ಸಂಭಾವನೆಯಲ್ಲಿ ತಾರತಮ್ಯ; ಮಸ್ತ್ ಮಸ್ತ್ ಹುಡ್ಗಿ ರವೀನಾ ಟಂಡನ್ ಬೇಸರ

ಚಿತ್ರರಂಗದಲ್ಲಿ ಸ್ಟಾರ್ ನಟರಿಗೆ ಸಮನಾಗಿ ನಟಿಯರಿಗೆ ಸಂಭಾವನೆ ಸಿಗುವುದಿಲ್ಲ. ಇದು ಪುರುಷ ಪ್ರಧಾನ ಇಂಡಸ್ಟ್ರಿ ಎಂದು ಸಾಕಷ್ಟು ನಟಿಯರು ಆರೋಪ ಮಾಡಿದ್ದಾರೆ, ಮಾಡುತ್ತಲೇ ಇದ್ದಾರೆ. ಸ್ಟಾರ್ ನಟರು ಪ್ರೇಕ್ಷಕರನನು ಚಿತ್ರರಂಗಕ್ಕೆ ಸೆಳೆಯುತ್ತಾರೆ ಎನ್ನುವ ಕಾರಣಕ್ಕೆ ಹೆಚ್ಚು ಸಂಭಾವನೆ ಎನ್ನುವ ವಾದವೂ ಇದೆ. ಕೆಲ ನಟಿಯರು ಹೆಚ್ಚು ಸಂಭಾವನೆ ಪಡೆದ ಉದಾಹರಣೆಗಳು ಇವೆ.

ನಟಿಯರಿಗೆ ಸಂಭಾವನೆ ಕಡಿಮೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಈ ಹಿಂದೆ ಹಲವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಮರೆದ ನಟಿಯರು ಈಗಲೂ ಇದೇ ಆರೋಪ ಮಾಡುತ್ತಿದ್ದಾರೆ. ನಟಿ ರವೀನಾ ಟಂಡನ್ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ. 2 ವರ್ಷದ ಹಿಂದೆ 'KGF'-2 ಚಿತ್ರದಲ್ಲಿ ರಮಿಕಾ ಸೇನ್ ಆಗಿ ಆಕೆ ಮಿಂಚಿದ್ದರು.

Male actors get paid more Raveena Tandon on remuneration difference

ರವೀನಾ ಟಂಡನ್ ಮಾತನಾಡಿ "ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಪರಿಸ್ಥಿತಿಗಳು ಸಂಪೂರ್ಣವಾಗಿ ಬದಲಾಗಿವೆ. ಆಗಿನ ಕಾಲಕ್ಕೆ ಹೋಲಿಸಿದರೆ ಈಗ ವಿಭಿನ್ನವಾಗಿದೆ. ಒಂದಾನೊಂದು ಕಾಲದಲ್ಲಿ ಹೀರೋ-ಹೀರೋಯಿನ್‌ಗಳ ಸಂಭಾವನೆಯ ಅಂತರ ತುಂಬಾ ಹೆಚ್ಚಾಗಿತ್ತು. ನಾಯಕರ ಸಂಭಾವನೆ ಹೆಚ್ಚಿತ್ತು. ಒಬ್ಬ ನಾಯಕನ ಒಂದು ಚಿತ್ರಕ್ಕೆ ನೀಡುವ ಸಂಭಾವನೆಯು ನಾಯಕಿಯರ 15 ಚಿತ್ರಗಳಿಗೆ ಸಮ" ಎಂದು ರವೀನಾ ನೆನಪಿಸಿಕೊಂಡಿದ್ದಾರೆ.

"ನಾನು ಎಲ್ಲಾ ನಾಯಕಿಯರ ಬಗ್ಗೆ ಹೇಳುತ್ತಿಲ್ಲ. ಹಾಗೆಯೇ ಎಲ್ಲರಿಗೂ ಒಂದೇ ಆಗಿರಲಿಲ್ಲ. ಹೀರೋ ಚಿತ್ರವೊಂದಕ್ಕೆ ಪಡೆಯುತ್ತಿದ್ದ ಸಂಭಾವನೆಯನ್ನು ನಾನು 15-20 ಸಿನಿಮಾ ಮಾಡಿ ಗಳಿಸುತ್ತಿದ್ದೆ. ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಹುಡುಕಿ ಹುಡುಕಿ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ನಟಿಯರು ಹೆಚ್ಚು ಸಂಖ್ಯೆಯ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು" ಎಂದಿದ್ದಾರೆ.

ಒಳ್ಳೆ ಸನ್ನಿವೇಶಗಳು, ಹಾಡುಗಳು ಇದ್ದರೆ ಸಾಕು ಕ್ರೇಜ್ ಬರುತ್ತದೆ ಎಂದು ನಟಿಯರು ನಟಿಸಲು ಒಪ್ಪಿಬಿಡುತ್ತಿದ್ದರು. ಕರಿಯರ್‌ ಬಗ್ಗೆ ಆಗ ಸರಿಯಾದ ಪ್ಲ್ಯಾನಿಂಗ್ ಇರುತ್ತಿರಲಿಲ್ಲ. ಆದರೆ ಈಗ ಆ ರೀತಿ ಇಲ್ಲ. ಈಗ ಪ್ಲ್ಯಾನಿಂಗ್ ಮಾಡಿಕೊಂಡು ನಟಿಯರು ಮುಂದೆ ಸಾಗುತ್ತಿದ್ದಾರೆ. ಸ್ಕ್ರಿಪ್ಟ್ ಆಯ್ಕೆ, ಸಂಭಾವನೆ ಎಲ್ಲದರಲ್ಲೂ ಬಹಳ ಆಲೋಚಿಸಿ ಒಪ್ಪಿಕೊಳ್ಳುತ್ತಿದ್ದಾರೆ. ಇಂದಿನ ನಟಿಯರಿಗೆ ಸಂಭಾವನೆ ಸಮಾನತೆ, ಸಮಾನ ಅವಕಾಶಗಳ ಬಗ್ಗೆ ಸಂಪೂರ್ಣ ಅರಿವಿದೆ" ಎಂದು ರವೀನಾ ವಿಶ್ಲೇಷಿಸಿದ್ದಾರೆ.

Male actors get paid more Raveena Tandon on remuneration difference

"ನಿಜ ಹೇಳಬೇಕು ಎಂದರೆ ಈಗಿನ ಕಾಲಕ್ಕಿಂತ ಆಗ ಹಣ ಕಮ್ಮಿ ಇರುತ್ತಿತ್ತು. ಆದರೆ ಕಾರ್ಪೋರೆಟ್‌ಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈಗ ಮತ್ತಷ್ಟು ವೃತ್ತಿಪರತೆ ಹೆಚ್ಚಾಗಿದೆ. ಬಾಲಿವುಡ್ ಇಂಡಸ್ಟ್ರಿಯಲ್ಲಿ ಈಗ ನಟಿಯರೇ ನಿರ್ಮಾಪಕಿಯರಾಗುತ್ತಿದ್ದಾರೆ. ಸಂಭಾವನೆಯೂ ಹೆಚ್ಚಾಗಿದೆ. ಇದು ತುಂಬಾ ವೃತ್ತಿಪರವಾಗಿ ಕೆಲಸ ಮಾಡುವ ಹಾದಿಯಾಗಿದೆ" ಎಂದು ರವೀನಾ ಹೇಳಿದ್ದಾರೆ.

1991ರಲ್ಲಿ ಬಂದ 'ಪತ್ತರ್‌ ಕೆ ಫೂಲ್' ಚಿತ್ರದಲ್ಲಿ ರವೀನಾ ಟಂಡನ್ ಮೊದಲ ಬಾರಿ ನಟಿಸಿದ್ದರು. ಬಳಿಕ 'ಕ್ಷತ್ರಿಯ', 'ಪರಂಪರ', 'ದಿಲ್ವಾಲೆ', 'ಲಾಡ್ಲಾ', 'ಜಿದ್ದಿ', 'ದೀವಾನ ಮಸ್ತಾನ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಅದೇ ಸಮಯದಲ್ಲಿ 'ಉಪೇಂದ್ರ' ಸಿನಿಮಾ ಮೂಲಕ ಕನ್ನಡಕ್ಕೆ ಬಂದರು.

ಉಪ್ಪಿ ನಿರ್ದೇಶಿಸಿ ನಟಿಸಿದ ಈ ಚಿತ್ರದಲ್ಲಿ ಕೀರ್ತಿ ಪಾತ್ರದಲ್ಲಿ ಗಮನ ಸೆಳೆದರು. 'ಮಸ್ತ್ ಮಸ್ತ್ ಹುಡ್ಗಿ ಬಂದ್ಲು' ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದು ರಂಜಿಸಿದರು. ಒಟ್ನಲ್ಲಿ 90ರ ದಶಕದಲ್ಲಿ ರವೀನಾ ಕ್ರೇಜ್ ಜೋರಾಗಿತ್ತು. 2004ರಲ್ಲಿ ನಿರ್ಮಾಪಕ ಅನಿಲ್ ತದಾನಿ ಕೈ ಹಿಡಿದ ರವೀನಾ ಆ ಬಳಿಕ ಕೂಡ ಸಿನಿಮಾಗಳಲ್ಲಿ ನಟಿಸಿದರು. ನಟ ಅಕ್ಷಯ್ ಕುಮಾರ್ ಜೊತೆ ಡೇಟಿಂಗ್ ನಡೆಸಿದ್ದ ಚೆಲುವೆ ಬಳಿಕ ದೂರಾಗಿದ್ದರು.

More from Filmibeat

English summary
Raveena Tandon opens up on her salary and pay parity;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X