ಅರ್ಜುನ್ ಕಪೂರ್ ಜೊತೆ ಬ್ರೇಕಪ್‌, ನೋವಲ್ಲಿ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ ಮಲೈಕಾ ಅರೋರಾ ?

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗ ಅವರ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಮಲೈಕಾ ಅರೋರಾ ಸದ್ಯದ ಉದಾಹರಣೆ.

ಹೌದು, ವಯಸ್ಸು ಐವತ್ತಾದರೂ ಇವತ್ತು ಕೂಡ ಹದಿ ಹರೆಯದ ಯುವತಿಯರನ್ನ ನಾಚಿಸುವಂತೆ ತನ್ನ ದೇಹ ಸಿರಿಯನ್ನ ಕಾಪಾಡಿಕೊಂಡಿರುವ ಮಲೈಕಾ, ಸದ್ಯಕ್ಕೆ ಅರ್ಜುನ್ ಕಪೂರ್‌ ಅವರಿಂದ ದೂರವಾಗಿದ್ದಾರೆ. ತಮಗಿಂತ ಹನ್ನೆರಡು ವರ್ಷ ಚಿಕ್ಕ ಹುಡುಗನನ್ನೂ ಪ್ರೀತಿ ಮಾಡಿದ ತಪ್ಪಿಗೆ ನೊಂದು ಬೆಂದಿದ್ದಾರೆ. ದಿನಕ್ಕೊಂದು ನಿಗೂಢಾರ್ಥದ ಫೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಪ್ರೇಮ ವಿರಹದಲ್ಲಿ ಏಕಾಂಗಿಯಾಗಿ ತಿರುಗುತ್ತಿದ್ದಾರೆ.

Malaika Arora loses her balance and nearly falls when she is spotted for dinner the video goes viral

ಆದರೆ.. ಈ ಸಮಯದಲ್ಲಿ ತಮ್ಮ ಹಿಂದೆ ಸುತ್ತಾಡುವ ಕ್ಯಾಮರಾಗಳಿಂದ ಮಲೈಕಾ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾಕೆಂದರೆ ಲೈಕ್.. ಶೇರ್.. ಸಬ್‌ಸ್ಕ್ರೈಬ್.. ಕಾಲದಲ್ಲಿ, ತಮ್ಮ ಕೈಯಾರೆ ಅವರು ಕೇಳಿದಷ್ಟು ಹಣ ನೀಡಿ ಅವರನ್ನು ತಾವು ಇದ್ದಲ್ಲಿ ಕರೆಸಿಕೊಳ್ಳುವ ಸಂಪ್ರದಾಯಕ್ಕೆ ಶರಣಾದವರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಮಲೈಕಾ ಮಾಡಿದ ಈ ತಪ್ಪು ಅವರಿಗೆ ಈಗ ಮುಳ್ಳಾಗಿದೆ. ಯಾಕೆಂದರೆ ಮಲೈಕಾ ಅವರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಗಂಟಾನುಗಟ್ಟಲೆ ಕಾಯುವ ಈ ಪಾಪರಾಜಿಗಳ ಗುಂಪು, ಅರ್ಜುನ್ ಕಪೂರ್ ಅವರಿಂದ ದೂರವಾದ ನೋವಲ್ಲಿ ಮಲೈಕಾ ಅರೋರಾ ಕಂಠಪೂರ್ತಿ ಕುಡಿದು ತೂರಾಡಿದ್ದಾರೆ ಎಂದು

ಈ ಕಾರಣಕ್ಕೆ ಮಲೈಕಾ ಅರೋರಾ ಈಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅನೇಕರು ಮಲೈಕಾ ಅರೋರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಕುಂತರೂ ನಿಂತರೂ ತಪ್ಪೆನ್ನುವಂತೆ ಹೀಯಾಳಿಸುತ್ತಿದ್ದಾರೆ. ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಅರ್ಜುನ್ ಕಪೂರ್ ಅವರಿಂದ ದೂರವಾದ ನಂತರ ಮಲೈಕಾ ಅರೋರಾ ಹೆಚ್ಚೆಚ್ಚು ಕುಡಿಯುತ್ತಿದ್ದಾರೆ ಎಂದು ಕೆಲವರು ಹೇಳಿದರೆ, ನಡೆಯಲು ಸಾಧ್ಯವಾಗದಿರುವಷ್ಟು ಕುಡಿಯುವ ಅವಶ್ಯಕತೆ ಏನಿತ್ತು ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇದರ ನಡುವೆ ಮಲೈಕಾ ಅರೋರಾ ಅವರ ಬಟ್ಟೆಯ ಮೇಲೆ ಕೆಲವರ ಕಣ್ಣು ಬಿದ್ದಿದ್ದು ಚೆನ್ನಾಗಿರುವ ಬಟ್ಟೆಯನ್ನು ಹಾಕಿಕೊಂಡು ಬರಲು ಇವರಿಗೆಲ್ಲ ಏನು ರೋಗ ಎಂದು ಕಿಡಿ ಕಾರಿದ್ದಾರೆ. ಹಾಗಂಥ ಎಲ್ಲರೂ ಮಲೈಕಾ ವಿರುದ್ಧ ತಿರುಗಿ ಬಿದ್ದಿದ್ದಾರೆ ಅಂತೇನು ಇಲ್ಲ. ಅಲ್ಲಲ್ಲಿ ಕೆಲವರು ಮಲೈಕಾ ಅರೋರಾ ಪರ ವಕಾಲತ್ತು ವಹಿಸಿದ್ದಾರೆ. ಎಲ್ಲರಂತೆ ಅವರು ಮನುಷ್ಯರು, ನಡೆಯುವಾಗ ಕಾಲು ಎಡವಿದರೆ ಏನಾಯ್ತು ಅಂದಿದ್ದಾರೆ. ಅವರ ಖಾಸಗಿ ಬದುಕಿನಲ್ಲಿ ನಿಮಗೆ ಯಾಕೆ ಇಷ್ಟು ಆಸಕ್ತಿ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಬದುಕಿ ಬದುಕಲು ಬಿಡಿ ಎಂದು ಬುದ್ದಿಮಾತನ್ನೂ ಪಾಪರಾಜಿಗಳಿಗೆ ಅನೇಕರು ಹೇಳುತ್ತಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಮಲೈಕಾ ಅರೋರಾ ಪ್ರೇಮ ಪಾಠವನ್ನು ಮಾಡಿದ್ದರು. ಹೆಲೋ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮಲೈಕಾ, ಬದುಕಿನಲ್ಲಿ ಏನೇ ಆಗಲಿ ಆದರೆ ನಿಜವಾದ ಪ್ರೀತಿಯಲ್ಲಿನ ನಂಬಿಕೆಯನ್ನು ನಾನು ಯಾವತ್ತು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೇಳಿ..ಕೇಳಿ.. ನನ್ನದು ವೃಶ್ಚಿಕ್ ರಾಶಿ. ಹೀಗಾಗಿ ಕೊನೆಯವರೆಗೆ ನಾನು ಪ್ರೀತಿಗಾಗಿ ಹೋರಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಆದರೆ ನಾನು ವಾಸ್ತವದಲ್ಲಿ ಬದುಕುವವಳು. ನನಗೆ ಯಾವ ಹಂತದಲ್ಲಿ ಗೆರೆ ಹಾಕಬೇಕು ಎನ್ನುವುದು ಗೊತ್ತಿದೆ ಎಂದು ಕೂಡ ಹೇಳಿದ್ದರು.

ಮುಂದುವರೆದು ಮೊದಲೆಲ್ಲ ಕೆಲವು ವಿಷಯಗಳು ಮತ್ತು ಟ್ರೋಲ್‌ಗಳು ನನ್ನ ಮೇಲೆ ಕೂಡ ಪರಿಣಾಮ ಬೀರುತ್ತಿದ್ದವು ಎಂದು ಹೇಳಿರುವ ಮಲೈಕಾ, ಇದೆಲ್ಲದರಿಂದ ನನಗೆ ನಿದ್ದೆಯೇ ಬರುತ್ತಿರಲಿಲ್ಲ ಎಂದಿದ್ದರು. ಹಲವಾರು ಬಾರಿ ನೊಂದು ಬೆಂದು ಕಣ್ಣೀರು ಹಾಕಿರುವುದಾಗಿಯೂ ಹೇಳಿದ್ದರು. ಆದರೆ.. ಆ ಕಣ್ಣೀರು ಕೇವಲ ನಾಲ್ಕು ಗೋಡೆಗಳ ನಡುವೆ ಅಷ್ಟೇ ಕಾಣಿಸುತ್ತೆ ಹೊರತು, ಸಾರ್ವಜನಿಕವಾಗಿ ನಾನು ಯಾವತ್ತು ಕಣ್ಣೀರು ಹಾಕಲಾರೆ ಎಂದು ಹೇಳಿದ್ದರು ಮಲೈಕಾ ಅರೋರಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X