For Quick Alerts
  ALLOW NOTIFICATIONS  
  For Daily Alerts

  ಮದುವೆಗೆ ಯೆಸ್ ಎಂದ್ರಾ ಮಲೈಕಾ? ನಾಚಿ ನೀರಾಗಿ ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಮುನ್ನಿ!

  |

  ಬಾಲಿವುಡ್ ಬೆಡಗಿ ಮಲೈಕಾ ಅರೋರ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ನಟಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮತ್ತೆ ಕೆಲವರು ಮದುವೆನಾ? ಎಂಗೇಜ್‌ಮೆಂಟಾ? ಅಥವಾ ಬೇರೆ ವಿಷಯನಾ ? ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

  "ನಾನು ಯೆಸ್ ಎಂದೆ" ಎಂದು ಬರೆದು ನಾಚಿ ತಲೆ ತಗ್ಗಿಸಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಮಲೈಕಾ ಏನು ಹೇಳುತ್ತಿದ್ದಾರೆ ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ಮದುವೆ ಆಗುತ್ತಿದ್ದಾರೆ. ಅದೇ ವಿಚಾರವನ್ನು ಹೀಗೆ ಪರೋಕ್ಷವಾಗಿ ಹೇಳಿದ್ದಾರೆ ಎನ್ನವುದು ಕೆಲವರ ವಾದ. ಅರ್ಜುನ್ ಹಾಗೂ ಮಲೈಕಾ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಎಲ್ಲೇ ಹೋದರೂ ಬಂದರೂ ಜೊತೆ ಜೊತೆಯಾಗಿ ಕೈ ಹಿಡಿದುಕೊಂಡು ಇಬ್ಬರು ಅಡ್ಡಾಡುತ್ತಾರೆ.

  ಜೂಜು ಅಡ್ಡೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಲೈಕಾ: ಭಾರಿ ಸಂಭಾವನೆ!ಜೂಜು ಅಡ್ಡೆಯಲ್ಲಿ ಮೈಚಳಿ ಬಿಟ್ಟು ಕುಣಿದ ಮಲೈಕಾ: ಭಾರಿ ಸಂಭಾವನೆ!

  ಮಲೈಕಾ ಅರೋರ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಸಾಕಷ್ಟು ಚರ್ಚೆ ಹುಟ್ಟಾಕಿತ್ತು. ಆದರೂ ಇಬ್ಬರ ಪ್ರೀತಿಗೆ ವಯಸ್ಸು ಅಡ್ಡಿ ಆಗಿಲ್ಲ. ಇನ್ನು ಈಗಾಗಲೇ ಮಲೈಕಾ ಮದುವೆ ಆಗಿದ್ದು, ಮೊದಲ ಪತಿ ಅರ್ಬಾಜ್‌ ಖಾನ್‌ಗೆ ಡಿವೋರ್ಸ್ ನೀಡಿದ್ದಾರೆ.

  ಅರ್ಜುನ್- ಮಲೈಕಾ ಎಂಗೇಜ್ಮೆಂಟ್

  ಅರ್ಜುನ್- ಮಲೈಕಾ ಎಂಗೇಜ್ಮೆಂಟ್

  ಸದ್ಯ ಮಲೈಕಾ ಮಾಡಿರುವ ಇನ್‌ಸ್ಟಾ ಪೋಸ್ಟ್ ಎಂಗೇಜ್‌ಮೆಂಟ್ ಬಗ್ಗೆ ಎಂದು ಕೆಲವರು ಹೇಳುತ್ತಿದ್ದಾರೆ. ಇಷ್ಟು ದಿನ ಇಬ್ಬರು ನಾವು ಒಳ್ಳೆ ಫ್ರೆಂಡ್ಸ್ ಅಷ್ಟೆ ಎಂದು ಹೇಳಿಕೊಂಡು ಬಂದಿದ್ದರು. ಈಗ ಅರ್ಜುನ್ ಕಪೂರ್ ಜೊತೆ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ಮಲೈಕಾ ಈ ರೀತಿ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ. ಅಥವಾ ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲು ನಿರ್ಧರಿಸಿದಂತಿದೆ. ಅದನ್ನು ಈ ರೀತಿ ಬಹಿರಂಗ ಪಡಿಸಿರಬಹುದು ಎನ್ನುವ ಚರ್ಚೆ ನಡೀತಿದೆ.

  ಆ ಕಾರಣಕ್ಕೆ ಅರ್ಬಾಜ್- ಮಲೈಕಾ ಡಿವೋರ್ಸ್

  ಆ ಕಾರಣಕ್ಕೆ ಅರ್ಬಾಜ್- ಮಲೈಕಾ ಡಿವೋರ್ಸ್

  2016ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರ ದಂಪತಿ 19 ವರ್ಷಗಳ ದಾಂಪತ್ಯ ಕೊನೆಗೊಂಡಿತ್ತು. ಇದಕ್ಕೆ ಅರ್ಜುನ್ ಕಪೂರ್ ಕಾರಣ ಎನ್ನುವ ಮಾತುಗಳು ಕೇಳಿಬಂದಿತ್ತು. ಡಿವೋರ್ಸ್‌ಗೂ ಮೊದಲೇ ಅರ್ಜುನ್ ಕಪೂರ್ ಜೊತೆ ಕದ್ದು ಮುಚ್ಚೊ ಸುತ್ತಾಡುತ್ತಿದ್ದರು. ಇದೇ ಕಾರಣಕ್ಕೆ ದಂಪತಿ ದೂರಾದರು ಎನ್ನಲಾಗಿತ್ತು. ಆ ನಂತರ ಇಬ್ಬರು ಬಹಿರಂಗವಾಗಿಯೇ ಸುತ್ತಾಡಲು ಶುರು ಮಾಡಿದ್ದರು. ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು. ಇದೀಗ ಅರ್ಜುನ್ ಕಪೂರ್ ಜೊತೆ 2ನೇ ಮದುವೆಗೆ ಮಲೈಕಾ ಸಿದ್ಧರಾಗಿರುವ ಬಗ್ಗೆ ಚರ್ಚೆ ನಡೀತಿದೆ.

  ಪರೋಕ್ಷವಾಗಿ ಪ್ರೀತಿ ಒಪ್ಪಿಕೊಂಡಿದ್ದ ಮಲೈಕಾ

  ಪರೋಕ್ಷವಾಗಿ ಪ್ರೀತಿ ಒಪ್ಪಿಕೊಂಡಿದ್ದ ಮಲೈಕಾ

  3 ವರ್ಷದ ಹಿಂದೆ 'ಕಾಫಿ ವಿತ್ ಕರಣ್' ಶೋದಲ್ಲಿ ಮಲೈಕಾ ಅರೋರ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಪರೋಕ್ಷವಾಗಿ ಅರ್ಜುನ್‌ ಕಪೂರ್‌ ಜೊತೆಗಿನ ಪ್ರೀತಿ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಇದೇ ಶೋನಲ್ಲಿ ಭಾಗವಹಿಸಿದ್ದ ಅರ್ಜುನ್ ಕಪೂರ್ ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಇಲ್ಲ. ನನ್ನ ಫೋಕಸ್ ಈಗ ಕರಿಯರ್‌ ಕಡೆ ಇದೆ ಎಂದಿದ್ದರು. ಬೋನಿ ಕಪೂರ್ ಮಗನಾಗಿರುವ ಅರ್ಜುನ್ ಕಪೂರ್ ಬಾಲಿವುಡ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಮಲೈಕಾ ಜೊತೆಗಿನ ಲವ್ವಿಡವ್ವಿಯಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ.

  ಚಿತ್ರರಂಗದಲ್ಲಿ ಮಲೈಕಾ ಬ್ಯುಸಿ ಇಲ್ಲ

  ಚಿತ್ರರಂಗದಲ್ಲಿ ಮಲೈಕಾ ಬ್ಯುಸಿ ಇಲ್ಲ

  ಸದ್ಯಕ್ಕೆ ಮಲೈಕಾ ಅರೋರ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಮಲೈಕಾ ನಾಯಕಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ನಿಂದ ಸದ್ದು ಮಾಡಿದ್ದೇ ಹೆಚ್ಚು. ಈಕೆ ಕುಣಿದಿದ್ದ 'ದಬಾಂಗ್' ಚಿತ್ರದ 'ಮುನ್ನಿ ಬದ್ನಾಮ್' ಹಾಗೂ ಗಬ್ಬರ್ ಸಿಂಗ್ ಚಿತ್ರದ 'ಕೆವ್ವು ಕೇಕ' ಸೂಪರ್ ಹಿಟ್ ಆಗಿತ್ತು. ಕಿರುತೆರೆ ಡ್ಯಾನ್ಸ್ ಶೋಗಳಿಗೆ ತೀರ್ಪುಗಾರ್ತಿಯಾಗಿಯೂ ಮಲೈಕಾ ಕೆಲಸ ಮಾಡಿದ್ದಾರೆ. ಇನ್ನು ಅರ್ಜುನ್ ಕಪೂರ್ ಕೈಯಲ್ಲಿ 'ಕುಟ್ಟೇ', 'ದಿ ಲೇಡಿ ಕಿಲ್ಲರ್' ಹಾಗೂ 'ಮೇರಿ ಪತ್ನಿ ಕಾ ರೀಮೆಕ್' ಸಿನಿಮಾಗಳಿವೆ.

  ಸೀರೆಯುಟ್ಟು ಬಂದ ಮಲೈಕಾ ಅರೋರಾ: ಪೌಡರ್ ಆಂಟಿ ಎಂದಿದ್ದೇಕೆ ?ಸೀರೆಯುಟ್ಟು ಬಂದ ಮಲೈಕಾ ಅರೋರಾ: ಪೌಡರ್ ಆಂಟಿ ಎಂದಿದ್ದೇಕೆ ?

  English summary
  Malaika Arora hints at getting engaged with Arjun Kapoor, says, I said yes. Arjun and Malaika have been dating for a while. She has shared a post on Instagram that seems to hint at her engagement. Know more.
  Thursday, November 10, 2022, 15:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X