ದುಬೈನಲ್ಲಿ ಅವತ್ತು ಏನಾಯ್ತು ಗೊತ್ತಾ, ಬಾಲಿವುಡ್ ಮೇಲೆ ಬಾಂಬ್ ಎಸೆದರು ನೋಡಿ ಮಲ್ಲಿಕಾ ಶೆರಾವತ್..!
ಬಣ್ಣದ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ. ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ.
ಇನ್ನೂ Me too ಅಭಿಯಾನದ ಪರಿಣಾಮದಿಂದ ಈ ಹಿಂದೆ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ಪ್ರೇಕ್ಷಕರಿಗೂ ಪ್ರತಿಷ್ಠಿತರ ಅಸಲಿಯತ್ತು ಪರಿಚಯವಾಗಿದೆ. ಆದರೂ ಅನೇಕರಿಗೆ ಇನ್ನೂ ಬುದ್ದಿ ಬಂದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಮಲಯಾಳಂ ಚಿತ್ರರಂಗದ ಕಾಮಕಾಂಡವನ್ನು ಹೇಮಾ ಆಯೋಗದ ವರದಿ ಜಗಜ್ಜಾಹೀರು ಮಾಡಿದ ಬೆನ್ನಲ್ಲಿಯೇ ಹತ್ತಾರು ಪ್ರಕರಣಗಳು ಮತ್ತೆ ಆಚೆ ಬಂದಿವೆ. ಕನ್ನಡ, ತಮಿಳು, ತೆಲುಗು, ಹಿಂದಿ,ಸೇರಿದಂತೆ ಎಲ್ಲ ಇಂಡಸ್ಟ್ರಿಯಲ್ಲೂ ನಮ್ಮಲ್ಲಿಯೂ ಒಂದು ಸಮಿತಿ ರಚನೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದರ ನಡುವೆ ಮಲ್ಲಿಕಾ ಶೆರವಾತ್ ಬಾಲಿವುಡ್ ಮೇಲೆ ಬಾಂಬ್ ಎಸೆದಿದ್ದಾರೆ. ಆ ಸ್ಟಾರ್ ಮಧ್ಯರಾತ್ರಿ ನನ್ನನ್ನೂ ರೂಮ್‌ಗೆ ಬರುವಂತೆ ಒತ್ತಾಯ ಮಾಡಿದ್ದ ಎಂದಿದ್ದಾರೆ.

ನಿಮಗೊಂದು ಕಥೆ ಹೇಳ್ಲಾ ಎಂದು ತಮ್ಮ ಮಾತು ಶುರು ಮಾಡಿರುವ ಮಲ್ಲಿಕಾ ''ನಾನೊಂದು ದೊಡ್ಡ ಚಿತ್ರದ ಭಾಗವಾಗಿದ್ದೆ, ದುಬೈನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬಹುತಾರಾಗಣದ ಸಿನಿಮಾ ಅದು. ವಿಶೇಷ ಅಂದರೆ ಸೂಪರ್ ಹಿಟ್ ಆದ ಈ ಚಿತ್ರದಲ್ಲಿ ನಾನು ಹಾಸ್ಯ ಪಾತ್ರವನ್ನು ಮಾಡಿದ್ದೆ, ನನ್ನ ಈ ಪಾತ್ರ ಪ್ರೇಕ್ಷಕರಿಗೆ ಕೂಡ ತುಂಬಾ ಇಷ್ಟವಾಗಿತ್ತು'' ಎಂದು ಹೇಳಿದ್ದಾರೆ. ಮುಂದುವರೆದು.. ಈ ಚಿತ್ರದ ಹೀರೋ ನಡುರಾತ್ರಿ 12 ಘಂಟೆಗೆ ನನ್ನ ರೂಮ್‌ನ ಬಾಗಿಲು ಮುರಿದು ಹೋಗುವ ಹಾಗೇ ಬಡೆಯುತ್ತಿದ್ದ, ನನ್ನೊಂದಿಗೆ ಆತ ಹೇಗಾದರೂ ಮಾಡಿ ಮಲಗಬೇಕೆಂದು ಬಯಸಿದ್ದ ಎಂದು ಹೇಳಿದ್ದಾರೆ. ಸಹಜವಾಗಿ ನಾನು ಆತನ ಬೇಡಿಕೆಯನ್ನು ಈಡೇರಿಸಲಿಲ್ಲ, ರಾಜಿ ಮಾಡಿಕೊಳ್ಳಲಿಲ್ಲ. ಈ ಕಾರಣಕ್ಕೆ ಆ ನಂತರ ಆ ಹೀರೋ ನನ್ನ ಜೊತೆ ಯಾವತ್ತು ಮತ್ತೆ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.
ಮಲ್ಲಿಕಾ ಅವರ ಈ ಮಾತು ಈಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ನಿಜಾ, ಮಲ್ಲಿಕಾ ಶೆರಾವತ್ ಆ ಹೀರೋ ಯಾರು ಎಂದು ಎಲ್ಲಿಯೂ ಹೇಳಿಲ್ಲ. ಆದರೆ.. ಅನೇಕರು ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಅವರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಯಾಕೆಂದರೆ.. ಮಲ್ಲಿಕಾ ಮಾತನಾಡುತ್ತಿರುವ ಸಿನಿಮಾ ಅಕ್ಷಯ್ ಕುಮಾರ್ ಅಭಿನಯದ ವೆಲ್ ಕಂ ಆಗಿರಬಹುದು ಎನ್ನುವ ಗುಮಾನಿ ಅನೇಕರದ್ದು. ಇನ್ನೂ ವೆಲ್ ಕಂ ಚಿತ್ರದ ಚಿತ್ರೀಕರಣ ನಡೆದಿದ್ದು ಕೂಡ ದುಬೈನಲ್ಲಿ. ಇಷ್ಟೇ ಅಲ್ಲ ಮಲ್ಲಿಕಾ ಶೆರಾವತ್ ಹೇಳಿರುವಂತೆ ಈ ಚಿತ್ರದಲ್ಲಿ ತಾರೆಯರ ದೊಡ್ಡ ದಂಡೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮಲ್ಲಿಕಾ ಶೆರಾವತ್ ಈ ಚಿತ್ರದಲ್ಲಿ ಕಾಮಿಡಿ ರೋಲ್ ಪ್ಲೇ ಮಾಡಿದ್ದಾರೆ. ಈ ಕಾರಣಕ್ಕೆ ಆ ಹೀರೋ ಅಕ್ಷಯ್ ಕುಮಾರ್ ಇರಬಹುದು ಎನ್ನುವ ಅಭಿಪ್ರಾಯವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಕ್ಷಯ್ ಕುಮಾರ್ ಶಿಸ್ತಿಗೆ ಮತ್ತೊಂದು ಹೆಸರು. ರಾತ್ರಿ ಬೇಗ ಮಲಗಿ ಬೆಳ್ಳಿಗ್ಗೆ ಬೇಗ ಎದ್ದೇಳುವ ಹವ್ಯಾಸ ರೂಡಿಸಿಕೊಂಡವರು. ಇಂತಹ ಅಕ್ಷಯ್ ಕುಮಾರ್ ಈ ತರಹದ ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವ ವಾದ ಮಾಡುತ್ತಿದ್ದಾರೆ.
ಅಂದ್ಹಾಗೇ ಈ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಕೂಡ ಇದ್ದರು. ಇನ್ನೂ.. ಇದೇ ನಾನಾ ಪಾಟೇಕರ್ ಅವರ ಮೇಲೆ ಹಿಂದೆ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆ ಮಲ್ಲಿಕಾ ಶೆರಾವತ್ ಹೇಳುತ್ತಿರುವ ವ್ಯಕ್ತಿ ಅಕ್ಷಯ್ ಕುಮಾರ್ ಅಲ್ಲ ಬದಲಿಗೆ ನಾನಾ ಪಾಟೇಕರ್ ಆಗಿದ್ದರೂ ಆಗಿರಬಹುದು ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











