»   » ಮಲೈಕಾ 'ಮೈ'ದೋರಿದ ಕಪ್ಪು ಬಿಳುಪು ಚೆಲುವು

ಮಲೈಕಾ 'ಮೈ'ದೋರಿದ ಕಪ್ಪು ಬಿಳುಪು ಚೆಲುವು

Posted By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಐಟಂ ಬೆಡಗಿ ಹಾಗೂ ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಖಾನ್ ಮತ್ತೊಮ್ಮೆ ಎಲ್ಲರ ಕಣ್ಣು ತಮ್ಮತ್ತ ಸೆಳೆದುಕೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಇತ್ತೀಚೆಗಿನ ಅವರ ಹಾಟ್ ಫೋಟೋಗಳು.

'ವೋಗ್' ಮೇ ತಿಂಗಳ ಸಂಚಿಕೆಯಲ್ಲಿ ಕಪ್ಪು ಬಿಳುಪು ದಿರಿಸಿನಲ್ಲಿ ಕಂಗೊಳಿಸಿದ್ದಾರೆ ಮಲೈಕಾ. ಒಂದು ಮಗುವಿನ ತಾಯಿಯಾಗಿದ್ದರೂ ಮಲೈಕಾ ತಮ್ಮ ದೇಹದ ಮೈಮಾಟವನ್ನು ಅನಾವರಣಗೊಳಿಸುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ.

Malaika Arora Khan on Vogue May 2015

ದಿಲ್ ಸೇ ಚಿತ್ರದಲ್ಲಿ 'ಚಯ್ಯಾ ಚಯ್ಯಾ' ಎಂದು ಕುಣಿದ ಬೆಡಗಿಯ ಯೌವ್ವನದ ರಹಸ್ಯ ಏನು ಎಂದು ಹೆಂಗೆಳೆಯರು ತಲೆಕೆಡಿಸಿಕೊಳ್ಳುವಂತಿವೆ ಫೋಟೋಗಳು. ದಬಾಂಗ್ ಚಿತ್ರದಲ್ಲಿ "ಮುನ್ನಿ ಬದ್ನಾಮ್ ಹುಯಿ" ಕುಣಿದ ಬೆಡಗಿ ಈಗ ಕಪ್ಪು ಬಿಳುಪು ಚೆಲುವು ಅನಾವರಣಗೊಳಿಸಿದ್ದಾರೆ.

Malaika Arora Khan on Vogue May 2015

ಈ ಹಿಂದೆ ಇದೇ ನಿಯತಕಾಲಿಕೆಯಲ್ಲಿ ಹಲವಾರು ಬೆಡಗಿಯರು ತಮ್ಮ ಮೈಮಾಟವನ್ನು ಮೆರೆದಿದ್ದರು. ಅವರಲ್ಲಿ ಸೋನಾಕ್ಷಿ ಸಿನ್ಹಾ, ಬಿಪಾಶಾ ಬಸು, ದೀಪಿಕಾ ಪಡುಕೋಣೆ, ಪ್ರೀತಿ ಜಿಂಟಾ, ಲಕ್ಷ್ಮಿ ಮೆನನ್ ಮುಂತಾದವರು ತಮ್ಮ ದೇಹಸಿರಿಯನ್ನು ಅನಾವರಣಗೊಳಿಸಿದ್ದರು. 

English summary
Indian actress, dancer, model, VJ, and television presenter Malaika Arora Khan Shows Off Her Curvy Figure on Vogue May 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada