ಮಾಲ್ಡೀವ್ಸ್ v/s ಲಕ್ಷದ್ವೀಪ: ಮಾಲ್ಡೀವ್ಸ್ ಫೋಟೋ ಹಾಕಿ ಟ್ರೋಲ್‌ಗೆ ಆಹಾರ ಒದಗಿಸಿದ ಬಿಪಾಶಾ ಬಸು!

ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಈ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಬಾಲಿವುಡ್ ಮತ್ತು ಕ್ರಿಕೆಟ್ ಸೆಲಬ್ರಿಟಿಗಳು ಬಾಯ್‌ಕಾಟ್ ಮಾಲ್ಡಿವ್ಸ್ ಅಭಿಮಾನಕ್ಕೆ ಬೆಂಬಲ ನೀಡಿದ್ದಾರೆ.

ಇದರ ಬೆನ್ನಲ್ಲೇ ಇಡೀ ದೇಶವು ಮಾಲ್ಡೀವ್ಸ್ ವಿರುದ್ಧ ಒಮದಾಗಿದೆ. ದೇಶದಲ್ಲಿರುವ ದ್ವೀಪಗಳನ್ನು ನೋಡಲು ಮತ್ತು ಭಾರತೀಯ ದ್ವೀಪಗಳನ್ನು ಹುಡುಕಲು, ಮಾಲ್ಡೀವ್ಸ್ ಅನ್ನು ಬಾಯ್‌ಕಾಟ್ ಮಾಡಲು ಹಲವು ಮಂದಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಕಂಗನಾ ರನೌತ್, ಟೈಗರ್ ಶ್ರಾಫ್, ಶ್ರದ್ಧಾ ಕಪೂರ್, ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿ ಅನೇಕರು ಬೆಂಬಲ ನೀಡಿದ್ದಾರೆ. ಇದರ ನಡುವೆ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Maldives v/s Lakshadweep: Actress Bipasha Basu gets trolled over her Maldives vacation

ವಿವಾದ ನಡುವೆ ಮಾಲ್ಡೀವ್ಸ್‌ನಲ್ಲಿ ಬಿಪಾಶಾ ಬಸು!

ನಟಿ ಬಿಪಾಶಾ ಬಸು ಅವರು ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದು ಬಿ'ಟೌನ್ ಸೆಲೆಬ್ರಿಟಿಗಳ ಅತ್ಯಂತ ನೆಚ್ಚಿನ ತಾಣ ಎನ್ನಬಹುದು. ದೇಶದಲ್ಲಿ ನಡೆಯುತ್ತಿರುವ ವಿವಾದಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ತೋರುತ್ತಿದೆ. ಹೀಗಾಗಿ ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಣೆಯ ಫೋಟೋಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಇದರಿಂದ ಟ್ರೋಲರ್‌ಗಳಿಗೆ ಸಕತ್ ಕಂಟೆಂಟ್ ನೀಡುತ್ತಿದ್ದಾರೆ.

ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ತನ್ನ ಪತಿ ಕರಣ್ ಸಿಂಗ್ ಗ್ರೋವರ್ ಮತ್ತು ಮಗಳು ದೇವಿ ಜೊತೆಗೆ ಇತ್ತೀಚೆಗೆ ಜನವರಿ 7 ರಂದು ತನ್ನ 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ಬೀಚ್‌ಗಳಲ್ಲಿ ಸಕತ್ ಏಂಜಾಯ್ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Maldives v/s Lakshadweep: Actress Bipasha Basu gets trolled over her Maldives vacation

ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ; ಟ್ರೋಲ್ ಆದ ಬಿಪಾಶಾ

ಬಿಪಾಶಾ ಅವರ ಚಿತ್ರಗಳಿಗೆ ಇಷ್ಟು ದಿನ ಸಕತ್ ಆಗಿ ಕಾಮೆಂಟ್ ಮಾಡುತ್ತಿದ್ದ ನೆಟ್ಟಿಗರು, ಈಗ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳಿಗೆ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಮತ್ತು ಭಾರತಕ್ಕೆ ಮಾಡಿದ ಅವಮಾನದ ನಂತರವೂ ತಮ್ಮ ಪ್ರವಾಸಕ್ಕೆ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ನಟಿಯನ್ನು ಟ್ರೋಲ್ ಮಾಡಿದ್ದಾರೆ.

ಇಂಟರ್‌ನೆಟ್ ಬಳಕೆದಾರರು, "ದಯವಿಟ್ಟು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸಿ. ತಿಳುವಳಿಕೆಯುಳ್ಳ ನಾಗರಿಕರಾಗಿರಿ ಮತ್ತು ನಿಮ್ಮ ಸ್ವಂತ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ನಿಮ್ಮ ಸ್ವಂತ ಭಾರತೀಯ ಚಿತ್ರರಂಗವು ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುತ್ತಿದೆ. ಆದರೆ, ನೀವು ಅದನ್ನು ಪ್ರಚಾರ ಮಾಡುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು" ಎಂದು ಕಿಡಿಕಾರಿದ್ದಾರೆ.

ಮತ್ತೊಬ್ಬ ಬಳಕೆದಾರರು "ಮಾಲ್ಡೀವ್ಸ್ ಬೇಡ ಲಕ್ಷದ್ವೀಪಕ್ಕೆ ಹೋಗಿ" ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರರು, "ಮಾಲ್ಡಿವ್ಸ್ ಅನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಲಕ್ಷದ್ವೀಪದ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಇಲ್ಲಿ ವಿವಾದ ನಡೆಯುತ್ತಿದೆ" ಎಂದು ಹೇಳಿದ್ದಾರೆ.

More from Filmibeat

English summary
Bipasha Basu gets trolled over her Maldives vacation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X