ಬಾಲಿವುಡ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ್ದ ಮಲಯಾಳಂ ನಿರ್ದೇಶಕ ಇನ್ನಿಲ್ಲ..!

ಸಂಗೀತ್ ಶಿವನ್.. ಮಲಯಾಳಂ ಚಿತ್ರರಂಗದ ಸಾಧಕ. ಮೋಹನ್ ಲಾಲ್ ಅವರ ಜೊತೆ ಆ ಕಾಲದಲ್ಲಿ, ಕೇವಲ ಐದೇ ವರ್ಷದಲ್ಲಿ ಮೂರು ಚಿತ್ರಗಳಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಯೋಧ.. ಗಂಧರ್ವಂ ಮತ್ತು ನಿರ್ಣಯಂ.. ಮೂರು ಚಿತ್ರಗಳನ್ನ ಮೋಹನ್ ಲಾಲ್ ಅವರ ಜೊತೆ ಮಾಡಿದ್ದ ಸಂಗೀತ್ ಶಿವನ್, ಆ ನಂತರ ಹೊರಳಿದ್ದು ಬಾಲಿವುಡ್‌ನತ್ತ.

ಸನ್ನಿ ಡಿಯೋಲ್ ಅಭಿನಯದ ಜೋರ್ ಚಿತ್ರದ ಮೂಲಕ, ಹಿಂದಿ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದ ಸಂಗೀತ್ ಶಿವನ್ ಆ ನಂತರ ಚುರಾ ಲಿಯಾ ಹೈ ತುಮ್ನೇ ಚಿತ್ರವನ್ನ ಡೈರೆಕ್ಟ್ ಮಾಡಿದರು. ಆದರೆ ಹಿಂದಿ ಉದ್ಯಮದಲ್ಲಿ ಗೆಲುವು ಇವರಿಗೆ ಸಿಕ್ಕಿದ್ದು ಕ್ಯಾ ಕೂಲ್ ಹೈ ಹಮ್ ಮತ್ತು ಅಪ್ನಾ ಸಪ್ನಾ ಮನಿ ಮನಿ ಚಿತ್ರದ ಮೂಲಕ.

malayalam-film-maker-kya-kool-hai-hum-director-sangeeth-sivan-passes-away

ಕ್ಯಾ ಕೂಲ್ ಹೈ ಹಮ್ ಮತ್ತು ಅಪ್ನಾ ಸಪ್ನಾ ಮನಿ ಮನಿ ಚಿತ್ರದ ಮೂಲಕ ರಿತೇಶ್ ದೇಶಮುಖ್ ಬದುಕಿನ ದಿಕ್ಕನ್ನ ಬದಲಿಸಿದ ಹೆಗ್ಗಳಿಕೆ ಇವರದ್ದು. ಇನ್ನೂ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಮತ್ತು ಧರ್ಮೆಂದ್ರ ಅಭಿನಯದ ಯಮಲಾ ಪಗಲಾ ದಿವಾನಾ -02 ಚಿತ್ರಕ್ಕೂ ಇವರದ್ದೇ ಸಾರಥ್ಯ ಇತ್ತು.

ಹೀಗೆ ಹತ್ ಹತ್ರ ಮೂರುವರೆ ದಶಕ ನಿರ್ಮಾಪಕನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ ಚಿತ್ರರಂಗಕ್ಕೆ ಸೇವೆಯನ್ನ ಸಲ್ಲಿಸಿದ ನಿನ್ನೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

malayalam-film-maker-kya-kool-hai-hum-director-sangeeth-sivan-passes-away

ಸಂಗೀತ್ ಶಿವನ್ ಅವರ ಅಕಾಲಿಕ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಸಂಗೀತ್​ ಶಿವನ್​ ಸರ್​ ಇನ್ನಿಲ್ಲ ಎಂಬುದು ತಿಳಿದು ಶಾಕ್​ ಆಯಿತು. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರನ್ನು ಮತ್ತು ಅವರ ನಗುವನ್ನು ಮಿಸ್​ ಮಾಡಿಕೊಳ್ಳುತ್ತೇನೆ' ಎಂದು ರಿತೇಶ್​ ದೇಶಮುಖ್​ ಸಂತಾಪವನ್ನ ಸೂಚಿಸಿದ್ದಾರೆ. ತುಷಾರ್ ಕಪೂರ್ ಕೂಡ ಕಂಬನಿ ಮಿಡಿದಿದ್ದಾರೆ

ಇನ್ನೂ 65 ವರ್ಷದ ಸಂಗೀತ್ ಶಿವನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಸಹೋದರ ಮತ್ತು ಸಿನಿಮ್ಯಾಟೋಗ್ರಾಫರ್ ಸಂತೋಷ್ ಮಾಹಿತಿ ಹಂಚಿಕೊಂಡಿದ್ದಾರೆ. ಗುರುವಾರ ಓಶಿವಾರಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮಲೆಯಾಳಂ ಭಾಷೆಯ ರೋಮಾಂಚಮ್ ಚಿತ್ರವನ್ನ ಹಿಂದಿಯಲ್ಲಿ ರಿಮೇಕ್ ಮಾಡ್ಬೇಕು ಅಂತ ಸಂಗೀತ್ ಶಿವನ್ ಪ್ಲಾನ್ ಮಾಡಿಕೊಂಡಿದ್ದರು. ಇದಕ್ಕೆ ಕಪ್‌ಕಪಿ ಅನ್ನೋ ಹೆಸರು ಕೂಡ ಇಟ್ಟಿದರು. ಆದರೆ ತಮ್ಮ ಈ ಕನಸು ನನಸಾಗುವ ಮುನ್ನವೇ ಸಂಗೀತ್ ಶಿವನ್ ಬದುಕಿನ ಯಾತ್ರೆಯನ್ನ ಮುಗಿಸಿದ್ದಾರೆ. ಪತ್ನಿ ಜಯಶ್ರೀ ಹಾಗೂ ಸಂಜನಾ ಮತ್ತು ಶಂತನು ಅವರನ್ನ ಅಗಲಿದ್ದಾರೆ.

More from Filmibeat

English summary
Director Sangeeth Sivan, best known for Bollywood films like Kya Kool Hain Hum and Apna Sapna Money Money died on Wednesday following a cardiac arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X