ಸೌತ್‌ಗಿಂತಲೂ ಬಾಲಿವುಡ್ ಉತ್ತಮ ಎಂದ ಮಾಳವಿಕ ಮೋಹನ್: ಅವಕಾಶಕ್ಕಾಗಿ ಹೀಗೆ ಮಾತಾಡಿದ್ರಾ?

ಮಲಯಾಳಂ ಚಿತ್ರ 'ಪಟ್ಟಂ ಪೋಲ್' ಮೂಲಕ ನಟನೆಗೆ ಬಂದ ಮಾಳವಿಕಾ ಮೋಹನ್ ಸದ್ಯ ತಮಿಳು, ಹಿಂದಿ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲಿವುಡ್‌ನಲ್ಲೂ ಕೂಡ ಮಾಳವಿಕಾ ಮೋಹನ್‌ ಅವರಿಗೆ ಬೇಡಿಕೆ ಇದೆ. ಅವರು ಮುಂದಿನ ಹಿಂದಿ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆಗೆ ಕಾಣಿಸಿಕೊಳ್ಳುತ್ತಾ ಇದ್ದಾರೆ.

ಇತ್ತೀಚಿನ ಸಂದರ್ಶನ ಒಂದರಲ್ಲಿ ನಟಿ ಮಾಳವಿಕ ಮೋಹನ್ ದಕ್ಷಿಣ ಚಿತ್ರೋದ್ಯಮ ಮತ್ತು ಬಾಲಿವುಡ್ ಚಿತ್ರೋದ್ಯಮದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಸಿನಿಮಾರಂಗ, ಸೌತ್ ಚಿತ್ರರಂಗಕ್ಕಿಂತಲೂ ಹೆಚ್ಚು ಸಂಘಟಿತವಾಗಿದೆ ಎಂದಿದ್ದಾರೆ. "ಹಿಂದಿ ಚಿತ್ರೋದ್ಯಮದಲ್ಲಿ ನಾನು ಇಷ್ಟಪಡುವ ವಿಷಯವೆಂದರೆ ವೇಳಾಪಟ್ಟಿಗಳನ್ನು ಸಂಪೂರ್ಣವಾಗಿ ಅನುಸರಿಸುವುದು. ಆದ್ದರಿಂದ, ನಿರ್ದಿಷ್ಟ ದಿನದಂದು ಯಾವ ದೃಶ್ಯವನ್ನು ಶೂಟ್ ಮಾಡುತ್ತಿದ್ದೀರಿ, ಎಂದು ನಿಮಗೆ ತಿಳಿದಿರುತ್ತದೆ. ಮತ್ತು ಅದು ನಿಮಗೆ ಚೆನ್ನಾಗಿ ತಯಾರಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ , ಶೆಡ್ಯೂಲ್‌ನ ಹತ್ತನೇ ದಿನದಂದು ಒಂದು ಹಾಡಿನ ಚಿತ್ರೀಕರಣವಿದ್ದರೆ, ನಾನು ಅದಕ್ಕೆ ದೈಹಿಕವಾಗಿ ಒಂದೆರಡು ದಿನಗಳ ಮೊದಲು ತಯಾರಿ ನಡೆಸಬೇಕು ಎಂದು ನನಗೆ ತಿಳಿದಿರುತ್ತದೆ." ಎನ್ನು ಹೇಳಿಕೆ ನೀಡಿದ್ದಾರೆ.

ಸೌತ್‌ನಲ್ಲಿ ಕೆಲವೊಮ್ಮೆ ನಿಗದಿತ ದಿನದಲ್ಲಿ ಒಂದು ದೃಶ್ಯ ಮುಗಿಯುವುದಿಲ್ಲ, ಮರುದಿನಕ್ಕೆ ಅದನ್ನು ಎಳೆಯಲಾಗುತ್ತದೆ. ಇದರ ಪರಿಣಾಮವಾಗಿ ಸಿನಿಮಾ ನಿರ್ಮಾಣದಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ಜೊತೆಗೆ ವೃತ್ತಿಪರತೆಗೆ ಕಲಾವಿದರು ಬದ್ಧರಾಗಿ ಇರಲು ಸಾಧ್ಯ ಆಗುವುದಿಲ್ಲ. ಸಂಭಾಷಣೆಗಳನ್ನು ಕೊನೆಯ ಕ್ಷಣದಲ್ಲಿ ಸ್ವೀಕರಿಸಿದರೆ ಕ್ವಾಲಿಟಿ ಬರುವುದಿಲ್ಲ. ಕಡಿಮೆ ಸಮಯ ಸಿಕ್ಕಾಗ ಬೇರೇನು ಮಾಡಲು ಆಗುವುವುದಿಲ್ಲ ಎಂದಿದ್ದಾರೆ.

Malavika Mohanan Says Bollywood Is Better Than South Film Industry

'ಬಿಯಾಂಡ್ ದಿ ಕ್ಲೌಡ್ಸ್' ಎನ್ನುವ ಒಂದೇ ಒಂದು ಹಿಂದಿ ಚಿತ್ರದಲ್ಲಿ ಮಾಳವಿಕಾ ಮೋಹನ್ ನಟಿಸಿದ್ದಾರೆ. ಅವರ ಎರಡನೇ ಹಿಂದಿ ಚಿತ್ರ 'ಯುಧ್ರ' ಇನ್ನೂ ರಿಲೀಸ್ ಆಗಿಲ್ಲ. ಹಾಗಾಗಿ ಈ ನಟಿಯ ಹೇಳಿಕೆ ಈಗ ಟ್ರೋಲ್ ಆಗುತ್ತಿದೆ. ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯಲು, ಹೆಚ್ಚು ಸಿನಿಮಾಗಳನ್ನು ಗಿಟ್ಟಿಸಿಕೊಳ್ಳಲು ಹೀಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

ಹಾಗೆ ನೋಡಿದರೆ ಮಾಳವಿಕಾ ಮೋಹನ್ ಅವರು ಮಲಯಾಳಂನಲ್ಲಿ 3 ಚಿತ್ರಗಳು, ತಮಿಳಿನಲ್ಲಿ 3 ಚಿತ್ರಗಳು, ಕನ್ನಡದಲ್ಲಿ 1 ಚಿತ್ರವನ್ನು ಮಾಡಿದ್ದಾರೆ. ಲೆಕ್ಕ ತೆಗೆದುಕೊಂಡರೆ ಸೌತ್‌ನಲ್ಲಿಯೇ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಮಾಡಿರುವ ಒಂದೇ ಸಿನಿಮಾ ರಿಲೀಸ್ ಆಗಿದ್ದು, ಮತ್ತೊಂದು ನಿರ್ಮಾಣದ ಹಂತದಲ್ಲಿ ಇದೆ. ಆದರೂ ಕೂಡ ಬಾಲಿವುಡ್ ಬೆಟರ್ ಎಂದಿದ್ದಾರೆ. ನಟಿಯ ಈ ಹೇಳಿಕೆಗೆ ಸಾಕಷ್ಟು ಜನರು ವಿರೋಧ ವ್ಯಕ್ತ ಪಡಿಸಿದ್ದಾರೆ.

More from Filmibeat

English summary
Malavika Mohanan Shocking comment: She Says Bollywood Is Better Than South Film Industry,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X