ಬಿಗ್ ಬಾಸ್‌ನಲ್ಲಿ ಅರಳಿದ ಪ್ರೀತಿ,ವಿಚ್ಛೇದನದಲ್ಲಿ ಅಂತ್ಯ?ಗಣೇಶ್‌ಗೆ ನಾಯಕಿಯಾಗಿದ್ದ ನಟಿಯ ದಾಂಪತ್ಯದಲ್ಲಿ ಬಿರುಗಾಳಿ ?

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.

ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ. ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಯುವಿಕಾ ಚೌಧರಿ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ.

Maleyali Jotheyali actress Yuvika Chaudhary finally reacts to divorce rumours with Prince Narula

ಹೌದು, ಯುವಿಕಾ ಚೌಧರಿ.. ಅಂದಕಾಲತ್ತಿಲ್‌ನ ಬಾಲಿವುಡ್ ಚೆಲುವೆ. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮಳೆಯಲಿ ಜೊತೆಯಲಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದ ಸುಂದರಿ. ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹತ್ ಹತ್ರ 23 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಯುವಿಕಾ ಬಿಗ್ ಬಾಸ್ ಸೇರಿ ಅನೇಕ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇಂಥಾ ಯುವಿಕಾ ಚೌಧರಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಯುವಿಕಾ ತಮ್ಮ ಗಂಡ ಪ್ರಿನ್ಸ್ ನರುಲಾ ಅವರಿಂದ ಬೇಸತ್ತು ಮನೆಯಿಂದ ಹೊರ ಬಂದಿದ್ದಾರೆ ಎಂಬ ಮಾತು ಮುಂಬೈನಲ್ಲೆಡೆ ಕೇಳಿ ಬರುತ್ತಿದೆ. ಈ ಅಂತೆ-ಕಂತೆಗಳಿಗೆಲ್ಲ ಈಗ ಯುವಿಕಾ ಚೌಧರಿ ಉತ್ತರವನ್ನು ನೀಡಿದ್ದಾರೆ. ವಿಚ್ಛೇದನದ ಪ್ರಶ್ನೆಯನ್ನು ಕೇಳಿದ್ದಕ್ಕೆ ಕೆರಳಿ ಕೆಂಡವಾಗಿದ್ದಾರೆ.

E ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಯುವಿಕಾ ನಾನು ನನ್ನ ಗಂಡನ ಮನೆಯಿಂದ ಹೊರ ಬಂದಿದ್ದು ನಿಜಾ ಹಾಗಂಥ ನಮ್ಮ ನಡುವೆ ಸಮಸ್ಯೆ ಇದೆ ಎಂದು ಅರ್ಥ ಅಲ್ಲ ಎಂದು ಹೇಳಿದ್ದಾರೆ. ಗಂಡ-ಹೆಂಡತಿ ಅಂದ ಮೇಲೆ ಸರಸ-ವಿರಸ ಇದ್ದಿದ್ದೇ ಎಂದಿರುವ ಯುವಿಕಾ ಚೌಧರಿ ನಮ್ಮ ಮನೆಯನ್ನು ನಾವು ರೀನೋವೆಟ್ ಮಾಡುತ್ತಿದ್ದೇವೆ, ಅಲ್ಲಿ ಕೆಲಸ ನಡೆಯುತ್ತಿದೆ ಹೀಗಾಗಿ ನಾನು ನನ್ನ ಮಗಳ ಜೊತೆ ನಾನು ನನ್ನ ತಾಯಿಯ ಮನೆಯಲ್ಲಿ ಬಂದು ವಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಸಾಂಸಾರಿಕ ಬದುಕಿನ ಬಗ್ಗೆ, ವ್ಯೆಯಕ್ತಿಕ ಜೀವನದ ಬಗ್ಗೆ ಯಾರಿಗೂ ಸ್ಪಷ್ಟನೆ ನೀಡುವ ಅವಶ್ಯಕತೆ ನನಗೆ ಇಲ್ಲ ಹೀಗಾಗಿಯೇ ನಾನು ಈ ಗಾಳಿ ಸುದ್ದಿಗಳಿಗೆ ಇಲ್ಲಿಯವರೆಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಕೂಡ ಯುವಿಕಾ ಚೌಧರಿ ಹೇಳಿದ್ದಾರೆ.

ಅಂದ್ಹಾಗೇ ಯುವಿಕಾ ಮತ್ತು ಪ್ರಿನ್ಸ್ ನರುಲಾ 2015ರಲ್ಲಿ ಹಿಂದಿಯಲ್ಲಿ ಪ್ರಸಾರವಾದ ಬಿಗ್‌ ಬಾಸ್ 9ನೇ ಸೀಸನ್‌ನಲ್ಲಿ ಸ್ಫರ್ಧಿಗಳಾಗಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.ಆ ನಂತರ ಮನೆಯಿಂದ ವಿಜೇತರಾಗಿ ಹೊರ ಬಂದ ಪ್ರಿನ್ಸ್ ನರುಲಾ 2018ರಲ್ಲಿ ಯುವಿಕಾ ಜೊತೆ ಮದುವೆಯಾದರು. ಕಳೆದ ವರ್ಷವಷ್ಟೇ ಇಬ್ಬರು ತಮ್ಮ ಮಗುವನ್ನು ಸ್ವಾಗತಿಸಿದ್ದಾರೆ. ಅಕ್ಟೋಬರ್ 19-2024ರಂದು ಜನಿಸಿದ ಹೆಣ್ಣು ಮಗುವಿಗೆ ಎಕ್ಲೀನ್ ಎಂದು ಹೆಸರನ್ನಿಟ್ಟಿದ್ದಾರೆ. ಸದ್ಯ ಯುವಿಕಾ ಚೌಧರಿ ತಮ್ಮ ವಿಚ್ಛೇದನದ ವದಂತಿಯನ್ನು ತಳ್ಳಿ ಹಾಕಿದ್ದು ಶೀಘ್ರದಲ್ಲಿಯೇ ಪತಿಯ ಮನೆಗೆ ಮರಳಿ ಹೋಗುವುದಾಗಿ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X