದ ಮತ್ತಿನಲ್ಲಿ ಈ ಪೋಟೊಗಳನ್ನು ಶೇರ್ ಮಾಡಿದ್ದಾರೆ ಅಂತೆಲ್ಲ ಕಮೆಂಟ್ ಮಾಡಿದ್ದರು. ಮಲೈಕಾ ಹೆವಿ ಟ್ರೋಲ್ ಆಗುತ್ತಿದ್ದಂತೆ ಅರ್ಜುನ್ ಕಪೂರ್ ಬೆಂಬಲಕ್ಕೆ ಬಂದಿದ್ದಾರೆ.
ಆ ಫೋಟೊದಲ್ಲಿ ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲ. ಮೈ ಮೇಲೆ ಕೇವಲ ಒಂದು ದಿಂಬು ಇದೆ. ಅದನ್ನು ಕಂಡು ನೆಟ್ಟಿಗರು ಕಿಡಿ ಕಾರಿದ್ದರು. ಅಲ್ಲದೆ ಮಲೈಕಾ "ನನ್ನ ಲೇಜಿ ಹುಡುಗ" ಎಂದು ಬರೆದುಕೊಂಡಿದ್ದರು. ಕೆಲವು ಈ ಫೋಟೊ ನೋಡಿ "ನಾಚಿಕೆ ಆಗ್ಬೇಕು" ಅಂತ ಕಮೆಂಟ್ ಮಾಡಿದ್ದರು. ಇದಕ್ಕೆ ಅರ್ಜುನ್ ಕಪೂರ್ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
ಅರ್ಜುನ್ ಕಪೂರ್ ತನ್ನ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ " ಗಮನವಿಡುವುದಕ್ಕಿಂತ ಮೊದಲು ಶಾಂತಿಯನ್ನು ಆಯ್ಕೆ ಮಾಡಿಕೊಳ್ಳಿ" ಎಂದು ಬರೆದು ಪೋಸ್ಟ್ ಮಾಡಿದ್ದರು. ಅದೇ ಫೋಟೊವನ್ನು ಮತ್ತೆ ಪೋಸ್ಟ್ ಮಾಡಿ, ಬಿಳಿ ಹೃದಯದ ಎಮೋಜಿಯನ್ನು ಹಾಕಿದ್ದರು.

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಹಲವು ವರ್ಷಗಳಿಂದ ಒಟ್ಟಿಗೆ ಇದ್ದಾರೆ. 2019ರಂದು ಇಬ್ಬರೂ ಅಧಿಕೃತವಾಗಿ ಜೊತೆಗಿದ್ದೇವೆ ಎಂದು ಅನೌನ್ಸ್ ಮಾಡಿದ್ದರು. ಇಬ್ಬರ ನಡುವೆ ಏನೋ ಸಮಸ್ಯೆಯಿದೆ ಎಂದು ಎಷ್ಟೋ ಬಾರಿ ಗಾಳಿ ಸುದ್ದಿಗಳು ಹರಿದಾಡಿದ್ದವು. ಆದರೂ, ನಾವಿಬ್ಬರು ಎಷ್ಟು ಸ್ಟ್ರಾಂಗ್ ಆಗಿದ್ದೇವೆ ಎಂದು ತೋರಿಸಿದ್ದರು.
ಒಂದು ಸಂದರ್ಶನದಲ್ಲಿ ಮಲೈಕಾ ಅರೋರಾ ತಮ್ಮ ಸಂಬಂಧದ ಬಗ್ಗೆ ಮಾತಾಡಿದ್ದರು. "ನಾವು ರೆಡಿಯಿದ್ದೇವೆ. ನಾನು ಅರ್ಜುನ್ ಕಪೂರ್ ಜೊತೆ ಸಂಸಾರ ನಡೆಸುವುದಕ್ಕೆ ರೆಡಿಯಾಗಿದ್ದೇನೆ. ನಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಯಾಕಂದ್ರೆ, ನಾವು ಈಗ ಅದಕ್ಕೆ ರೆಡಿಯಾಗಿದ್ದೇವೆ" ಎಂದು ಹೇಳಿದ್ದರು.


Click it and Unblock the Notifications











