ಮತ್ತೊಂದು ಸೌತ್ ಹಿಟ್ ಹಿಂದೆ ಬಿದ್ದ ಬಾಲಿವುಡ್; ರಿಮೇಕ್ ಆಗ್ತಿದೆ 'ಜಯ ಜಯ ಜಯ ಜಯ ಹೇ'

Malayalam blockbuster Jaya Jaya Jaya Jaya Hey to be remade in Hindi

ಓಟಿಟಿ ಯುಗ ಆರಂಭವಾಗಿ ಜನರೆಲ್ಲರೂ ಬೇರೆ ಭಾಷೆಯ ಚಿತ್ರಗಳನ್ನು ಅವುಗಳ ಮೂಲ ಭಾಷೆಯಲ್ಲಿಯೇ ನೋಡಲು ಆರಂಭಿಸಿದ ನಂತರವೂ ಸಹ ರಿಮೇಕ್ ಸಿನಿಮಾಗಳನ್ನು ಮಾಡುವತ್ತ ಹೆಚ್ಚು ಆಸಕ್ತಿ ತೋರಿಸುತ್ತಿರುವ ಚಿತ್ರರಂಗವೆಂದರೆ ಅದು ಬಾಲಿವುಡ್. ಹೌದು, ಬಾಲಿವುಡ್ ಸಾಲು ಸಾಲು ರಿಮೇಕ್ ಸಿನಿಮಾಗಳನ್ನು ಮಾಡಲು ಮುಂದಾಗಿದೆ.

ಇತ್ತೀಚೆಗಷ್ಟೆ ಮಲಯಾಳಂನ ಸೂಪರ್ ಹಿಟ್ ಸಿನಿಮಾ ಡ್ರೈವಿಂಗ್ ಲೈಸೆನ್ಸ್ ಅನ್ನು ಸೆಲ್ಫಿ ಎಂದು ರಿಮೇಕ್ ಮಾಡಿ ಹೀನಾಯವಾಗಿ ಸೋತಿರುವ ಬಾಲಿವುಡ್‌ ಇದೀಗ ಮತ್ತೊಂದು ಮಲಯಾಳಂ ಹಿಟ್ ಸಿನಿಮಾ ಜಯ ಜಯ ಜಯ ಜಯ ಹೇ ಸಿನಿಮಾವನ್ನು ರಿಮೇಕ್ ಮಾಡಲು ಮುಂದಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕಳೆದ ವರ್ಷ ಅಕ್ಟೋಬರ್ 28ರಂದು ಕನ್ನಡದ ಪುನೀತ್ ರಾಜ್‌ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಜತೆ ಚಿತ್ರಮಂದಿರಗಳ ಅಂಗಳಕ್ಕೆ ಬಂದಿದ್ದ ದರ್ಶನ ರಾಜೇಂದ್ರನ್ ಹಾಗೂ ಬಸಿಲ್ ಜೋಸೆಫ್ ನಟನೆಯ ಕಾಮಿಡಿ ಎಂಟರ್‌ಟೈನರ್ ಚಿತ್ರ ಈ ಜಯ ಜಯ ಜಯ ಜಯ ಹೇ. ಈ ಚಿತ್ರವನ್ನು ಇದೀಗ ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಿದ್ದು ನಾಯಕಿ ಪಾತ್ರವನ್ನು ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೈಕ್ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಮಲಯಾಳಂನಲ್ಲಿ ಸಿನಿಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ವಿಪಿನ್ ದಾಸ್ ಅವರೇ ಹಿಂದಿಯಲ್ಲಿಯೂ ಸಹ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಫಾತಿಮಾ ಸನಾ ಶೈಕ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಪಿನ್ ದಾಸ್ ಜತೆಗಿನ ಸೆಲ್ಫಿ ಫೋಟೊವನ್ನು ಹಂಚಿಕೊಂಡಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ.

ಇನ್ನು ಐದು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಜಯ ಜಯ ಜಯ ಜಯ ಹೇ ಸಿನಿಮಾ ಐವತ್ತು ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಸಿತ್ತು. ಎಲ್ಲಾ ಚಿತ್ರರಂಗಗಳಲ್ಲಿಯೂ ಕಾಂತಾರ ಅಬ್ಬರಕ್ಕೆ ಇತರೆ ಚಿತ್ರಗಳು ಸೈಲೆಂಟ್ ಆದರೆ, ಈ ಚಿತ್ರ ಮಾತ್ರ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಸಿನಿಮಾಗೆ ತೀವ್ರ ಪೈಪೋಟಿ ನೀಡಿತ್ತು.

ಈ ಚಿತ್ರ ಮಾತ್ರವಲ್ಲದೇ ತಮಿಳಿನ ಹಿಟ್ ಚಿತ್ರ ಖೈದಿಯನ್ನೂ ಸಹ ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗುತ್ತಿದೆ. ತಮಿಳಿನಲ್ಲಿ ಕಾರ್ತಿ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಅಜಯ್ ದೇವಗನ್ ನಿರ್ವಹಿಸಲಿದ್ದು ಚಿತ್ರಕ್ಕೆ ಭೋಲಾ ಎಂದು ಹೆಸರಿಡಲಾಗಿದೆ. ಇನ್ನು ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಮೂಲ ಚಿತ್ರಕ್ಕಿಂತ ಬಹಳ ಭಿನ್ನವಾಗಿ ಚಿತ್ರವನ್ನು ತಯಾರಿಸಲಾಗಿದೆ. ಆದರೆ ಜಯ ಜಯ ಜಯ ಜಯ ಹೇ ಚಿತ್ರವನ್ನು ಮೂಲ ಚಿತ್ರವನ್ನು ನಿರ್ದೇಶಿಸಿದ್ದ ವಿಪಿನ್ ದಾಸ್ ಅವರೇ ನಿರ್ದೇಶಿಸಲಿರುವುದರಿಂದ ಈ ರೀತಿಯ ತಪ್ಪುಗಳು ನಡೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.

More from Filmibeat

English summary
Malayalam blockbuster Jaya Jaya Jaya Jaya Hey to be remade in Hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X