ಹೀರೋಗಳ ಜೊತೆ ಮಲಗಲು ನಿರಾಕರಿಸಿದ್ದಕ್ಕೆ ಅವಕಾಶಗಳೇ ಇಲ್ಲವಾಯಿತು; ಮಲ್ಲಿಕಾ ಶಾಕಿಂಗ್ ಹೇಳಿಕೆ

ಬಾಲಿವುಡ್ ನ ಹಾಟ್ ನಟಿ ಎಂದೇ ಖ್ಯಾತಿಗಳಿಸಿರುವ ನಟಿ ಮಲ್ಲಿಕಾ ಶೆರಾವತ್ ಸದ್ಯ ಸಿನಿಮಾಗಳಿಂದ ದೂರ ಸರಿದಿದ್ದಾರೆ. ವೃತ್ತಿ ಜೀವನದಲ್ಲಿ ತರಹೇವಾರಿ ಪಾತ್ರಗಳನ್ನು ನಿರ್ವಹಿಸಿರುವ ಮಲ್ಲಿಕಾ ಸಹ ಕಲಾವಿದರನ್ನು ಕಂಗೆಡಿಸಿದ್ದರು. ಬೋಲ್ಡ್ ನಟಿ ಎಂದೆ ಖ್ಯಾತಿ ಗಳಿಸಿರುವ ಮಲ್ಲಿಕಾ ಬಾಲಿವುಡ್ ತನ್ನದೆ ಆದ ಅಭಿಮಾನಿ ಬಳಗ ಸಂಪಾದಿಸಿದ್ದಾರೆ.

ತೆರೆಮೇಲೆ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಲ್ಲಿಕಾ ನಿಜ ಜೀವನದಲ್ಲೂ ಹಾಗೆ ಎಂದು ಅನೇಕರು ಭಾವಿಸುತ್ತಿದ್ದರು ಎಂದು ಮಲ್ಲಿಕಾ ಹೇಳಿದ್ದಾರೆ. 2018ರಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮಲ್ಲಿಕಾ ತೆರೆಮೇಲಿನ ನನ್ನ ಪಾತ್ರಗಳನ್ನು ನೋಡಿ ನಿಜ ಜೀವನದಲ್ಲೂ ತನ್ನಿಂದ ಅದನ್ನೇ ಬಯಸಿದ್ದರು, ಹಾಗಾಗಿ ನನಗೆ ತಾನು ಅನೇಕ ಪಾತ್ರಗಳನ್ನು ನಿರಾಕರಿಸಬೇಕಾಯಿತು, ಅವಕಾಶಗಳು ಸಹ ಕಡಿಮೆಯಾಯಿತು ಎನ್ನುವ ಶಾಕಿಂಗ್ ಹೇಳಿಕೆ ನೀಡಿದ್ದರು. ಮುಂದೆ ಓದಿ...

ಅವಕಾಶಕ್ಕಾಗಿ ಎಲ್ಲೂ ರಾಜಿ ಆಗಿಲ್ಲ

ಅವಕಾಶಕ್ಕಾಗಿ ಎಲ್ಲೂ ರಾಜಿ ಆಗಿಲ್ಲ

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಲ್ಲಿಕಾ ಶೆರಾವತ್ ತಾನು ತುಂಬಾ ಶಕ್ತಿವಂತಳು ಮತ್ತು ತನ್ನ ಬಗ್ಗೆ ತನಗೆ ತುಂಬಾ ಹೆಮ್ಮೆ ಹೊಂದಿದ್ದರಿಂದ ಅವಕಾಶಕ್ಕಾಗಿ ಎಲ್ಲೂ ರಾಜಿ ಮಾಡಿಕೊಳ್ಳಲು ಹೋಗಿಲ್ಲ ಎಂದು ಮಲ್ಲಿಕಾ ಈ ಹಿಂದೆ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು.

ನಾವು ನೈತಿಕತೆ ಇಲ್ಲದ ಮಹಿಳೆಯರಾ?-ಮಲ್ಲಿಕಾ

ನಾವು ನೈತಿಕತೆ ಇಲ್ಲದ ಮಹಿಳೆಯರಾ?-ಮಲ್ಲಿಕಾ

"ನನ್ನ ಮೇಲೆ ಅನೇಕ ಆರೋಪಗಳು ಮತ್ತು ಅವರೇ ತೀರ್ಮಾನಕ್ಕೆ ಬರುತ್ತಿದ್ದರು. ನೀವು ಚಿಕ್ಕ ಸ್ಕರ್ಟ್ ಗಳನ್ನು ಧರಿಸಿದರೆ, ತೆರೆಮೇಲೆ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡರೆ ನಾವು ನೈತಿಕತೆ ಇಲ್ಲದ ಮಹಿಳೆ. ಆದರೆ ಪುರುಷರು ನಿಮ್ಮೊಂದಿಗೆ ಸ್ವಾತ್ರಂತ್ರ್ಯ ತೆಗೆದುಕೊಳ್ಳುತ್ತಾರೆ. ಈ ಅನುಭವ ನನಗೂ ಆಗಿದೆ" ಎಂದಿದ್ದರು.

ಖಾಸಗಿಯಾಗಿ ಯಾಕೆ ಮಾಡುವುದಿಲ್ಲ ಎನ್ನುತ್ತಿದ್ದರು

ಖಾಸಗಿಯಾಗಿ ಯಾಕೆ ಮಾಡುವುದಿಲ್ಲ ಎನ್ನುತ್ತಿದ್ದರು

"ನನ್ನನ್ನು ಅನೇಕ ಪ್ರಾಜೆಕ್ಟ್ ಗಳಿಂದ ಹೊರಹಾಕಲಾಯಿತು. ಏಕೆಂದರೆ ಹೀರೋಗಳು, ನೀವು ನನ್ನೊಂದಿಗೆ ಯಾಕೆ ಆಪ್ತವಾಗಿ ಇರಲು ಸಾಧ್ಯವಿಲ್ಲ? ನೀವು ತೆರೆಮೇಲೆ ಮಾಡುವುದನ್ನು ನನ್ನೊಂದಿಗೆ ಯಾಕೆ ಖಾಸಗಿಯಾಗಿ ಮಾಡುವುದಿಲ್ಲ. ಏನು ಸಮಸ್ಯೆ ಇದೆ? ಎನ್ನುತ್ತಿದ್ದರು. ಇದರಿಂದ ನಾನು ಹಲವಾರು ಯೋಜನೆಗಳನ್ನು ಕಳೆದುಕೊಂಡಿದ್ದೇನೆ. ಇದು ನಮ್ಮ ದೇಶದಲ್ಲಿ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿ" ಎಂದು ಹೇಳಿದ್ದರು.

ಈ ಕಾರಣಕ್ಕೆ ನಾನು ಲಾಸ್ ಏಂಜಲೀಸ್ ಹೋದೆ-ಮಲ್ಲಿಕಾ

ಈ ಕಾರಣಕ್ಕೆ ನಾನು ಲಾಸ್ ಏಂಜಲೀಸ್ ಹೋದೆ-ಮಲ್ಲಿಕಾ

ಅಮೆರಿಕದಲ್ಲಿ ಮಹಿಳೆಯರಿಗೆ ಇರುವ ಸ್ವಾತ್ರಂತ್ರ್ಯದಿಂದ ಲಾಸ್ ಏಂಜಲೀಸ್ ಗೆ ತೆರಳಿರುವುದಾಗಿ ಹೇಳಿದ್ದರು. "ನಾನು ನನ್ನ ಸಮಯವನ್ನು ಲಾಸ್ ಏಂಜಲೀಸ್ ಮತ್ತು ಇಂಡಿಯಾದ ನಡುವೆ ವಿಂಗಡನೆ ಮಾಡಿದೆ. ಅಮೆರಿಕದಲ್ಲಿ ಸಾಮಾಜಿಕ ಸ್ವಾತಂತ್ರ್ಯ ಅನುಭವಿಸಿ ಭಾರತಕ್ಕೆ ವಾಪಸ್ ಆದಾಗ ನಿಜಕ್ಕೂ ಖಿನ್ನತೆಯುಂಟುಮಾಡುತ್ತದೆ" ಎಂದು ಹೇಳಿದ್ದರು.

Recommended Video

Sandesh Prince ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Filmibeat Kannada
ಮಲ್ಲಿಕಾ ಶೆರಾವತ್ ಸಿನಿಮಾಗಳು

ಮಲ್ಲಿಕಾ ಶೆರಾವತ್ ಸಿನಿಮಾಗಳು

2002ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮಲ್ಲಿಕಾ ವಿಶೇಷ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದರು. ಬಳಿಕ 2003ರಲ್ಲಿ ಬಂದ ಖ್ವಾಹಿಶ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಬಂದ ಮರ್ಡರ್ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ತಂದು ಕೊಡ್ತು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಮಲ್ಲಿಕಾ 2017ರ ಬಳಿಕ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ 2019ರಲ್ಲಿ ವೆಬ್ ಸೀರಿಸ್ ಮೂಲಕ ಒಟಿಟಿಯಲ್ಲಿ ಮಿಂಚಿದ್ದರು. ಬಳಿಕ ಯಾವುದೇ ಸಿನಿಮಾಗಳಲ್ಲಿ ಮಲ್ಲಿಕಾ ಕಾಣಿಸಿಕೊಂಡಿಲ್ಲ. ಸದ್ಯ ಮಲ್ಲಿಕಾ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನೆಲೆಸಿದ್ದಾರೆ. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದಲ್ಲೇ ಸಮಯ ಕಳೆಯುತ್ತಿದ್ದಾರೆ.

More from Filmibeat

English summary
Mallika Sherawat opens up on losing film roles because she refused to get intimate with co-stars off-screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X