»   » ಮಾಡೆಲ್ ಆಗಿದ್ದ ದೀಪಿಕಾ ಪಡುಕೋಣೆ 'No.1' ನಾಯಕಿಯಾಗಲು 'ಆ' ನಟಿ ಕಾರಣ.!

ಮಾಡೆಲ್ ಆಗಿದ್ದ ದೀಪಿಕಾ ಪಡುಕೋಣೆ 'No.1' ನಾಯಕಿಯಾಗಲು 'ಆ' ನಟಿ ಕಾರಣ.!

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಕೇವಲ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಸಂಚಲನ ಸೃಷ್ಟಿಸಿರುವ ನಂಬರ್ 1 ನಟಿ. ಆದ್ರೆ, ದೀಪಿಕಾ ಪಡುಕೋಣೆಗೆ ಈ ಯಶಸ್ಸು ಸುಲಭವಾಗಿ ಬಂದಿದ್ದಲ್ಲ.

ಈಕೆ ಮುಳ್ಳಿನ ರಥದಲ್ಲಿ ವಿಜಯಯಾತ್ರೆ ಮಾಡಿಕೊಂಡು ಬಂದು ಜಗತ್ತಿನ ಗಮನ ಸೆಳೆದಿದ್ದಾಳೆ. ಎಲ್ಲರಿಗೂ ಗೊತ್ತಿರುವ ಹಾಗೆ ದೀಪಿಕಾ ಕನ್ನಡದ 'ಐಶ್ವರ್ಯ' ಚಿತ್ರದ ಮೂಲಕ ಸಿನಿ ಜೀವನ ಆರಂಭಿಸಿ, ನಂತರ ಶಾರೂಖ್ ಖಾನ್ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದರು.

ಆದ್ರೆ, ಯಾರಿಗೂ ಗೊತ್ತಿರದ ಸಂಗತಿ ಇಂದು ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ. ಅದೇನಪ್ಪಾ ಅಂದ್ರೆ, ದೀಪಿಕಾ ಪಡುಕೋಣೆ ಇಂದು ನಂಬರ್ 1 ನಟಿಯಾಗುವುದಕ್ಕೆ ಅಂದು ಅವಕಾಶ ಮಾಡಿಕೊಟ್ಟ ನಟಿಯೊಬ್ಬರು ಕಾರಣವಂತೆ. ಯಾರದು? ಮುಂದೆ ಓದಿ......

'ಓಂ ಶಾಂತಿ ಓಂ' ಚಿತ್ರಕ್ಕೆ ನಾಯಕಿ ಬೇಕಾಗಿತ್ತು

'ಓಂ ಶಾಂತಿ ಓಂ' ಚಿತ್ರದಲ್ಲಿ ನಟ ಶಾರೂಖ್ ಖಾನ್ ಎದುರು ನಟಿಸಲು ಹೊಸ ಮಾಡೆಲ್ ಗಾಗಿ ನಿರ್ದೇಶಕಿ ಫರಾ ಖಾನ್ ಹುಡುಕಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ನಟಿ ಮಲೈಕಾ ಅರೋರ ಅವರ ಬಳಿ ಫರಾ ಖಾನ್ ಯಾರಾದರೂ ಹೊಸ ಮಾಡೆಲ್ ಇದ್ದರೇ ಸೂಚಿಸು ಎಂದು ಕೇಳಿದ್ದರಂತೆ.

ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!

ಮಲೈಕಾ ಮನಸ್ಸಿನಲ್ಲಿದ್ದ ದೀಪಿಕಾ

ನಿರ್ದೇಶಕಿ ಫರಾ ಖಾನ್ ಕೇಳುತ್ತಿದ್ದಂತೆ ನಟಿ ಮಲೈಕಾ ಅವರ ಗಮನಕ್ಕೆ ಬಂದಿದ್ದು ಅಂದು ಮಾಡೆಲ್ ಆಗಿದ್ದ ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ ಡೇಟಿಂಗ್ ಕುರಿತು ಹೀಗೊಂದು ಸ್ಫೋಟಕ ಸುದ್ದಿ?

ದೀಪಿಕಾ ಮಾಡೆಲಿಂಗ್ ಮೆಚ್ಚಿದ್ದ ಮಲೈಕಾ

ಅದಾಗಲೇ ಹಲವು ಮಾಡೆಲಿಂಗ್ ಕಾರ್ಯಕ್ರಮಗಳಲ್ಲಿ ದೀಪಿಕಾ ಪಡುಕೋಣೆಯನ್ನ ನೋಡಿದ್ದ ಮಲೈಕಾ ಒಂದು ಕಣ್ಣು ಇಟ್ಟಿದ್ದರು. ಇತ್ತ ಫರಾ ಖಾನ್ ಬೇರೆ ಹೊಸ ಮಾಡೆಲ್ ಗಾಗಿ ಹುಡುಕುತ್ತಿದ್ದರು. ಹೀಗಾಗಿ, ಮಲೈಕಾ ಕೂಡ ದೀಪಿಕಾನೇ ಬೆಸ್ಟ್ ಎಂದು ಫಿಕ್ಸ್ ಮಾಡಿದರು.

ಸ್ಕ್ರೀನ್ ಟೆಸ್ಟ್ ಪಾಸ್ ಆದ ದಿಪೀಕಾ

ಆ ಬಳಿಕ ದೀಪಿಕಾ ಪಡುಕೋಣೆಗೆ ಸ್ಕ್ರೀನ್ ಟೆಸ್ಟ್ ಮಾಡಲಾಯಿತು. ಮಲೈಕಾ ಮೆಚ್ಚಿಕೊಂಡಂತೆ ನಿರ್ದೇಶಕಿ ಫರಾ ಖಾನ್ ಕೂಡ ದೀಪಿಕಾಗೆ ಫುಲ್ ಮಾರ್ಕ್ಸ್ ಕೊಟ್ಟೇ ಬಿಟ್ಟರು.

ಈ ಫೋಟೋದಲ್ಲಿ ಇರುವ ಬೆಂಗಳೂರು ಬಾಲೆ ಯಾರು ಅಂತ ಹೇಳಿ...

ದೀಪಿಕಾ ಬಾಲಿವುಡ್ ಫ್ಲೈಟ್ ಹತ್ತಲು ಕಾರಣ ಮಲೈಕಾ

ಈ ಮೂಲಕ ಮಾಡೆಲಿಂಗ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದ ದೀಪಿಕಾ ಪಡುಕೋಣೆಯನ್ನ ಬಾಲಿವುಡ್ ಗೆ ಪರಿಚಯಿಸಿದ ಖ್ಯಾತಿ ನಟಿ ಮಲೈಕಾ ಹಾಗೂ ನಿರ್ದೇಶಕಿ ಫರಾ ಖಾನ್ ಅವರಿಗೆ ಸಲ್ಲುತ್ತದೆ.

ಮತ್ತೆ ಹಿಂತಿರುಗಲೇ ಇಲ್ಲ

ಅಂದು ಶಾರೂಖ್ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡ ದೀಪಿಕಾ ಪಡುಕೋಣೆ ಮತ್ತೆ ಯಾವತ್ತೂ ಹಿಂತಿರುಗಿ ನೋಡಲೇ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳು ಯಶಸ್ಸು ಕಾಣದೆ ಕೆಲ ಕಾಲ ಸಂಕಷ್ಟ ಎದುರಾದರೂ, ಮತ್ತೆ ತನ್ನ ಪ್ರತಿಭೆಯಿಂದ ಎದ್ದು ನಿಂತು ಬಾಲಿವುಡ್ ಲೋಕದ ರಾಣಿಯಾಗಿ ಮೆರೆಯುತ್ತಿದ್ದಾರೆ.

ಹಿಂದೆಂದೂ ಕಂಡಿರದ ರಾಯಲ್ ಲುಕ್‌ನಲ್ಲಿ ದೀಪಿಕಾ ಹೇಗಿದ್ದಾರೆ ನೋಡಿ..

'ಪದ್ಮಾವತಿ' ಚಿತ್ರದಲ್ಲಿ ನಟನೆ

ಇದುವರೆಗೂ ಸುಮಾರು 25ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ದೀಪಿಕಾ ಪಡುಕೋಣೆ, ಸದ್ಯ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ದೀಪಿಕಾ ಪಡೆದುಕೊಂಡಿರುವ ಸಂಭಾವನೆ ಸುಮಾರು 12 ಕೋಟಿಯಂತೆ.

ದೀಪಿಕಾ ಪಡುಕೋಣೆಯ ಮೊದಲ ಕ್ರಶ್ ಈ ನಟನ ಮೇಲಾಗಿತ್ತಂತೆ

English summary
Bollywood Actress Malaika Arora has a major role in helping Deepika Padukone get her very first Bollywood break

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada