»   » 'ಡರ್ಟಿ ಪೊಲಿಟಿಕ್ಸ್'ಗೆ ಮಲ್ಲಿಕಾ ಶೆರಾವತ್ ಎಂಟ್ರಿ

'ಡರ್ಟಿ ಪೊಲಿಟಿಕ್ಸ್'ಗೆ ಮಲ್ಲಿಕಾ ಶೆರಾವತ್ ಎಂಟ್ರಿ

Posted By:
Subscribe to Filmibeat Kannada
ತಮ್ಮ ಸೆಕ್ಸಿ ಸಿಂಬಲ್ ಮೂಲಕ ಪಡ್ಡೆಗಳ ಹೃದಯದಲ್ಲಿ ರಂಗೋಲಿ ಬಿಡಿಸಿದ್ದ ತಾರೆ ಮಲ್ಲಿಕಾ ಶೆರಾವತ್. ಇನ್ನೇನು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸಿನಿಮಾ ತಾರೆಗಳು ಹೊಸ ಹೊಸ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ. ಈಗ ಮಲ್ಲಿಕಾ ಶೆರಾವತ್ ಸಹ ಅಷ್ಟೇ ತಮ್ಮ ವೇಷ ಭೂಷಣ ಬದಲಾಯಿಸಿದ್ದಾರೆ.

ಕೆಸಿ ಬಕಾಡಿಯಾ ಅವರ ಡರ್ಟಿ ಪಿಕ್ಚರ್ ಚಿತ್ರದಲ್ಲಿ ಅನೋಕಿ ದೇವಿ ಪಾತ್ರದಲ್ಲಿ ಮಲ್ಲಿಕಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಕೆಲವು ಪೋಸ್ಟರ್ ಗಳು ಬಿಡುಗಡೆಯಾಗಿದ್ದು ಗರತಿ ಗೌರಮ್ಮನ ಗೆಟಪ್ ನಲ್ಲಿರುವ ಮಲ್ಲಿಕಾರನ್ನು ಅಡಿಯಿಂದ ಮುಡಿತನಕ ನೋಡುವಂತಾಗಿದೆ.

ಡರ್ಟಿ ಪೊಲಿಟಿಕ್ಸ್ ಚಿತ್ರದ ಕಥೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ರಾಜಸ್ತಾನದ ಗುರ್ಜಾರಿ ಸಮುದಾಯಕ್ಕೆ ಭನ್ವಾರಿ ದೇವಿ ಕುರಿತಾದದ್ದು ಎನ್ನಲಾಗಿತ್ತು. ಆದರೆ ಚಿತ್ರದ ನಿರ್ದೇಶಕರು ಇದು ಭನ್ವಾರಿ ದೇವಿ ಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡರ್ಟಿ ಪಿಕ್ಚರ್ ನಂತೆಯೇ ಈ ಚಿತ್ರದ ಬಗೆಗೂ ಬಾಲಿವುಡ್ ನಲ್ಲಿ ಕುತೂಹಲ ಮೂಡಿದೆ.

ಹಾಗಿದ್ದರೆ ಈ ಅನೋಕಿ ದೇವಿ ಯಾರು? ಅದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯಾಗುವ ತನಕ ಕಾಯಬೇಕು. ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಮುಂತಾದವರಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)

English summary
Hot beauty Mallika Sherawat dons a very de-glam role for her forthcoming K C Bokadia's film 'Dirty Politics'. Not a news anymore, the hottie plays the role of Anokhi Devi, an orphan, in the political drama.
Please Wait while comments are loading...