»   » ಪ್ರಭಾಸ್ 'ಸಾಹೋ' ಚಿತ್ರಕ್ಕೆ ಎಂಟ್ರಿ ಕೊಟ್ಟ ಸರ್ಪ್ರೈಸ್ 'ವಿಲನ್' ಯಾರು?

ಪ್ರಭಾಸ್ 'ಸಾಹೋ' ಚಿತ್ರಕ್ಕೆ ಎಂಟ್ರಿ ಕೊಟ್ಟ ಸರ್ಪ್ರೈಸ್ 'ವಿಲನ್' ಯಾರು?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರ ದಕ್ಷಿಣ ಭಾರತದ ದೊಡ್ಡ ಚಿತ್ರ. ಕೇವಲ ಸೌತ್ ಸಿನಿರಂಗದಲ್ಲಿ ಮಾತ್ರವಲ್ಲ, ಬಾಲಿವುಡ್ ಲೋಕಕ್ಕೂ ಇದು ಬಿಗ್ ಸಿನಿಮಾ.

ಪ್ರಭಾಸ್ ನಾಯಕನಾಗಿರುವ ಈ ಚಿತ್ರಕ್ಕೆ ಬಾಲಿವುಡ್ ನಟಿ ಶ್ರದ್ಧ ಕಪೂರ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಸ್ಟಾರ್ ಕಲಾವಿದರ ದಂಡೆ ಹೊಂದಿರುವ 'ಸಾಹೋ' ಚಿತ್ರಕ್ಕೆ ಲೇಟೆಸ್ಟ್ ಆಗಿ 'ವಿಲನ್' ಎಂಟ್ರಿ ಆಗಿದ್ದಾರೆ.

ಈ ವಿಲನ್ ಈಗ ಸರ್ಪ್ರೈಸ್ ಆಗಿದ್ದಾರೆ. ಯಾಕಂದ್ರೆ, ಈ ವಿಲನ್ ನಟ ಅಲ್ಲಾ, ನಟಿ ಎಂಬುದೇ ಕುತೂಹಲ. ಹಾಗಿದ್ರೆ, ಯಾರುದು? ಮುಂದೆ ಓದಿ....

'ಸಾಹೋ' ಚಿತ್ರದಲ್ಲಿ 'ಮಂದಿರ ಬೇಡಿ'

ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಂದಿರ ಬೇಡಿ, ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ಸಾಹೋ' ನಾಯಕಿಯ ಸಂಭಾವನೆ ಕಂಡು ಸೌತ್ ನಟಿಯರು ಉರಿದು ಬೀಳುತ್ತಿದ್ದಾರೆ.!

ನೆಗೆಟೀವ್ ಪಾತ್ರದಲ್ಲಿ ಮಂದಿರ

'ಸಾಹೋ' ಚಿತ್ರದಲ್ಲಿ ಮಂದಿರ ಬೇಡಿ ಅವರದ್ದು ನೆಗೆಟೀವ್ ಪಾತ್ರ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನ ಹೈದರಾಬಾದ್ ನಲ್ಲಿ ಮುಗಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಮಂದಿರ ಬೇಡಿ ಅವರು ಆಕ್ಷನ್ ದೃಶ್ಯಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರಂತೆ.

'ಸಾಹೋ'ಗೆ ಅನುಷ್ಕಾ ಬದಲು ಮೊದಲು ಅಪ್ರೋಚ್ ಮಾಡಿದ್ದ ನಟಿಯೇ ನಾಯಕಿ?

ನೀಲ್ ನಿತಿನ್ ಮುಖೇಶ್

ಬಾಲಿವುಡ್ ಹಾಗೂ ಸೌತ್ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ನೀಲ್ ನಿತಿನ್ ಮುಖೇಶ್ ಕೂಡ ಪ್ರಭಾಸ್ 'ಸಾಹೋ' ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಜಾಕಿ ಶ್ರಾಫ್

'ಸಾಹೋ' ಚಿತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಪಾತ್ರದ ಬಗ್ಗೆ ಬಹಿರಂಗಪಡಿಸಿದ ಚಿತ್ರತಂಡ, ಒಂದು ಪ್ರಮುಖ ಪಾತ್ರವೆಂದು ಮಾತ್ರ ಹೇಳುತ್ತಿದೆ.

ಪ್ರಭಾಸ್ ಹೊಸ ಲುಕ್ ನೋಡಿ ಹೃದಯ ಬಡಿತ ಹೆಚ್ಚಿಸಿಕೊಂಡ ಫ್ಯಾನ್ಸ್

ಅರುಣ್ ವಿಜಯ್

ಇನ್ನು ತಮಿಳಿನ ಯಂಗ್ ಆಕ್ಟರ್ ಅರುಣ್ ವಿಜಯ್ ಕೂಡ 'ಸಾಹೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅರುಣ್ ವಿಜಯ್, ಇದಕ್ಕು ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಚಕ್ರವ್ಯೂಹ' ಚಿತ್ರದಲ್ಲೂ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.

'ಸಾಹೋ' ಚಿತ್ರದ ಬಗ್ಗೆ....

ಸುಜಿತ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಏಕಕಾಲದಲ್ಲಿ ರಿಲೀಸ್ ಆಗಲಿದೆ.

English summary
Actor and host Mandira Bedi is all set to feature as an antagonist in the much-anticipated Prabhas-starrer 'Saaho'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada