ಡ್ಯಾನ್ಸ್ ಮಾಡುತ್ತಲೇ ಯುವತಿಯ ಬ್ಲೌಸ್ ಓಪನ್; ಯುವಕನಿಗೆ ಛೀಮಾರಿ ಹಾಕಿದ ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

ಇಂದಿನ ಟೆಕ್ನಾಲಜಿ ಯುಗದಲ್ಲಿ ಯುವಕ- ಯುವತಿಯರು ಸಾಮಾಜಿಕ ಜವಾಬ್ದಾರಿಯನ್ನೇ ಮರೆಯುತ್ತಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದ ಸಮಾಜದಲ್ಲಿ ಅಭದ್ರತೆಯನ್ನು ಹೆಚ್ಚಿಸಿದೆ. ಪ್ರತಿ ಒಂದಲ್ಲ ಒಂದು ಘಟನೆಗಳು ಎದುರಾಗುತ್ತಲೇ ಇವೆ. ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಅವುಗಳನ್ನೇ ಇಟ್ಟುಕೊಂಡು ಕಾಮೆಂಟ್‌ಗಳನ್ನು ಮಾಡುವುದೇ ಹೆಚ್ಚಾಗಿದೆ.

ಕೆಲವರು ಇದೇ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಫೇಮಸ್ ಆಗುತ್ತಿದ್ದಾರೆ. ಅದೇ ರೀಲ್ಸ್‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದಾರೆ. ಇತ್ತೀಚೆಗೆ ಹಳೆ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. ಯುವಕ ಹಾಗೂ ಯುವತಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Man opens girl blouse while dancing old video went viral people very much upset

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ ಯುವಕ ಹಾಗೂ ಯುವತಿ ಮಸ್ತ್ ಆಗು ಡ್ಯಾನ್ಸ್ ಮಾಡುತ್ತಾರೆ. ಈ ವೇಳೆ ಯುವತಿಯ ಬ್ಲೌಸ್ ಓಪನ್ ಮಾಡಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಕೂಡ ಮಾಡಿದ್ದಾರೆ. ಆ ವಿಡಿಯೋ ನೋಡಿ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. ಅಷ್ಟಕ್ಕೂ ಏನಿದು ಘಟನೆ? ತಿಳಿಯಲು ಮುಂದೆ ಓದಿ.

ಈಗ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ ಕಪ್ಪು ಡ್ರೆಸ್‌ ಧರಿಸಿರುವ ಯುವಕ ಹಾಗೂ ಯುವತಿ ಇಬ್ಬರೂ ಡ್ಯಾನ್ಸ್ ಮಾಡುತ್ತಿರುತ್ತಾರೆ. ಯುವಕನೊಂದಿಗೆ ಯುವತಿ ಮೈ ಮರೆತು ಡ್ಯಾನ್ಸ್ ಮಾಡುತ್ತಿರುತ್ತಾಳೆ. ಹಿಂದಿ ಸಿನಿಮಾದ "ಆಜ್ ಕಿ ರಾತ್.." ಎಂಬ ಹಾಡಿಗೆ ಈ ಜೋಡಿ ಡ್ಯಾನ್ಸ್ ನೋಡಿ ಸುತ್ತಲೂ ನೆರೆದಿದ್ದವರು ಮಂತ್ರ ಮುಗ್ಧರಾಗಿದ್ದರು. ಬಿಟ್ಟ ಕಣ್ಣು ಬಿಟ್ಟ ಹಾಗೆ ಇಬ್ಬರು ಹೆಜ್ಜೆ ಹಾಕುವುದನ್ನೇ ನೋಡುತ್ತಾ ನಿಂತು ಬಿಟ್ಟಿದ್ದರು.

ಯುವಕನೊಂದಿಗೆ "ಆಜ್ ಕಿ ರಾತ್.." ಹಾಡಿಗೆ ಆ ಯುವತಿ ಹೆಜ್ಜೆ ಹಾಕುತ್ತಿದ್ದರೆ, ಅತ್ತ ಯುವಕ ಆಕೆ ಬೆನ್ನ ಹಿಂದಿನಿಂದ ಒಂದೊಂದು ಹೆಜ್ಜೆಗೂ ಝಿಪ್ ಜಾರಿಸುತ್ತಿದ್ದ. ಇನ್ನೇನು ಹಾಡು ಮುಗಿಯಬೇಕು ಅನ್ನುವಾಗ ಬ್ಲೌಸ್‌ನ ಝಿಪ್ ಅನ್ನು ಜಾರಿಸಿಯೇ ಬಿಟ್ಟ. ಆ ಘಟನೆಯನ್ನು ಇನ್ಯಾರೋ ವಿಡಿಯೋ ಮಾಡಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲೂ ಹರಿಬಿಟ್ಟಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. "ಆ ಯುವಕ ಬೇಕು ಅಂತಲೇ ಹೀಗೆ ಮಾಡಿದ್ದಾನೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು " ಒಬ್ಬ ವ್ಯಕ್ತಿಯಾಗಿ ಆತ ಸೋತಿದ್ದಾನೆ" ಎಂದು ಹೇಳಿದ್ದಾರೆ. ಇನ್ನೊಬ್ಬರು "ಇದನ್ನು ವಿಡಿಯೋ ಮಾಡಿದವರಿಗೆ ನಾಚಿಕೆ ಆಗಬೇಕು. ಹೋಗಿ ತಡೆಯುವ ಬದಲು ಅದನ್ನೇ ವಿಡಿಯೋ ಮಾಡಿದ್ದಾರೆ" ಕಿಡಿ ಕಾರಿದ್ದಾರೆ. "ಇದು ಆ ಯುವತಿಗೂ ಗೊತ್ತು ಅಂತ ಅನಿಸುತ್ತೆ. ಬೇಕು ಅಂತಲೇ ಹೀಗೆ ಮಾಡಲಾಗಿದೆ" ಎಂದು ಯುವತಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕಾಮೆಂಟ್‌ಗಳ ಜೊತೆಗೆ ಕೆಲವರು ಯುವಕನ ಬಗ್ಗೆ ಪಾಸಿಟಿವ್ ಆಗಿಯೂ ಮಾತಾಡಿದ್ದಾರೆ. ಅದೇನೆ ತಪ್ಪು ಮಾಡಿದ್ದರೂ ಕೊನೆಯಲ್ಲಿ ಆ ಯುವತಿಯನ್ನು ಅಪ್ಪಿ ಹಿಡಿದು ಅವಾಂತರ ನಡೆಯಂತೆ ನೋಡಿಕೊಂಡಿದ್ದಾನೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕೆಲವು ವಾರಗಳ ಹಿಂದಿನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುವುದಕ್ಕೆ ಶುರುವಾಗಿದೆ.

More from Filmibeat

English summary
Man opens girl blouse while dancing old video went viral people very much upset;
Read more about: viral video dance social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X