33 ವರ್ಷದ ಚೆಲುವ, 52 ವರ್ಷದ ಚೆಲುವೆ ; ರೋಮ್‌ನಲ್ಲಿ ವಜ್ರದ ವ್ಯಾಪಾರಿ ಜೊತೆ ಮಲೈಕಾ ಅರೋರಾ ರೊಮ್ಯಾನ್ಸ್ -ಫೋಟೊ ವೈರಲ್

ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ .. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ. ಆದರೆ ಅದನ್ನು ಗುರುತಿಸುವುದು ಸುಲಭ ಅಲ್ಲ. ಆಕರ್ಷಣೆಯೇ ಪ್ರೀತಿ ಅಲ್ಲ.

ಇನ್ನೂ.. ಈ ಪ್ರೀತಿಗೆ ವಯಸ್ಸಿನ ಹಂಗಿಲ್ಲ.ಯಾರ ಮೇಲಾದರೂ ಯಾವಾಗ ಬೇಕಾದರೂ ಪ್ರೀತಿ ಆಗಬಹುದು. ಇದಕ್ಕೆ ಉದಾಹರಣೆ ಎಂಬಂತೆ ಚಿತ್ರರಂಗದಲ್ಲಿ ಹಲವರ ಪ್ರೇಮ ಕಥೆಗಳು ಕಣ್ಮುಂದೆ ಇವೆ. ಉದಾಹರಣೆಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ನಡುವೆ 10 ವರ್ಷಗಳ ಅಂತರ ಇದೆ. ಇನ್ನೂ 70ರ ಹರೆಯದಲ್ಲಿ ನಾಲ್ಕನೇ ಮದುವೆಯಾದ ಹಿರಿಯ ನಟ ಕಬೀರ್ ಬೇಡಿ ಅವರಿಗಿಂತ ಅವರ ಪತ್ನಿ 29 ವರ್ಷ ಚಿಕ್ಕವರು. ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವರ್ ಅವರ ನಡುವೆ ಕೂಡ 26 ವರ್ಷಗಳ ಅಂತರ ಇದೆ. ಅರ್ಬಾಜ್ ಖಾನ್ ಅವರಿಗಿಂತ ಅವರ ಎರಡನೇ ಪತ್ನಿ ಶುರಾ ಖಾನ್ 25 ವರ್ಷ ಚಿಕ್ಕವರು. ಸದ್ಯ ಈ ಸಾಲಿಗೆ ಹಿಂದೆಯೂ ಸೇರಿಕೊಂಡು ಆ ನಂತರ ಹೊರ ಬಂದಿದ್ದ ಮಲೈಕಾ ಅರೋರಾ ಮತ್ತೊಮ್ಮೆ ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

Malaika Arora s Italian Escape Viral Trevi Fountain Selfie with Harsh Mehta

ಹೌದು, ಮಲೈಕಾ ಅರೋರಾ .. ಸಲ್ಮಾನ್ ಖಾನ್ ಅವರ ಮಾಜಿ ಅತ್ತಿಗೆ. ಬಾಲಿವುಡ್‌ನ ಬಳಕುವ ಬಳ್ಳಿ. 50 + ವಯಸ್ಸಾದರೂ ಇವರ ಮನ ಸದಾ ಪ್ರೀತಿಗೆ ಹಾತೊರೆಯುತ್ತಿರುತ್ತೆ. ಇದಕ್ಕೆ ಕೈಗನ್ನಡಿಯೇ ಇವರ ಲವ್ ಟ್ಯ್ರಾಕ್.

ಅರ್ಬಾಜ್ ಖಾನ್ ಅವರಿಂದ ದೂರವಾದ ನಂತರ ತಮಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಹೆಚ್ಚು ಕಡಿಮೆ ಆರು ವರ್ಷ ಪ್ರೇಮದ ಅಮಲಿನಲ್ಲಿ ತೇಲಿದ್ದ ಮಲೈಕಾ ಅರೋರಾ ಆ ನಂತರ ಹಲವರ ಜೊತೆ ಕಾಣಿಸಿಕೊಂಡರು. ಆದರೆ, ಯಾರ ಜೊತೆಯೂ ಇವರ ಸಂಬಂಧ ದೀರ್ಘಾವಧಿ ಮುಂದುವರೆದಂತೆ ಕಾಣಲಿಲ್ಲ.

ಇಂಥಾ ಮಲೈಕಾ ಅರೋರಾ ಸದ್ಯ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಅವರ ಹಿಂದೆ ಬಿದ್ದಿದ್ದಾರೆ ಎನ್ನುವ ಅನುಮಾನ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡೆ ಕೂಡ ಹಾಗೇ ಇದೆ. ಕಳೆದ ಅಕ್ಟೋಬರ್‌ನಲ್ಲಿ ಮುಂಬೈನ ಎಂಎಂಆರ್‌ಡಿಎ ಗ್ರೌಂಡ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಎನ್ರಿಕ್ ಇಗ್ಲೇಷಿಯಸ್ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಆ ನಂತರ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದರು.

ಈಗ ಇಬ್ಬರು ಜೊತೆಯಲ್ಲಿ ಸಪ್ತಸಾಗರದಾಚೆ ಇಟಲಿಯ ರೋಮ್‌ನಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಪ್ರಖ್ಯಾತ "ಟ್ರೆವಿ ಫೌಂಟೇನ್'' ಎದುರು ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಸದ್ಯ ಇವರ ಈ ಸಂಭ್ರಮದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚರ್ಚೆಗೆ ಗ್ರಾಸವಾಗಿವೆ.

Malaika Arora s Italian Escape Viral Trevi Fountain Selfie with Harsh Mehta

ಹಲವರು ಮಲೈಕಾ ಅರೋರಾಗೆ 52ನೇ ವರ್ಷದಲ್ಲಿ''ವಜ್ರ" ಖಚಿತ ಸಿಂಹಾಸನ ಸಿಕ್ಕಿತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಲಿಯನೇರ್‍ಗಳಿಗೂ ಕೂಡ ತಮಗಿಂತ ದೊಡ್ಡವರ ಮೇಲ್ಯಾಕೇ ಲವ್ವಾಗುತ್ತೆ..? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಪ್ರೇಮ ಕುರುಡು ಎಂಬ ಮಾತನ್ನೂ ಕೂಡ ಆಡುತ್ತಿದ್ದಾರೆ.

ಅಂದ್ಹಾಗೇ ''ನ್ಯೂಸ್ 18'' ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಹರ್ಷ್‌ ಮೆಹ್ತಾ ಅವರಿಗೆ ಈಗ 33 ವರ್ಷ. ವೃತ್ತಿಯಲ್ಲಿ ವಜ್ರದ ವ್ಯಾಪಾರಿ ಇವರು. ಮಾಧ್ಯಮಗಳ ವರದಿಯ ಪ್ರಕಾರ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯ. ಸಾಮಾಜಿಕ ಜಾಲತಾಣಗಳಿಂದ ಮತ್ತು ಮಾಧ್ಯಮದ ಕ್ಯಾಮರಾಗಳಿಂದ ಇಲ್ಲಿಯವರೆಗೆ ಹರ್ಷ್ ಮೆಹ್ತಾ ಅಂತರವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಈಗ ಮಲೈಕಾ ಅರೋರಾ ಸಹವಾಸದಿಂದ ಹರ್ಷ್ ಮೆಹ್ತಾ ಮೇಲಿಂದ ಮೇಲೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ಅವರ ಇಟಲಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ಅವರ ಈ ಸಂಬಂಧ ಮುಂದೆಯೂ ಮುಂದುವರೆಯುತ್ತಾ..? ಅಥವಾ ಈ ಸಂಬಂಧಕ್ಕೆ ಯಾರದ್ದಾದರೂ ಕಣ್ಣು ಬೀಳುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ. .

Malaika’s Valentine at Trevi Fountain??
byu/Paranoid_xxx inBollyBlindsNGossip

More from Filmibeat

English summary
An unseen photo of Malaika Arora and Harsh Mehta in Italy just surfaced. From the Trevi Fountain to viral status—get the full story behind the selfie here.
Read more about: malaika arora viral photo love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X