For Quick Alerts
  ALLOW NOTIFICATIONS  
  For Daily Alerts

  ಸಂಪ್ರದಾಯ ಮೀರಿ ಪತಿಯ ಅಂತ್ಯಕ್ರಿಯೆ ನಡೆಸಿದ ನಟಿ ಮಂದಿರಾ ಬೇಡಿ: ಫೋಟೋ ವೈರಲ್

  By ಫಿಲ್ಮೀ ಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟಿ ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಕೌಶಲ್ ಹಠಾತ್ ನಿಧನ ಇಡೀ ಬಾಲಿವುಡ್ ಗೆ ಶಾಕ್ ನೀಡಿದೆ. 49 ವರ್ಷದ ರಾಜ್ ಕೌಶಲ್ ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು.

  ಪತಿಯ ಮೇಲಿನ ತನ್ನ ಪ್ರೀತಿ ಏನು ಅನ್ನೋದನ್ನ ತೋರಿಸಿದ ಮಂದಿರಾ ಬೇಡಿ | Filmibeat Kannada

  ರಾಜ್ ಕೌಶಲ್ ನಿಧನದ ಶಾಕ್ ನಲ್ಲೇ ಬಾಲಿವುಡ್ ನ ಅನೇಕ ಮಂದಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದರು. ಇನ್ನು ಕೆಲವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪತಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ನಟಿ, ರಾಜ್ ಕೌಶಲ್ ಪತ್ನಿ ಮಂದಿರಾ ಬೇಡಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

  ಪತಿಯ ಶವದ ಮುಂದೆ ಕಣ್ಣೀರಿಡುತ್ತಿದ್ದ ಮಂದಿರಾ ಬೇಡಿಯನ್ನು ನಟ ರೋಹಿತ್ ರಾಯ್ ಸಮಾಧಾನ ಪಡಿಸಿದರು. ರಾಜ್ ಕೌಶಲ್ ಅಂತ್ಯಕ್ರಿಯೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅತ್ಯಂತ ಸ್ಟ್ರಾಂಗ್ ಮತ್ತು ಬೋಲ್ಡ್ ನಟಿ ಮಂದಿರ ಬೇಡಿ ಸಂಪ್ರದಾಯ ಮೀರಿ ಪತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.

  ಹಿಂದೂ ಸಂಪ್ರದಾಯದ ಪ್ರಕಾರ ಪುರುಷರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಮಾಡುತ್ತಾರೆ. ಶವದ ಮಂದೆ ಹೊತ್ತು ಸಾಗುವ ಮಡಿಕೆಯನ್ನು ಮಹಿಳೆಯರು ಸ್ಪರ್ಶಿಸುವುದಿಲ್ಲ. ಆದರೆ ಮಂದಿರಾ ಬೇಡಿ ಸಂಪ್ರದಾಯ ಮೀರಿ ತಾವೆ ಮಡಿಕೆ ಹೊತ್ತು ಸಾಗುವ ಮೂಲಕ ಪತಿಯ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದಾರೆ.

  ಅಂತ್ಯಕ್ರಿಯೆ ವೇಳೆ ಬಾಲಿವುಡ್ ಗಣ್ಯರಾದ ಅನೀಶ್ ಚೌಧರಿ, ರೋಹಿತಿ ರಾಯ್, ಅಪೂರ್ವ ಅಗ್ನಿಹೋತ್ರ, ಹುಮಾ ಖುರೇಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಎಲ್ಲರೂ ಮಂದಿರ ಬೇಡಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

  1999ರಲ್ಲಿ ಮಂದಿರಾ ಬೇಡಿ, ರಾಜ್ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಂದಿರ 2011ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರು. ನಂತರ ಎರಡನೇ ಮಗುವನ್ನು ದತ್ತು ಪಡೆದರು.

  ರಾಜ್ ಕೌಶಲ್ 90 ಮತ್ತು 2000 ದಶಕದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 'ಶಾದಿ ಕಾ ಲಡ್ಡೂ' (2004) ಮತ್ತು 'ಪ್ಯಾರ್ ಮೇ ಕಭಿ ಕಭಿ' (1999) ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದರು. ಕೌಶಲ್ ಕೊನೆಯ ನಿರ್ದೇಶನದ ಸಿನಿಮಾ 2006 ರಲ್ಲಿ ಬಿಡುಗಡೆಯಾದ 'ಆಂಥೋನಿ ಕೌನ್ ಹೈ'. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

  English summary
  Actress Mandira Bedi was paying her last respect and carried her husband's bier at funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X