ನಿರ್ದೇಶಕಿ ಕಂಗನಾರಿಂದ ಇನ್ನೆಷ್ಟು ಜನರಿಗೆ ತೊಂದರೆ ಆಗುತ್ತೋ.?

By Harshitha

ಇತ್ತೀಚೆಗಂತೂ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾ ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದೆ. ಮೊದಲು ಈ ಚಿತ್ರದಿಂದ ನಿರ್ದೇಶಕ ಕ್ರಿಷ್ ಹೊರನಡೆದರು.

'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರಕ್ಕೆ ಡೈರೆಕ್ಟರ್ ಕ್ರಿಷ್ ಗುಡ್ ಬೈ ಹೇಳಿದ್ಮೇಲೆ, ಆ ಜಾಗಕ್ಕೆ ಬಂದವರು ನಟಿ ಕಂಗನಾ ರಣೌತ್. ನಟಿಯಾಗಿ 'ಮಣಿಕರ್ಣಿಕಾ' ಪಾತ್ರಕ್ಕೆ ಜೀವ ತುಂಬುತ್ತಿದ್ದ ಕಂಗನಾ, ನಿರ್ದೇಶಕಿ ಆದ್ಮೇಲೆ ಚಿತ್ರದ ಸ್ಕ್ರಿಪ್ಟ್ ನಲ್ಲಿ ಭಾರೀ ಬದಲಾವಣೆ ತಂದರು.

ಕೆಲ ಸನ್ನಿವೇಶಗಳನ್ನ ಬದಲಾವಣೆ ಮಾಡಲು ನಟಿ ಕಂಗನಾ ಮುಂದಾದರು. ಚಿತ್ರದಲ್ಲಿ ಇದ್ದ ಸೋನು ಸೂದ್ ಭಾಗಕ್ಕೆ ಕಂಗನಾ ಕತ್ರಿ ಹಾಕಿದರು. ರೀಶೂಟ್ ಮಾಡುವಂತೆ ಸೋನು ಸೂದ್ ರನ್ನ ಕೇಳಿಕೊಂಡರು. ಆದ್ರೆ, ಇದಕ್ಕೆ ಸೋನು ಸೂದ್ ಒಪ್ಪಲಿಲ್ಲ. ಚಿತ್ರತಂಡದಿಂದ ಸೋನು ಹೊರಬಂದರು.

ನಟಿ ಸ್ವಾತಿ ಸೆಮ್ವಾಲ್ ಕೂಡ ರೀಶೂಟ್ ಮಾಡದೇ ಇರಲು ನಿರ್ಧರಿಸಿದ್ದಾರೆ ಎಂದು ವರದಿ ಆಗಿದೆ. ಹೀಗಿರುವಾಗಲೇ, ಕಂಗನಾ ಕೃಪೆಯಿಂದ ಚಿತ್ರದ ಬಜೆಟ್ ಏಕ್ದಂ ಜಾಸ್ತಿ ಆಗಿದೆ. ಪರಿಣಾಮ ಒಬ್ಬರ ತಲೆದಂಡವಾಗಿದೆ.! ನಿಮಗೆ ಆಶ್ಚರ್ಯ ಅನಿಸಿದರೂ ಇದೇ ಸತ್ಯ.! ನಟಿ ಕಂಗನಾ ರಿಂದ ಇನ್ನೆಷ್ಟು ಜನರಿಗೆ ತೊಂದರೆ ಆಗುತ್ತೋ.?! ಮುಂದೆ ಓದಿರಿ..

ಬಜೆಟ್ ಏಕ್ದಂ ಜಾಸ್ತಿ.!

ಬಜೆಟ್ ಏಕ್ದಂ ಜಾಸ್ತಿ.!

ನಟಿ ಕಂಗನಾ ಡೈರೆಕ್ಟರ್ ಕ್ಯಾಪ್ ತೊಟ್ಟ ಮೇಲೆ ಚಿತ್ರದ ಬಜೆಟ್ 70 ಕೋಟಿ ರೂಪಾಯಿಯಿಂದ ಬರೋಬ್ಬರಿ 100 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಕಂಗನಾ ಕೃಪೆಯಿಂದ ಚಿತ್ರದ ಬಜೆಟ್ 30 ಕೋಟಿ ಹೆಚ್ಚಾಗಿದೆ.

ಒಬ್ಬರ ತಲೆದಂಡ.!

ಒಬ್ಬರ ತಲೆದಂಡ.!

'ಮಣಿಕರ್ಣಿಕಾ' ಬಜೆಟ್ ನ ಏಕಾಏಕಿ ಜಾಸ್ತಿ ಮಾಡಿದ ಝೀ ಸ್ಟುಡಿಯೋಸ್ ಬಿಸಿನೆಸ್ ಹೆಡ್ ಸುಜಯ್ ಕುಟ್ಟಿ ರವರನ್ನ ಕಂಪನಿಯಿಂದ ಹೊರ ಹಾಕಲಾಗಿದೆ. ಪ್ರತಿ ದಿನ ಚಿತ್ರದ ಬಜೆಟ್ ಜಾಸ್ತಿ ಆಗುತ್ತಿದ್ದ ಕಾರಣ, ಕಾಸ್ಟ್ ಕಟ್ಟಿಂಗ್ ಮಾಡಲು ಸುಜಯ್ ಕುಟ್ಟಿ ಅವರಿಗೆ ಕಂಪನಿ ಪಿಂಕ್ ಸ್ಲಿಪ್ ನೀಡಿದೆ.

30 ಕೋಟಿ ಹೆಚ್ಚುವರಿ ಯಾಕೆ.?

30 ಕೋಟಿ ಹೆಚ್ಚುವರಿ ಯಾಕೆ.?

ಎಷ್ಟೋ ಸನ್ನಿವೇಶಗಳನ್ನು ಬದಲಾವಣೆ ಮಾಡಲು ಕಂಗನಾ ಬಯಸ್ಸಿದ್ದರಿಂದ 30 ಕೋಟಿ ರೂಪಾಯಿ ಹೆಚ್ಚುವರಿ ಆಗಿ ಬೇಕಾಗಿದೆ. ಇದಕ್ಕೆ ಜೀ ಸ್ಟುಡಿಯೋಸ್ ಒಪ್ಪಿಗೆ ನೀಡುತ್ತಾ ಅನ್ನೋದೇ ಸದ್ಯದ ಪ್ರಶ್ನೆ.

ಜನವರಿಯಲ್ಲಿ ಬಿಡುಗಡೆ ಆಗುತ್ತಾ 'ಮಣಿಕರ್ಣಿಕಾ'.?

ಜನವರಿಯಲ್ಲಿ ಬಿಡುಗಡೆ ಆಗುತ್ತಾ 'ಮಣಿಕರ್ಣಿಕಾ'.?

ವಿವಾದದ ಕೇಂದ್ರ ಬಿಂದು ಆಗಿರುವ 'ಮಣಿಕರ್ಣಿಕಾ' ಚಿತ್ರವನ್ನ ಜನವರಿ 26 ರಂದು ತೆರೆಗೆ ತರಲು ನಟಿ ಕಂಗನಾ ಸರ್ಕಸ್ ಮಾಡುತ್ತಿದ್ದಾರೆ. ಇಷ್ಟೆಲ್ಲ ತೊಂದರೆಗಳ ನಡುವೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗುವುದು ಹೇಗೆ.? ಇನ್ನೂ ನಾಲ್ಕು ತಿಂಗಳಲ್ಲಿ ಈ ಚಿತ್ರದ ಬಿಡುಗಡೆ ಸಾಧ್ಯವೇ.? ಎಂಬ ಪ್ರಶ್ನೆಗಳು ಸದ್ಯ ಕಾಡದೇ ಇರಲ್ಲ.

More from Filmibeat

English summary
Manikarnika: The Queen of Jhansi movie is in Big Trouble. Producer has been sacked by Zee Studios.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X