For Quick Alerts
  ALLOW NOTIFICATIONS  
  For Daily Alerts

  'ರೆಮ್‌ಡೆಸಿವಿರ್‌' ಔಷಧಿಯನ್ನು ತಪ್ಪಾಗಿ ರೆಮೋ ಡಿ ಸೋಜಾ ಎಂದ ಯುವಕ; ವಿಡಿಯೋ ವೈರಲ್

  |

  ಕೊರೊನಾ ವೈರಸ್ ಎರಡನೇ ಅಲೆಯ ಭೀಕರತೆಗೆ ದೇಶ ತತ್ತರಿಸಿ ಹೋಗಿದೆ. ಸೋಂಕಿತರು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ಅತೀ ಹೆಚ್ಚು ಬೇಡಿಕೆ ಇದ್ದ ಔಷಧಿ ರೆಮ್‌ಡೆಸಿವಿರ್‌. ಸೋಂಕಿತರಿಗೆ ನೀಡುವ ಚುಚ್ಚುಮದ್ದು ರೆಮ್‌ಡೆಸಿವಿರ್‌ ಸಿಗದೆ ದೇಶ ಪರದಾಡುತ್ತಿದೆ. ಮತ್ತೊಂದೆಡೆ ಬೇಡಿಕೆ ಹೆಚ್ಚಾದಂತೆ ರೆಮ್‌ಡೆಸಿವಿರ್‌ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

  ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೆಮ್‌ಡೆಸಿವಿರ್‌ ಸಿಗದೆ ಪರದಾಡುತ್ತಿದ್ದ ಯುವಕನೊಬ್ಬ ಮಾಧ್ಯಮದ ಜೊತೆ ಮಾತನಾಡುವಾಗ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ ತಮಾಷೆಯ ಪ್ರಸಂಗ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ ಮಾಡಿ ನಗುತ್ತಿದ್ದಾರೆ.

  ನನ್ನನ್ನು ವಿಲನ್‌ನಂತೆ ಬಿಂಬಿಸಿದರು, ಆದರೆ ನನಗೆ ಬೇಸರವಿಲ್ಲ: ಸುದೀಪ್ನನ್ನನ್ನು ವಿಲನ್‌ನಂತೆ ಬಿಂಬಿಸಿದರು, ಆದರೆ ನನಗೆ ಬೇಸರವಿಲ್ಲ: ಸುದೀಪ್

  ಯುವಕನೊಬ್ಬ ರೆಮ್‌ಡೆಸಿವಿರ್‌ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ರೆಮ್‌ಡೆಸಿವಿರ್‌ ಎನ್ನುವ ಬದಲು ರೆಮೋ ಡಿಸೋಜಾ ಎಂದು ಹೇಳಿದ್ದಾನೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಸ್ವತಃ ಕೊರಿಯೋಗ್ರಾಫರ್ ರೆಮೊ ಡಿಸೋಜ ಶೇರ್ ಮಾಡಿದ್ದಾರೆ. 'ತಮಾಷೆಗಾಗಿ ಮಾತ್ರ. ಈ ವಿಡಿಯೋವನ್ನು ಕೊನೆಯವರೆಗೂ ನೋಡಿ' ಎಂದು ಹೇಳಿದ್ದಾರೆ. ರೆಮೋ ಶೇರ್ ಮಾಡಿರುವ ವಿಡಿಯೋಗೆ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಗಣ್ಯರು ಕಾಮೆಂಟ್ ಮಾಡಿದ್ದಾರೆ. 1.5 ಮಿಲಿಯನ್ ಗೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು 7 ಸಾವಿರಕ್ಕೂ ಅಧಿಕ ಕಾಮೆಂಟ್ ಹರಿದು ಬಂದಿದೆ.

  ರಶ್ಮಿಕಾ ಮಂದಣ್ಣ ಕೈ ಹಿಡಿಯಲಿರುವ ತಮಿಳು ಹುಡುಗ ಯಾರು..? | Filmibeat Kannada

  ಬಾಲಿವುಡ್ ನ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಅನೇಕ ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸಿನಿಮಾ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹೃದಯಾಘಾತಕ್ಕೆ ತುತ್ತಾಗಿದ್ದ ರೆಮೋ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಚೇತರಿಸಿಕೊಂಡಿರುವ ರೆಮೋ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

  English summary
  Man Mistakenly says Remdesivir as Remo D'souza, video goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X