ಪತಿ ಸತ್ತು ವರ್ಷವಾಗಿಲ್ಲ ಸ್ನೇಹಿತನೊಂದಿಗೆ ಮಂದಿರಾ ಬೇಡಿ ಮಸ್ತಿ: ನೆಟ್ಟಿಗರ ಟೀಕೆ!
ನಟಿ ಮಂದಿರಾ ಬೇಡಿ ನಿಮಗೆಲ್ಲಾ ಗೊತ್ತೇ ಇರುತ್ತಾರೆ. ಬಾಲಿವುಡ್‌ನಲ್ಲಿ ಈಕೆಯದ್ದು ದೊಡ್ಡ ಹೆಸರು. ಪ್ರಭಾಸ್ ಜೊತೆಗೆ 'ಸಾಹೋ' ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು ತಮ್ಮ ಫಿಟ್ನೆಸ್ ಮೂಲಕ ಸದಾ ಗಮನ ಸೆಳೆಯುತ್ತಾ ಇರುತ್ತಾರೆ ಮಂದಿರ ಬೇಡಿ.
ಮಂದಿರ ಬೇಡಿಗೆ ಇತ್ತೀಚೆಗೆ ಚಿತ್ರಗಳಲ್ಲಿ ಅಭಿನಯಿಸುವುದು ಕಡಿಮೆ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಹಂಚಿಕೊಂಡ ಫೋಟೊ ಒಂದು ಟ್ರೋಲ್‌ಗೆ ತುತ್ತಾಗಿದ್ದು, ಮಂದಿರಾಳನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.
ನಟಿ ಮಂದಿರ ಬೇಡಿ ತಮ್ಮ ಬಹುಕಾಲದ ಆಪ್ನ ಸ್ನೇಹಿತನ ಜೊತೆಗೆ ಇರುವ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊದ ಸಲುವಾಗಿ ಮಂದಿರ ಬೇಡಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಮಂದಿರ ಬೇಡಿ ಹಾಕಿದ ಪೋಸ್ಟ್ ಏನು?
ನಟಿ ಮಂದಿರ ಬೇಡಿ ಸ್ವಿಮ್ಮಿಂಗ್ ಪೋಲ್‌ನಲ್ಲಿ, ಬಿಕಿನಿ ತೊಟ್ಟಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಫೋಟೊದಲ್ಲಿ ಮಂದಿರಾ ಮಾತ್ರ ಇಲ್ಲ. ಬದಲಿಗೆ ಆಕೆಯ ಜೊತೆಗೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾರೆ. ಆತನ ಜೊತೆಗೆ ಮಂದಿರ ಆಪ್ತವಾಗಿರುವ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಎರಡು ಫೋಟೊಗಳನ್ನು ಮಂದಿರಾ ಹಂಚಿಕೊಂಡಿದ್ದಾರೆ. ಆದರೆ ಒಂದು ಫೋಟೊದಲ್ಲಿ ಆತನ ಮೂಗಿನಲ್ಲಿ ಮಂದಿರ ಬೆರಳು ತುರುಕಿದ್ದಾರೆ. ಇದು ಕೊಂಚ ವಿಲಕ್ಷಣವಾಗಿ ಕಂಡು ಬಂದಿದ್ದು, ಟೀಕೆಗೆ ಗುರಿಯಾಗಿದೆ.
ಮಂದಿರ ಬೇಡಿ ಜೊತೆಗೆ ಇರುವ ವ್ಯಕ್ತಿ ಯಾರು?
ಮಂದಿರ ಬೇಡಿ ಪೂಲ್‌ನಲ್ಲಿ ಕಾಣಿಸಿಕೊಂಡಿದ್ದು, ಮತ್ಯಾರ ಜೊತೆಗೂ ಅಲ್ಲ, ಆಕೆಯ ಬಹುಕಾಲದ ಆಪ್ತ ಸ್ನೇಹಿತ ಆದಿತ್ಯ ಮೊಟ್ವಾನಿ ಜೊತೆಗೆ. ಆದಿತ್ಯ ಹುಟ್ಟುಹಬ್ಬದ ಪ್ರಯುಕ್ತ ಫೋಟೊ ಹಂಚಿಕೊಂಡು ಶುಭಕೋರಿದ್ದಾರೆ ಮಂದಿರಾ. "ಹ್ಯಾಪಿ ಬರ್ತ್ ಡೇ ಆದಿ. ನೀನು ನನಗೆ ಏನು ಎನ್ನುವುದು ಈ ಫೋಟೊ ಹೇಳುತ್ತದೆ. 17ನೇ ವಯಸ್ಸಿನಿಂದ ಜೊತೆಗೆ ಇರುವ ಪ್ರೀತಿಯ ಸ್ನೇಹಿತ." ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮಂದಿರಾ, ಆದಿತ್ಯ ಫೋಟೊಗೆ ಭಾರಿ ಟೀಕೆ!
ಪ್ರಸ್ತುತ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಮಂದಿರಾ ಬೇಡಿ ಮತ್ತು ಸ್ನೇಹಿತರು ಕಾಲಕಳೆಯುತ್ತಿದ್ದಾರೆ. ಆದರೆ ಈ ಫೋಟೊಗೆ ಕಮೆಂಟ್‌ನಲ್ಲಿ ಹೆಚ್ಚು ಟೀಕೆ ವ್ಯಕ್ತವಾಗಿತ್ತು. ಸಾಕಷ್ಟು ಮಂದಿ ಕೆಟ್ಟ ಕಮೆಂಟ್‌ಗಳನ್ನು ಮಾಡಿದ್ದಾರೆ. ಹೆಚ್ಚೆಚ್ಚು ಕೆಟ್ಟದಾದ ಕಮೆಂಟ್‌ಗಳು ಬರುತ್ತಿದ್ದ ಕಾರಣ, ಮಂದಿರಾ ಬೇಡಿ ಕೊನೆಗೆ ಈ ಪೋಸ್ಟ್‌ನ ಕಮೆಂಟ್‌ಗಳನ್ನು ಮುಚ್ಚಬೇಕಾಗಿದೆ. ಸದ್ಯ ಈ ಪೋಸ್ಟ್‌ಗೆ ವ್ಯಕ್ತವಾಗಿರುವ ಟೀಕೆಗಳು ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ.

2021ರಲ್ಲಿ ಮಂದಿರಾ ಬೇಡಿ ಪತಿ ನಿಧನ!
ಕಳೆದ ವರ್ಷ 2021 ಜೂನ್‌ನಲ್ಲಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ ಹೊಂದಿದ್ದಾರೆ. ಈ ಸಮಯದಲ್ಲಿ ಮಂದಿರಾ ಸಾಕಷ್ಟು ಕುಗ್ಗಿದ್ದರು. ಪ್ರೀತಿಯ ಪತಿ ಅಗಲಿಕೆಯ ಬಳಿಕ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದರು. ಸದ್ಯ ಇಬ್ಬರು ಮಕ್ಕಳೊಂದಿಗೆ ಮಂದಿರಾ ಬೇಡಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳೊಂದಿಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.


Click it and Unblock the Notifications











