For Quick Alerts
  ALLOW NOTIFICATIONS  
  For Daily Alerts

  ಮಂದಿರ ಬೇಡಿ ಪತಿ, ನಿರ್ಮಾಪಕ ರಾಜ್ ಕೌಶಲ್ ನಿಧನ

  |

  ಬಾಲಿವುಡ್ ಖ್ಯಾತ ನಟಿ ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ-ನಿರ್ಮಾಪಕರಾಗಿದ್ದ ರಾಜ್ ಕೌಶಲ್ (50) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ವರದಿಯಾಗಿದೆ.

  ರಾಜ್ ಕೌಶಲ್ ಸ್ನೇಹಿತ ನಟ ರೋಹಿತ್ ರಾಯ್ ಈ ಸುದ್ದಿಯನ್ನು ಪಿಟಿಐಗೆ ಖಚಿತಪಡಿಸಿದ್ದಾರೆ. ''ರಾಜ್ ಕೌಶಲ್ ಇಂದು ಬೆಳಗ್ಗೆ 4.30ಕ್ಕೆ ಹೃದಯಾಘಾತ ಸಂಭವಿಸಿ ನಿಧನರಾದರು'' ಎಂದು ರೋಹಿತ್ ರಾಯ್ ತಿಳಿಸಿದ್ದಾರೆ.

  ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಶಿವನ್ ನಿಧನರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಶಿವನ್ ನಿಧನ

  'ಮೈ ಬ್ರದರ್ ನಿಖಿಲ್' ಸಿನಿಮಾ ನಿರ್ದೇಶಿಸಿದ್ದ ಓನಿರ್, ಕೌಶಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ರಾಜ್ ಕೌಶಲ್ ಜೊತೆಗಿನ ಫೋಟೋ ಶೇರ್ ಮಾಡಿರುವ ಓನಿರ್ ''ತುಂಬಾ ಬೇಗ ಹೋದ್ರಿ. ಇಂದು ಬೆಳಗ್ಗೆ ನಿರ್ಮಾಪಕ ರಾಜ್ ಕೌಶಲ್‌ರನ್ನು ಕಳೆದುಕೊಂಡೆವು. ಬಹಳ ದುಃಖದ ಸಂಗತಿ. ನನ್ನ ಮೊದಲ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದವರಲ್ಲಿ ಅವರು ಸಹ ಪ್ರಮುಖರು. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಪೋಸ್ಟ್ ಹಾಕಿದ್ದಾರೆ.

  ರಾಜ್ ಕೌಶಲ್ 90 ಮತ್ತು 2000 ದಶಕದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 'ಶಾದಿ ಕಾ ಲಡ್ಡೂ' (2004) ಮತ್ತು 'ಪ್ಯಾರ್ ಮೇ ಕಭಿ ಕಭಿ' (1999) ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದರು.

  ಕೌಶಲ್ ಅವರ ಕೊನೆಯ ನಿರ್ದೇಶನದ ಸಿನಿಮಾ 2006 ರಲ್ಲಿ ಬಿಡುಗಡೆಯಾದ 'ಆಂಥೋನಿ ಕೌನ್ ಹೈ'. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

  ಎರಡು ದಿನಗಳ ಹಿಂದೆ, ರಾಜ್ ಕೌಶಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾರ್ಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಮಂದಿರ ಬೇಡಿ, ಜಹೀರ್ ಖಾನ್, ಸಾಗರಿಕಾ ಘಾಟ್ಗೆ, ನೇಹಾ ಧೂಪಿಯಾ, ಅಂಗದ್ ಬೇಡಿ ಮತ್ತು ಆಶಿಶ್ ಚೌಧರಿ ಜೊತೆಯಲ್ಲಿದ್ದರು.

  ಅಂದ್ಹಾಗೆ, ಮಂದಿರ ಬೇಡಿ ಮತ್ತು ಕೌಶಲ್ ಫೆಬ್ರವರಿ 14, 1999ರಲ್ಲಿ ವಿವಾಹವಾದರು. ಕೌಶಲ್-ಮಂದಿರಾ ದಂಪತಿಗೆ ಮಗ ಯುಗ್ ಮತ್ತು ಮಗಳು ತಾರಾ ಇಬ್ಬರು ಮಕ್ಕಳು. ಈ ಎರಡು ಮಕ್ಕಳನ್ನು 2020ರಲ್ಲಿ ದತ್ತು ತೆಗೆದುಕೊಂಡಿದ್ದರು.

  English summary
  Actress Mandira Bedi’s husband, filmmaker Raj Kaushal passes away today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X