twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಆಗುತ್ತಿದೆ ಒಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ಮೀರಾ ಬಾಯಿ ಚಾನು ಜೀವನ

    |

    ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿರುವ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು ಜೀವನ ಈಗ ಸಿನಿಮಾ ಆಗುತ್ತಿದೆ. ಮೀರಾ ಬಾಯಿ ಬಯೋಪಿಕ್ ಮಾಡಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಅನೇಕ ಬಯೋಪಿಕ್ ಗಳು ತೆರೆಗೆ ಬಂದಿವೆ ಮತ್ತು ಇನ್ನು ಕೆಲವು ಚಿತ್ರೀಕರಣ ಹಂತದಲ್ಲಿವೆ. ಇದೀಗ ಬಯೋಪಿಕ್ ಲಿಸ್ಟ್‌ಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ.

    ಟೋಕಿಯೋ ಒಲಿಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ಮಣಿಪುರ ಮೂಲದ ವೇಟ್ ಲಿಫ್ಟರ್ ಮೀರಾ ಬಾಯಿ ಚಾನು ಜೀವನವನ್ನು ತೆರೆಮೇಲೆ ತರುವ ಸಿದ್ಧತೆ ನಡೆಯುತ್ತಿದೆ. ಮೀರಾ ಬಾಯಿ ಜೀವನವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಣಿಪುರ ಮೂಲದ ಸಿನಿಮಾ ನಿರ್ಮಾಣ ಸಂಸ್ಥೆ ಮೀರಾ ಬಾಯಿ ಚಾನು ಜೀವನವನ್ನು ತೆರೆಮೇಲೆ ತರಲು ಮುಂದಾಗಿದೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಮೀರಾ ಬಾಯಿ ಕುಟುಂಬದ ಜೊತೆ ಮಾತುಕತೆ ನಡೆಸಿದ್ದು, ಮೀರಾ ಕುಟುಂಬ ಒಪ್ಪಂದಕ್ಕೆ ಸಹಿ ಮಾಡಿದೆ.

    ಚಿತ್ರದ ಕಥೆ ಮತ್ತು ಸಂಭಾಷೆಯನ್ನು ಮನೌಬಿ ಎಂ ಎಂ ಬರೆದಿದ್ದಾರೆ. ಓಸಿ ಮೀರಾ ಎನ್ನುವವರು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೀರಾ ಬಾಯಿ ಚಾನು ಜೀವನದ ಮತ್ತು ಕ್ರೀಡಾ ಬದುಕನ್ನು ಅನಾವರಣ ಮಾಡಲಾಗುತ್ತೆ. ಚಾನು ಬಾಲ್ಯ, ಹಳ್ಳಿಯ ಜೀವನ, ಚಾನು ವೇಟ್ ಲಿಫ್ಟಿಂಗ್ ತರಬೇತಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಹಾಗೂ ಟೋಕಿಯೋ ಒಲಂಪಿಕ್ಸ್ ಮೀರಾ ಸಂಪೂರ್ಣ ಪಯಣ ಇರಲಿದೆ ಎಂದು ಸಿನಿಮಾ ತಂಡ ಬಹಿರಂಗ ಪಡಿಸಿದೆ.

    Manipur-based film production company announced biopic on the life of Saikhom Mirabai Chanu

    ಜೊತೆಗೆ ಚಾನು ಅವರ ಜೀವನದಲ್ಲಿ ನಡೆದ ವಿಭಿನ್ನ ಘಟನೆಗಳು ಸಹ ತೆರೆಮೇಲೆ ಅನಾವರಣ ಆಗಲಿದೆ. ಈ ಸಿನಿಮಾ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಿಗೆ ಡಬ್ ಆಗಲಿದೆಯಂತೆ. ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಬರಹಗಾರ ಮನೌಬಿ, "ಮೀರಾ ಬಾಯಿ ಚಾನು ಪಾತ್ರ ಮಾಡುವ ನಟಿಯ ಹುಡುಕಾಟದಲ್ಲಿದ್ದೇವೆ. ಆಕೆಯ ವಯಸ್ಸು, ಎತ್ತರ, ಮೈ ಕಟ್ಟು ಅವಳ ನೋಟಕ್ಕೆ ಸ್ವಲ್ಪ ಹೋಲಿಕೆಯಾಗಬೇಕು. ಬಳಿಕ ಆಕೆಗೆ ತರಬೇತಿ ನೀಡಬೇಕು. ಈ ಸಿನಿಮಾ ಪ್ರಾರಂಭವಾಗಲು ಕನಿಷ್ಟ 6 ತಿಂಗಳು ಬೇಕಾಗುತ್ತದೆ" ಎಂದು ಹೇಳಿದ್ದಾರೆ.

    ಒಲಂಪಿಕ್ಸ್ ಇತಿಹಾಸದಲ್ಲಿ ಭಾರತದ ಪರ ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಕ್ರೀಡಾಪಟು ಮೀರಾ ಆಗಿದ್ದಾರೆ. ಮೀರಾ ಮೊದಲ ಪ್ರಯತ್ನದಲ್ಲೇ ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಲೀಲಾಜಾಲವಾಗಿ ಎತ್ತುವ ಮೂಲಕ ಗೆಲುವಿನ ಭರವಸೆ ಮೂಡಿಸಿದ್ದರು. ಬಳಿಕ 87 ಕೆ.ಜಿ ವೇಟ್ ಲಿಫ್ಟ್ ಮಾಡುವ ಸ್ಯಾಚ್ ಲಿಫ್ಟ್ ವಿಭಾಗದಲ್ಲಿ 2ನೇ ಸ್ಥಾನ ಪಡೆದರು. ಚಾನು ಜೊತೆ ಸ್ಪರ್ಧೆ ಮಾಡದ ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್ ಲಿಫ್ಟ್ ಮಾಡುವ ಮೂಲಕ ಒಲಂಪಿಕ್‌ನಲ್ಲಿ ದಾಖಲೆ ಬರೆದರು.

    ಮೀರಾ ಬಾಯಿ ಈ ಹಿಂದೆ ರಿಯೋ ಒಲಂಪಿಕ್‌ನಲ್ಲಿ ಭಾಗಿಯಾಗಿದ್ದರು. ಭಾರತ ಸರ್ಕಾರ 201ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

    ಇನ್ನು ಈ ಹಿಂದೆ ಸಿಡ್ನಿ ಒಲಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. 69 ಕೆ.ಜಿ ವಿಭಾಗದಲ್ಲಿ ಕರಣಂ ಮಲ್ಲೇಶ್ವರಿ ಭಾರತಕ್ಕೆ ಕಂಚನ್ನು ಗೆದ್ದು ತಂದಿದ್ದರು. ಇದೀಗ 21 ವರ್ಷಗಳ ಬಳಿಕ ಒಲಂಪಿಕ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಸಿಕ್ಕಿದೆ. ಮೀರಾ ಸಾಧನೆಗೆ ಇಡೀ ಭಾರತ ಅಭಿನಂದನೆ ಸಲ್ಲಿಸಿದೆ.

    ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟಿರುವ ಮೀರಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಭಾರತಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಸಿಕ್ಕಿದೆ. ಭಾರತಕ್ಕೆ ಮರಳಿದ ಮೀರಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕುಟುಂಬದವರ ಜೊತೆ ಊಟ ಮಾಡಿದ ಫೋಟೋಗಳು ವೈರಲ್ ಆಗಿವೆ. ಇದೆಲ್ಲವೂ ಮೀರಾ ಬಯೋಪಿಕ್ ನಲ್ಲಿ ಇರಲಿದೆ.

    English summary
    Manipur-based film production company announced biopic on the life of Saikhom Mirabai Chanu.
    Tuesday, August 3, 2021, 18:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X