For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದ ಫೇಸ್‌ಬುಕ್ ಗೆಳೆಯ

  |

  ಮದುವೆಯಾಗಲು ನಿರಾಕರಿಸಿದ ನಟಿಗೆ ಆಕೆಯ ಫೇಸ್‌ಬುಕ್ ಗೆಳೆಯ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

  ಟಿವಿ ಶೋ ಉಡಾನ್, ಸಿನಿಮಾ ಹೋಟೆಲ್ ಮಿಲನ್ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮಾಲ್ವಿ ಮಲ್ಹೋತ್ರಾಗೆ ಆಕೆಯ ಫೇಸ್‌ಬುಕ್ ಗೆಳೆಯ ಸೋಮವಾರ ಸಂಜೆ ಮುಂಬೈ ನ ವರ್ಸೋವಾ ರಸ್ತೆಯಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

  ಚಾಕು ಇರಿದ ವ್ಯಕ್ತಿಯನ್ನು ಕುಮಾರ್ ಮಹಿಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಮಾಲ್ವಿ ಮಲ್ಹೋತ್ರಾಗೆ ಚಾಕುವಿನಿಂದ ಇರಿದ ಕೂಡಲೇ ಸ್ಥಳದಿಂದ ತನ್ನ ಆಡಿ ಕಾರಿನಲ್ಲಿ ಆತ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

  2019 ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯ

  2019 ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯ

  ಚಾಕು ಇರಿದ ಕುಮಾರ್ ಮಹಿಪಾಲ್ ಸಿಂಗ್ ಸಿನಿಮಾ ನಿರ್ಮಾಪಕನಂತೆ, 2019 ರಲ್ಲಿ ಮಾಲ್ವಿಗೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದನಂತೆ. ಇಬ್ಬರೂ ಕೆಲವು ಭಾರಿ ಭೇಟಿ ಆಗಿದ್ದರಂತೆ, ಒಳ್ಳೆಯ ಸ್ನೇಹಿತರಾಗಿ ಸಹ ಇದ್ದರಂತೆ.

  ಮಾಲ್ವಿಯ ಕೈ ಬೆರಳು ತುಂಡು

  ಮಾಲ್ವಿಯ ಕೈ ಬೆರಳು ತುಂಡು

  ಮಾಲ್ವಿ ನೀಡಿರುವ ದೂರಿನನ್ವಯ, ಆಕೆಯು ದುಬೈನಲ್ಲಿ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡು ಅಕ್ಟೋಬರ್ 25 ರಂದು ಮುಂಬೈಗೆ ವಾಪಸ್ ಬಂದಿದ್ದರಂತೆ. ಕಾಫಿ ಶಾಪ್‌ನಿಂದ ಹೊರಗೆ ಬಂದು ಮನೆಗೆ ಹೋಗುವಾಗ ಎದುರಾದ ಮಹಿಪಾಲ್ ಆಕೆಯನ್ನು ಅಡ್ಡಗಟ್ಟಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಆಕೆಯ ಎಡಗೈಯ ಒಂದು ಬೆರಳು ಕತ್ತರಿಸಿ ಹೋಗಿದೆ.

  ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಮುಂಬೈನ ಕೊಕಿಲಾಬೇನ್ ಆಸ್ಪತ್ರೆಯಲ್ಲಿ ಮಾಲ್ವಿ ಮಲ್ಹೋತ್ರಾ ದಾಖಲಾಗಿದ್ದು, ಘಟನೆ ನಡೆದ ಮಾರನೇಯ ದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಕುಮಾರ್ ಮಹಿಪಾಲ್ ಸಿಂಗ್‌ ಗಾಗಿ ಹುಡುಕಾಟ ನಡೆಸಿದ್ದಾರೆ.

  English summary
  Guy named Kumar Mahipal Singh stabbed actress Malvi Malhotra in Mumbai for refusing to marry him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X