ಚಾಕು ಇರಿದ ಭಯಾನಕ ಘಟನೆ ವಿವರಿಸಿದ ನಟಿ ಮಾಲ್ವಿ ಮಲ್ಹೋತ್ರಾ

ಬಾಲಿವುಡ್ ನಟಿ ಮಾಲ್ವಿ ಮಲ್ಹೋತ್ರಾ ಚಾಕು ಇರಿದ ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ಮಾಲ್ವಿ ವೆಬ್ ಪೋರ್ಟಲ್ ಜೊತೆ ಮಾತನಾಡಿ, ಆರೋಪಿ ಯೋಗೇಶ್ ಮುಖಕ್ಕೆ ಚಾಕು ಇರಿಯಲು ಬಯಸಿದ್ದ ಎಂದು ಹೇಳಿದ್ದಾರೆ.

ಅಕ್ಟೋಬರ್ 27ರಂದು ಸಂಜೆ ಟಿವಿ ಶೋ ಉಡಾನ್, ಸಿನಿಮಾ ಹೋಟೆಲ್ ಮಿಲನ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮಾಲ್ವಿ ಮಲ್ಹೋತ್ರಾಗೆ ಆಕೆಯ ಫೇಸ್‌ಬುಕ್ ಗೆಳೆಯ ಯೋಗೇಶ್ ಮಣಿಪಾಲ್ ಸಿಂಗ್ ಮುಂಬೈ ನ ವರ್ಸೋವಾ ರಸ್ತೆಯಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

ಈ ಬಗ್ಗೆ ಮಾತನಾಡಿರುವ ನಟಿ ಮಾಲ್ವಿ, ಯೋಗೇಶ್ ಮಣಿಪಾಲ್ ಸಿಂಗ್ ಮೊದಲ ಬಾರಿಗೆ 2020 ಜನವರಿಯಲ್ಲಿ ನಟಿ ಮಾಲ್ವಿಯನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಮ್ಯೂಸಿಕ್ ವಿಡಿಯೋದಲ್ಲಿ ನಟಿಸುವಂತೆ ಕೇಳಿಕೊಂಡಿದ್ದನಂತೆ. ಆ ನಂತರ ಮತ್ತೆ ಮಾಲ್ವಿಯನ್ನು ಭೇಟಿಯಾಗಿ ಪ್ರೀತಿಯ ವಿಚಾರ ಪ್ರಸ್ತಾಪಿಸಿದ್ದೇನೆ. ಅಲ್ಲದೆ ಮದುವೆಯಾವುದಾಗಿ ಕೇಳಿಕೊಂಡಿದ್ದಾನೆ. ಆದರೆ ಮದುವೆ ವಿಚಾರವನ್ನು ನಟಿ ಮಾಲ್ವಿ ನಿರಾಕರಿಸಿದ್ದಾರೆ. ಮುಂದೆ ಓದಿ..

ದುಬೈಯಿಂದ ವಾಪಸ್ ಆಗಿ 15 ದಿನಗಳಾಗಿತ್ತು

ದುಬೈಯಿಂದ ವಾಪಸ್ ಆಗಿ 15 ದಿನಗಳಾಗಿತ್ತು

ಚಾಕು ಇರಿಯುವ 15 ದಿನಗಳ ಮೊದಲು ನಟಿ ಮಾಲ್ವಿ ದುಬೈನಿಂದ ವಾಪಸ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾಲ್ವಿ, "ನಾನು ದುಬೈನಿಂದ ಬಂದಿದ್ದೇನೆ. 15 ದಿನಗಳು ದುಬೈನಲ್ಲಿದ್ದೆ. ಆತನ ಕಿರುಕುಳ ನಿಲ್ಲುತ್ತದೆ ಎಂದು ಭಾವಿಸಿದ್ದೆ. ಆದರೆ ಯೋಗೇಶ್ ನನ್ನನ್ನು ಫೋನ್ ನಲ್ಲಿ ಹಿಂಬಾಲಿಸುತ್ತಿದ್ದನು. ಅವನ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿದ್ದೆ. ಆದರೆ ಬೇರೆ ನಂಬರ್ ಗಳಿಂದ ಫೋನ್ ಮಾಡುತ್ತಿದ್ದ" ಎಂದಿದ್ದಾರೆ.

ಮುಖಕ್ಕೆ ಚಾಕು ಇರಿಯಲು ಬಯಸಿದ್ದ

ಮುಖಕ್ಕೆ ಚಾಕು ಇರಿಯಲು ಬಯಸಿದ್ದ

"ಅಂಧೇರಿಯ ಕೆಫೆಯಲ್ಲಿ ನಾನು ಮೀಟಿಂಗ್ ಮುಗಿಸಿ ಮನೆಗೆ ವಾಪಸ್ ಹೊರಟೆ. ಕೆಫೆಯಿಂದ ನನ್ನ ಮನೆ 5 ನಿಮಿಷದ ದೂರದಲ್ಲಿದೆ. ಇದ್ದಕ್ಕಿದಂತೆ ಯೋಗೇಶ್ ಕಾರಿನಲ್ಲಿ ಬಂದು ಮಾತನಾಡಬೇಕು ಎಂದು ಹೇಳಿದ ಮತ್ತು ಯಾಕೆ ಆತನನ್ನು ಅವಾಯಿಡ್ ಮಾಡುತ್ತಿರುವುದಾಗಿ ಕೇಳಿದ. ನಾನು ಈ ನಾಟಕ ನಿಲ್ಲಿಸು ಎಂದು ಹೇಳಿದೆ. ತಕ್ಷಣ ಕಾರಿನಿಂದ ಇಳಿದು ನನ್ನ ಹೊಟ್ಟೆಗೆ ಚಾಕುವಿನಿಂದ ಇರಿದ. ನನ್ನ ಮುಖಕ್ಕೆ ಚಾಕು ಇರಿಯಲು ಬಯಸಿದ್ದ ಎಂದು ಹೇಳಿದ್ದಾರೆ.

ಮಾಲ್ವಿ ಮನೆ ಬಳಿ ಗಂಟೆಗಟ್ಟಲೆ ಕಾಯುತ್ತಿದ್ದ ಯೋಗೇಶ್

ಮಾಲ್ವಿ ಮನೆ ಬಳಿ ಗಂಟೆಗಟ್ಟಲೆ ಕಾಯುತ್ತಿದ್ದ ಯೋಗೇಶ್

"ನಾನು ಮುಖದ ಮೇಲೆ ಕೈ ಇಟ್ಟುಕೊಂಡಿದ್ದೆ. ಆದರೆ ನನ್ನ ಕೈಗೆ ಕಾಚು ಹಾಕಿದ್ದಾನೆ. ತುಂಬಾ ಗಾಯವಾಗಿದೆ. ನನ್ನ ಎಡಗೈ ಬೆರಳು ಕಟ್ಟಾಗಿದೆ. ತುಂಬಾ ರಸ್ತಸ್ರಾವವಾಗಲು ಪ್ರಾರಂಭಿಸಿತು. ನಾನು ಅಲ್ಲೆ ಕುಸಿದು ಬಿದ್ದೆ" ಎಂದು ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಅಲ್ಲೆ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವ ಇಬ್ಬರು ಆಸ್ಪತ್ರೆಗೆ ಕರೆದೊಯ್ದರು ಎಂದಿದ್ದಾರೆ. ಯೋಗೇಶ್ ನಟಿ ಮಾಲ್ವಿ ಮನೆಹತ್ರ ಹೋಗಿ ಕಾಯುತ್ತಿದ್ದನಂತೆ. ಅಲ್ಲದೆ ಆಕೆಯ ಮನೆಗೆ ಹೂಗಳನ್ನು ಕಳುಹಿಸಿಕೊಡುತ್ತಿದ್ದ ಎಂದು ಹೇಳಿದ್ದಾರೆ.

Recommended Video

ಕುರುಕ್ಷೇತ್ರ ಸಿನಿಮಾ ಮಾಡ್ತೀನಿ ಅಂತ ಬಂದಾಗ ಮುನಿರತ್ನನಿಗೆ ಬೈದು ಕಳ್ಸಿದ್ದೆ | Darshan | Munirathna
ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ

ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ

ಮಾಲ್ವಿ ಮಲ್ಹೋತ್ರಾ ಸದ್ಯ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಬೇಕಾಗುತ್ತೆ.

More from Filmibeat

English summary
Actress Malvi Malhotra reveals the stalker wanted to stab her in the face. She has undergone plastic surgery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X