'ಝಾನ್ಸಿ' ರಾಣಿಯ ಕೋಪಕ್ಕೆ ಬೆಚ್ಚಿಬಿದ್ದ ಸಿನಿಜಗತ್ತು.!
ಕಂಗನಾ ರಣಾವತ್ ಅಭಿನಯದ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾ ತುಂಬಾ ಕುತೂಹಲ ಮೂಡಿಸಿದೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಜೀವನ ಕಥೆ ಆಧರಿಸಿದ ಈ ಸಿನಿಮಾ ಮೇಕಿಂಗ್ ನಿಂದಲೇ ದೊಡ್ಡ ಸುದ್ದಿ ಮಾಡುತ್ತಿದೆ.
ಇದೀಗ, 'ಮಣಿಕರ್ಣಿಕಾ' ಚಿತ್ರದ ಹೊಸ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುದ್ಧಭೂಮಿಯಲ್ಲಿ ಹೋರಾಡುತ್ತಿರುವ ಝಾನ್ಸಿ ರಾಣಿಯ ಕೋಪದ ಮುಖ ಅನಾವರಣವಾಗಿದೆ.
ನಾಳೆ 'ಮಣಿಕರ್ಣಿಕಾ' ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅದಕ್ಕಿಂತ ಒಂದು ದಿನ ಮುಂಚಿತವಾಗಿಯೇ ಈ ಪೋಸ್ಟರ್ ರಿಲೀಸ್ ಆಗಿರುವುದು ಟೀಸರ್ ಬಗ್ಗೆ ಅತಿಯಾದ ನಿರೀಕ್ಷೆ ಹುಟ್ಟಿಸಿದೆ.

ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಮಾಡ್ತಿರುವ ಝಾನ್ಸಿ ಎರಡು ಕೈಗಳಲ್ಲಿ ಖಡ್ಗ ಹಿಡಿದು ಆರ್ಭಟಿಸಿದ್ದಾರೆ. ತಮ್ಮ ವಸ್ತ್ರದ ಮೇಲೆ ಶತ್ರುಗಳನ್ನ ಚೆಂಡಾಡಿರುವ ರಕ್ತದ ಕಲೆ ಝಾನ್ಸಿಯ ಆಕ್ರೋಶವನ್ನು ಬಿಂಬಿಸುತ್ತಿದೆ.
ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಝಾನ್ಸಿ ರಾಣಿಯ ದೇಶಭಕ್ತಿ, ಪರಾಕ್ರಮ, ಬ್ರಿಟಿಷರ ವಿರುದ್ಧ ದಂಗೆ ಹೀಗೆ ಪ್ರತಿಯೊಂದು ಅಂಶವನ್ನಿಟ್ಟು ತೆರೆಮೇಲೆ ತರ್ತಿದ್ದಾರೆ. ಇನ್ನುಳಿದಂತೆ ಅತುಲ್ ಕುಲಕರ್ಣಿ, ಸೋನುಸೂದ್ ಮತ್ತು ಅಂಕಿತಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಮಣಿಕರ್ಣಿಕಾ ಚಿತ್ರದ ಒಳ ಜಗಳದಿಂದ ಕೆಲವು ಬದಲಾವಣೆಗಳು ಆಗಿವೆ. ನಿರ್ದೇಶಕ ಕ್ರಿಶ್ ಈ ಚಿತ್ರವನ್ನ ಬಿಟ್ಟು ಎನ್.ಟಿ.ಆರ್ ಬಯೋಪಿಕ್ ಮಾಡಲು ಮುಂದಾಗಿದ್ದಾರೆ. ನಟ ಸೋನು ಸುದ್ ಮತ್ತು ಕಂಗನಾ ಮಧ್ಯೆ ವಾರ್ ನಡೆದಿದ್ದು, ಸೋನು ಸೂದ್ ಕೂಡ ಈ ಚಿತ್ರದಿಂದ ಹೊರಬಂದಿರುವ ಬಗ್ಗೆ ವರದಿಯಾಗಿತ್ತು. ನಂತರ ಕಂಗನಾ ಅವರೇ ನಿರ್ದೇಶನದ ಜವಾಬ್ದಾರಿ ಹೊತ್ತು ಸಿನಿಮಾ ಮುಗಿಸುತ್ತಿದ್ದಾರೆ ಎನ್ನಲಾಗಿದೆ.
ಇದೆಲ್ಲದರ ಮಧ್ಯೆ ಮಣಿಕರ್ಣಿಕಾ ಸಿನಿಮಾ ಜನವರಿ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.


Click it and Unblock the Notifications











