ಹೀರೋ ಜೊತೆ ಡೇಟ್ ಮಾಡಿಲ್ಲ, ಅದಕ್ಕೆ ಸಿನಿಮಾ ಸಿಕ್ಕಿಲ್ಲ: ಮಲ್ಲಿಕಾ ಶೆರಾವತ್

42 ವರ್ಷದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಒಂದು ಸಮಯದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದರು. ಕನಿಷ್ಠ ಸ್ಪೆಷಲ್ ಹಾಡುಗಳಿಗಾದರೂ ಮಲ್ಲಿಕಾ ಇರ್ತಿದ್ರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಲ್ಲಿಕಾ ಸಿನಿಮಾ ಮಾಡೋದು ಅಪರೂಪ ಆಗಿದೆ.

ಹೀಗಿರುವಾಗ, ವೆಬ್ ಸೀರಿಸ್ ಗೆ ಮಲ್ಲಿಕಾ ಶೆರಾವತ್ ಡೆಬ್ಯೂ ಮಾಡ್ತಿದ್ದಾರೆ. ತುಷಾರ್ ಕಪೂರ್ ಜೊತೆ ಸುಮಾರು 17 ವರ್ಷದ ನಂತರ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇಷ್ಟು ದಿನ ಯಾಕೆ ಸಿನಿಮಾಗಳನ್ನ ಮಾಡಿಲ್ಲ ಎಂದು ಕೇಳಿದ್ದಕ್ಕೆ ಅಚ್ಚರಿ ಸಂಗತಿಯೊಂದನ್ನ ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಿಕಾ ಶೆರಾವತ್ ''ನಟರ ಜೊತೆ ನಾನು ಡೇಟಿಂಗ್ ಹೋಗಿಲ್ಲ ಎಂಬ ಕಾರಣಕ್ಕೆ ನನಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿಲ್ಲ'' ಎಂದು ನೇರವಾಗಿ ಹೇಳಿದ್ದಾರೆ. ಇಂಡಸ್ಟ್ರಿಯಲ್ಲಿ ಬಹುತೇಕ ನಟ, ನಿರ್ದೇಶಕ ಹೀರೋಗಳು ತಮ್ಮ ಚಿತ್ರಗಳಲ್ಲಿ ಅವರದ್ದೇ ಗರ್ಲ್ ಫ್ರೆಂಡ್ ಗಳನ್ನ ನೋಡಲು ಬಯಸುತ್ತಾರೆ. ಹಾಗಾಗಿ, ನಮಗೆ ಅವಕಾಶ ಸಿಗಲ್ಲ'' ಎಂದು ಆರೋಪಿಸಿದ್ದಾರೆ.

Mallika sherawat shocking reaction about film industry

ಇನ್ನು ಮೀಟೂ ಆರೋಪದ ಬಗ್ಗೆ ಪ್ರಶ್ನಿಸಿದ್ದಕ್ಕೆ ''ನನ್ನ ಬಳಿ ಯಾರು ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟಿಲ್ಲ. ನಾನು ತುಂಬಾ ಬೋಲ್ಡ್ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ನನ್ನ ಬಳಿ ಈ ರೀತಿ ಮಾತನಾಡಲು ಹೆದರುತ್ತಿದ್ದರು. ಮೀಟೂ ಅಭಿಯಾನ ಒಳ್ಳೆಯದು'' ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಮದುವೆ ಬಗ್ಗೆ ಮಾತನಾಡಿದ ಮಲ್ಲಿಕಾ ''ನಾನು ಸಿಂಗಲ್, ಸಿಂಗಲ್ ಆಗಿಯೇ ಇರಲು ಇಚ್ಛಿಸುತ್ತೇನೆ. ನನಗೆ ಇಷ್ಟವಾದ ಜೀವನ ನಡೆಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ಹೀಗೆ ಇರುತ್ತೇನೆ'' ಎಂದು ಹೇಳಿದರು.

Mallika sherawat shocking reaction about film industry

ಏಕ್ತಾ ಕಪೂರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಬೂ ಸಬ್ಕಿ ಫತೇಗಿ' ವೆಬ್ ಸರಣಿಯಲ್ಲಿ ಮಲ್ಲಿಕಾ ನಟಿಸುತ್ತಿದ್ದಾರೆ. ಜೂನ್ 27 ರಂದು ಈ ವೆಬ್ ಸೀರಿಸ್ ಪ್ರದರ್ಶನವಾಗಲಿದೆ.

More from Filmibeat

English summary
Bollywood actress Mallika sherawat gives shocking reaction about film industry. why she did not get so much offers from industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X