For Quick Alerts
  ALLOW NOTIFICATIONS  
  For Daily Alerts

  ರಾಜಕೀಯಕ್ಕೆ ಮನಿಷಾ ಕೋಯಿರಾಲಾ ಸೇರ್ಪಡೆ?

  By Rajendra
  |
  ಇತ್ತೀಚೆಗಷ್ಟೇ ತನ್ನ ಗಂಡನಿಂದ ಬೇರ್ಪಡುವ ಮೂಲಕ ಸುದ್ದಿ ಮಾಡಿದ್ದ ಬಾಲಿವುಡ್ ತಾರೆ ಮನಿಷಾ ಕೋಯಿರಾಲಾ ಈಗ ಮತ್ತೊಂದು ಹೊಸ ಆಟ ಶುರುವಚ್ಚಿಕೊಂಡಂತಿದೆ. ಒಂದಷ್ಟು ವಿರಾಮದ ಬಳಿಕ ಬಾಲಿವುಡ್ ಗೆ ಹಿಂತಿರುಗಿರುವ ಈ ತಾರೆ ಈಗ ರಾಜಕೀಯಕ್ಕೂ ಅಡಿಯಿಡುವ ಸೂಚನೆ ನೀಡಿದ್ದಾರೆ.

  ಮೊದಲು ಬಾಲಿವುಡ್ ನಲ್ಲಿ ಬೇಡಿಕೆ ಇದ್ದ ಈ ತಾರೆ ಬಳಿಕ ದಕ್ಷಿಣದ ಕಡೆ ಮುಖ ಮಾಡಿದ್ದರು. ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬಂಗಾಳಿ ಹಾಗೂ ನೇಪಾಳಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರ 'ಭೂತ್ ರಿಟರ್ನ್ಸ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರರಂಗಕ್ಕೆ ಯಾವಾಗ ಬೇಕಾದರೂ ಗುಡ್ ಬೈ ಹೇಳುವ ಸಿದ್ಧತೆಯಲ್ಲಿದ್ದಾರೆ.

  "ನಾಳೆ ಏನಾಗುತ್ತದೆ ಎಂದು ನಾನು ಈಗಲೇ ಹೇಳಲಿಕ್ಕಾಗಲ್ಲ. ಆದರೆ ನನ್ನ ಆಯ್ಕೆ ರಾಜಕೀಯವಲ್ಲ. ಹಾಗಂತ ರಾಜಕೀಯ ಅಂದರೆ ಆಸಕ್ತಿ ಇಲ್ಲ ಎಂದಲ್ಲ. ನಾಳೆ ಏನಾಗುತ್ತದೋ ಏನೋ ಯಾರಿಗೆ ಗೊತ್ತು" ಎಂದು ಒಗಟೋಗಟಾಗಿ ಮಾತನಾಡಿದ್ದಾರೆ.

  ಇನ್ನು ಮನಿಷಾ ಅವರ ಕುಟುಂಬಕ್ಕೆ ಸಿನೆಮಾ ಹಿನ್ನೆಲೆಗಿಂತಲೂ ರಾಜಕೀಯ ಹಿನ್ನೆಲೆ ಚೆನ್ನಾಗಿದೆ. ಅವರ ಅಜ್ಜ ಬಿಶ್ವೇಶ್ವರ ಪ್ರಸಾದ್ ಕೋಯಿರಾಲಾ ಹಾಗೂ ಅವರ ಇಬ್ಬರು ಚಿಕ್ಕಪ್ಪಂದಿರಾದ ಗಿರಿಜಾ ಪ್ರಸಾದ್ ಕೋಯಿರಾಲಾ ಹಾಗೂ ಮತ್ರಿಕಾ ಪ್ರಸಾದ್ ಕೋಯಿರಾಲಾ ಅವರು ನೇಪಾಳದ ಪ್ರಧಾನ ಮಂತ್ರಿಗಳಾಗಿದ್ದವರು.

  ಮನೀಷಾ ಅವರ ತಂದೆ ಪ್ರಕಾಶ್ ಕೋಯಿರಾಲಾ ಸಹ ರಾಜಕೀಯ ಮುತ್ಸದ್ಧಿ. ಇಷ್ಟೆಲ್ಲಾ ಹಿನ್ನೆಲೆಯುಳ್ಳ ತಾರೆಗೆ ರಾಜಕೀಯ ಪ್ರವೇಶ ಏನೂ ಕಷ್ಟವಾಗಲಾರದು. ಆಕೆಯ ಮುಂದಿನ ಪಯಣ ನೇಪಾಳ ರಾಜಕೀಯ ಎನ್ನಲಾಗಿದೆ. ನೋಡೋಣ ಏನಾಗುತ್ತದೋ ಏನೋ? (ಏಜೆನ್ಸೀಸ್)

  English summary
  Actress Manisha Koirala, who is all set to make her Bollywood comeback, is also not ruling out entering politics in Nepal sometime in the future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X