ಜಾನಿ ಸಿನ್ಸ್ ಜೊತೆ ಸನ್ನಿ ಲಿಯೋನ್ ಮದ್ವೆ ಮಾಡಿಸಿ ಸರ್ಕಾರದಿಂದ ಪ್ರತಿ ತಿಂಗಳು ₹1000 ಪಡೆದ ಪ್ರಳಯಾಂತಕ..!

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಹೆಸರನ್ನೇಳಿಕೊಂಡು ದೊಡ್ಡ ದೊಡ್ಡವರಿಗೆ ಪಂಗನಾಮ ಹಾಕುತ್ತಿದ್ದ ಕಿರಾತಕರು ಈಗ ಸರ್ಕಾರಕ್ಕೆ ಪಂಗನಾಮ ಹಾಕಲು ಶುರು ಮಾಡಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎನ್ನುವಂತೆ ಮಾಜಿ ನೀಲಿತಾರೆ ಸನ್ನಿ ಲಿಯೋನ್ ಹೆಸರಿನಲ್ಲಿ ಛತ್ತೀಸಗಡ ಸರ್ಕಾರ ಮಹಿಳೆಯರಿಗೆ ಜಾರಿ ಮಾಡಿರುವ ಯೋಜನೆಯ ಲಾಭವನ್ನು ಪಡೆದಿದ್ದಾನೆ. ಕೇಳಲು ವಿಚಿತ್ರವಾದರು ಇದು ಸತ್ಯ.

ಹೌದು ಅಸಲಿಗೆ ಛತ್ತೀಸಗಢ ಸರ್ಕಾರ ವಿವಾಹಿತ ಮಹಿಳೆಯರಿಗಾಗಿ ಮಹತಾರಿ ವಂದನಾ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡ ವೀರೇಂದ್ರ ಜೋಶಿ ಎಂಬ ವ್ಯಕ್ತಿ ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾನೆ. ನಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಎಂದರೆ ಸರ್ಕಾರ ನೀಡುವ ಒಂದು ಸಾವಿರಕ್ಕೆ ಕೋಟ್ಯಂತರ ಆಸ್ತಿಯ ಒಡತಿಯಾದ ಸನ್ನಿ ಲಿಯೋನ್ ಕೈಚಾಚುತ್ತಿರುವುದೇಕೆ ಎನ್ನುವ ಪ್ರಶ್ನೆ ಯಾರನ್ನು ಕಾಡಿಲ್ಲ. ಸನ್ನಿ ಲಿಯೋನ್ ಹೆಸರಿನಲ್ಲಿ ಸರ್ಕಾರವನ್ನೇ ವಂಚನೆ ಮಾಡಲು ಯಾರೋ ಮುಂದಾಗಿದ್ದಾರೆ ಎನ್ನುವ ಅನುಮಾನ ಕೂಡ ಬಂದಿಲ್ಲ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಿದ ಅಧಿಕಾರಿಗಳು ಪ್ರತಿ ತಿಂಗಳು ನಕಲಿ ಸನ್ನಿ ಲಿಯೋನ್ ಅವರ ಖಾತೆಗೆ ಒಂದು ಸಾವಿರ ರೂಪಾಯಿಯನ್ನು ಜಮೆ ಮಾಡುತ್ತಾ ಬಂದಿದ್ದಾರೆ. ಸನ್ನಿ ಲಿಯೋನ್ ಹೆಸರಿನಲ್ಲಿ ಬರೋಬ್ಬರಿ ಹತ್ತು ತಿಂಗಳು ಒಂದು ಸಾವಿರ ರೂಪಾಯಿ ಪಡೆದು ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಗ್ರಾಮ ವೀರೇಂದ್ರ ಶರ್ಮಾ ಮಜಾ ಮಾಡಿದ್ದಾನೆ.

Man registers as Sunny Leone claims Jonny Sins as husband and gets Rs 1 000 month from a govt

ಸದ್ಯ ಛತ್ತೀಸಗಢದ ಪೊಲೀಸರು ಈ ನಕಲಿ ಸನ್ನಿ ಲಿಯೋನ್‌ ನ ಪತ್ತೆ ಹಚ್ಚಿ ಕೇಸ್‌ ದಾಖಲಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಈ ಯೋಜನೆಯಡಿ ಫಲಾನುಭವಿಗಳ ಬಗ್ಗೆ ಪೂರ್ವಾಪರ ಪರಿಶೀಲನೆ ನಡೆಸದೆ ಹಣ ಜಮೆ ಮಾಡಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೂಡ ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್ ಆದೇಶಿಸಿದ್ದಾರೆ.

ಸದ್ಯ ಈ ವಿಚಾರ ಛತ್ತೀಸಗಡ್ ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಇಷ್ಟೇ ಅಲ್ಲದೇ ಈ ವಿಚಾರವು ಛತ್ತೀಸ್‌ಗಢ ರಾಜಕಾರಣದಲ್ಲೂ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾದ ಪ್ರತಿವಾದ ಕೂಡ ನಡೆಯುತ್ತಿದೆ. ಬಿಜೆಪಿ ಸರ್ಕಾರದ ಈ ಯೋಜನೆಯನ್ನು ಅಣಕಿಸಿರುವ ಛತ್ತೀಸ್‌ಗಢ ಕಾಂಗ್ರೆಸ್‌ ಮಹತಾರಿ ವಂದನಾ ಯೋಜನೆಯ ಶೇ 50ರಷ್ಟು ಫಲಾನುಭವಿಗಳೆಲ್ಲ ನಕಲಿ ಎಂದು ಲೇವಡಿ ಮಾಡಿದೆ. ಇದನ್ನು ಬಿಜೆಪಿ ಒಪ್ಪಿಲ್ಲ. ಆ ರೀತಿ ಏನೂ ಆಗಿಲ್ಲ ಎಂದು ತಿರುಗೇಟು ನೀಡಿದೆ ಎಂದು ವರದಿಯಾಗಿದೆ.

ಸದ್ಯ ಈ ವಿಚಾರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಸನ್ನಿ ಲಿಯೋನ್ ಅವರ ಹೆಸರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ಅಂದ್ಹಾಗೇ ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಲಾಭವನ್ನು ಪಡೆದ ವ್ಯಕ್ತಿ ತಮ್ಮ ಪತಿಯ ಹೆಸರನ್ನು ನೀಲಿ ಪ್ರಪಂಚದ ರಾಜ ಜಾನಿ ಸೀನ್ಸ್ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಆದರೂ ಕೂಡ ಅಧಿಕಾರಿಗಳಿಗೆ ಅನುಮಾನ ಬಾರದೇ ಇರುವುದು ಈಗ ಅನೇಕರ ಅನುಮಾನವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

More from Filmibeat

Read more about: sunny leone fraud filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X