ಮಧ್ಯರಾತ್ರಿ 'ಅವರ ಮನೆ'ಯಿಂದ ಹೊರ ಬಂದ ಮಲೈಕಾ ಅರೋರಾಗೆ ಶಾಕ್ ; ಕ್ಯಾಮರಾ ಕಂಡು ಮುಖ ಮುಚ್ಕೊಂಡು ಓಡಿದ ಸಲ್ಲು ಮಾಜಿ ಅತ್ತಿಗೆ
ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗೀಗ ಕೆಲವರ ಅನುಭವಕ್ಕೆ ಬರುತ್ತಿದೆ. ಇಲ್ಲದಿದ್ದರೆ ಮಲೈಕಾ ಅರೋರಾ ಮುಖ ಮುಚ್ಕೊಂಡು ಓಡುತ್ತಿರಲಿಲ್ಲ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಚೆಲುವೆಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು ಮತ್ತು ಪ್ರಮುಖರು. ವಯಸ್ಸು ಐವತ್ತು ಪ್ಲಸ್ ಆದರೂ ಹದಿ ಹರೆಯದ ಯುವತಿಯರು ನಾಚುವಂತಹ ದೇಹ ಸಿರಿ ಇವರದ್ದು.

ಅರ್ಬಾಜ್ ಖಾನ್ ಮತ್ತು ಅರ್ಜುನ್ ಕಪೂರ್ ಇಬ್ಬರಿಂದಲೂ ದೂರವಾಗಿರುವ ಮಲೈಕಾ ಅರೋರಾ ಸದ್ಯ 33 ವರ್ಷದ ವಜ್ರದ ವ್ಯಾಪಾರಿಯಾದ ಹರ್ಷ್ ಮೆಹ್ತಾ ಜೊತೆ ಸುತ್ತಾಡುತ್ತಿದ್ದಾರೆ. ಈ ಬಾರಿ ಮಲೈಕಾ ತಮ್ಮ ಈ ಪ್ರೀತಿಯ ವಿಷಯದಲ್ಲಿ ತುಂಬಾನೇ ಗಂಭೀರವಾಗಿದ್ದಾರೆ ಎನ್ನುವ ಸುದ್ದಿ ಇದೆ.
ಇಂಥಾ ಮಲೈಕಾ ಅರೋರಾ ಸದ್ಯ ಮಧ್ಯರಾತ್ರಿ ಕ್ಯಾಮರಾ ಕಂಡೊಡನೆ ಮುಖ ಮುಚ್ಚಿಕೊಂಡಿದ್ದಾರೆ. ಅವಸರ ಅವಸರದಲ್ಲಿ ತಮ್ಮ ಕಾರು ಹತ್ತಿದ್ದಾರೆ. ಗೇಟ್ ದಾಟುವವರೆಗೆ ಕೂಡ ಮಲೈಕಾ ಕ್ಯಾಮರಾಗೆ ತಮ್ಮ ಮುಖ ತೋರಿಸಿಲ್ಲ.
ಹೌದು, ಅಸಲಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನಟಿ ಕೃತಿಕಾ ಕಾಮ್ರಾ ಅವರ ಜೊತೆ ಮದುವೆಯ ಬಂಧನಕ್ಕೊಳಗಾದ ಕ್ರಿಕೆಟ್‌ನ ಸ್ಟಾರ್ ನಿರೂಪಕ ಗೌರವ್ ಕಪೂರ್ ಅವರಿಗೆ ಇಂದು (ಏಪ್ರಿಲ್ 11) ಜನುಮ ದಿನದ ಸಂಭ್ರಮ. ಈ ಹಿನ್ನೆಲೆ ಅದ್ದೂರಿಯಾದ ಪಾರ್ಟಿಯೊಂದನ್ನು ಗೌರವ್ ಕಪೂರ್ ನಿನ್ನೆ (ಏಪ್ರಿಲ್ 10) ರಾತ್ರಿ ಹಮ್ಮಿಕೊಂಡಿದ್ದರು.
ಭಾರತ ಕ್ರಿಕೆಟ್ ತಂಡದ ದಂತಕತೆ ಜಹೀರ್ ಖಾನ್, ಅವರ ಪತ್ನಿ ಸಾಗರಿಕಾ, ಮಲೈಕಾ ಅವರ ಸಹೋದರಿ ಅಮೃತಾ ಅರೋರಾ, ನೇಹಾ ದೂಫಿಯಾ, ಯುವರಾಜ್ ಸಿಂಗ್, ಹೀಗೆ ಹಲವು ಖ್ಯಾತನಾಮರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ಪಾರ್ಟಿಯಲ್ಲಿ ಮಲೈಕಾ ಅರೋರಾ ಕೂಡ ಭಾಗವಹಿಸಿದ್ದರು.

ಆಗಲೇ ಹೇಳಿದಂತೆ ಒಳಗಡೆ ಎಲ್ಲರೂ ಪಾರ್ಟಿ ಮೂಡಿನಲ್ಲಿದ್ದರೆ, ಲೈಕ್.. ಶೇರ್.. ಸಬ್‌ಸ್ಕ್ರೈಬ್‌ಗೆ ಹಪಹಪಿಸುವ ಪಾಪರಾಜಿಗಳು ಹೊರಗಡೆ ಕೈಯಲ್ಲಿ ಕ್ಯಾಮರಾ ಹಿಡಿದುಕೊಂಡು ಬಿಡಾರ ಹೂಡಿದ್ದರು.
ಆದರೆ ಹೊರಗಡೆ ಕ್ಯಾಮರಾಗಳಿವೆ ಎನ್ನುವುದರ ಅರಿವು ಇದ್ದೋ, ಇಲ್ಲದೆಯೋ, ಮಲೈಕಾ ಅರೋರಾ ತಮ್ಮ ಮನೆಗೆ ತೆರಳಲು ಹೊರ ಬಂದಿದ್ದಾರೆ. ಇದೇ ಸಮಯದಲ್ಲಿ ಕ್ಯಾಮರಾ ಕಂಡು ಹೌಹಾರಿದ್ದಾರೆ. ತಪ್ಪಿಯೂ ಕ್ಯಾಮರಾಗಳತ್ತ ತಲೆ ಎತ್ತಿ ಕೂಡ ನೋಡದ ಮಲೈಕಾ ಆ ನಂತರ ಸೀದಾ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.
ಇನ್ನೂ ಸಾಮಾನ್ಯವಾಗಿ ಮಲೈಕಾ ಅರೋರಾ ಕ್ಯಾಮೆರಾಗಳ ಮುಂದೆ ಆತ್ಮವಿಶ್ವಾಸದಿಂದ ನಗುತ್ತಾ ಪೋಸ್ ಕೊಡುತ್ತಾರೆ.ಪಾಪರಾಜಿಗಳ ಜೊತೆ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ. ಈ ಬಾರಿ ಮಾತ್ರ ಕ್ಯಾಮರಾಮನ್‌ಗಳು ಪದೇ ಪದೇ ವಿನಂತಿಸಿದರೂ, ಮಲೈಕಾ ತಮ್ಮ ಮುಖ ತೋರಿಸಲಿಲ್ಲ ಅಥವಾ ಫೋಟೋಗೆ ನಿಲ್ಲಲಿಲ್ಲ.
ವೈರಲ್ ಆದ ಕಾರಿನ ಹಿಂದಿನ ಸೀಟ್‌ನಲ್ಲಿ ಕುಳಿತ ಮಲೈಕಾ, ತಮ್ಮ ಮುಖವನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಮಲೈಕಾ ಅವರ ಈ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳಲ್ಲಿ ಗೊಂದಲ ಮತ್ತು ಆಶ್ಚರ್ಯವನ್ನು ಮೂಡಿಸಿದೆ. ವಿಡಿಯೋ ನೋಡಿದ ಹಲವರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಮಲೈಕಾ ಅರೋರಾ ಮದ್ಯ ಸೇವಿಸಿರಬಹುದು, ಹೀಗಾಗಿ ಕ್ಯಾಮರಾದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ಧಾರೆ.


Click it and Unblock the Notifications











