ನಟಿ ಮನಿಷಾ ಕೋಯಿರಾಲಾಗೆ ಆಪರೇಷನ್ ಸಕ್ಸಸ್

By Rajendra

ಬಾಲಿವುಡ್ ತಾರೆ ಮನಿಷಾ ಕೋಯಿರಾಲಾ ಅವರು ಅಂಡಾಶಯ ಕ್ಯಾನ್ಸರ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಈ ಸಂಬಂಧ ಅವರು ನ್ಯೂಯಾರ್ಕ್ ನಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದು ಆಪರೇಷನ್ ಸಕ್ಸಸ್ ಆಗಿದೆ.

ಡಿಸೆಂಬರ್ 10ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲಿನ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 9ಗಂಟೆಗೆ ಅವರಿಗೆ ಶಸ್ತಚಿಕಿತ್ಸೆ ಮಾಡಲಾಯಿತು ಎಂದು ಮನಿಷಾ ಅವರ ಮ್ಯಾನೇಜರ್ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮನಿಷಾ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಅವರ ತಂದೆ ತಾಯಿ ಹಾಗೂ ಅವರ ಆತ್ಮೀಯ ಗೆಳೆಯರು ಜೊತೆಗಿದ್ದರು. ಈಗ ಮನಿಷಾ ಅವರು ನ್ಯೂಯಾರ್ಕ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಶೀಘ್ರದಲ್ಲೇ ಭಾರತಕ್ಕೆ ಮರಳಿದ್ದಾರೆ.

ಮನಿಷಾ ಅವರು ಚಿಕಿತ್ಸೆಗೆ ಒಳಗಾಗುವ ಮುನ್ನ ತಮ್ಮ ಅಭಿಮಾನಿಗಳಿಗೆ, ನನ್ನ ಬಗ್ಗೆ ಏನೂ ಚಿಂತಿಸಬೇಡಿ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದ ತಕ್ಷಣ ಶಾಕ್ ಆಯಿತು. ಆದರೆ ಜೀವನ ಎಂದರೆ ಇದೇ ರೀತಿಯ ವಿಸ್ಮಯಗಳಿಂದ ಕೂಡಿರುತ್ತದೆ ಅಲ್ಲವೆ..."

ತಮ್ಮ ಬಗ್ಗೆ ಏನೂ ಅನುಕಂಪ ಬೇಡ. ಯಾರೂ ದುಃಖಪಡಬೇಡಿ. ಈ ಬಗ್ಗೆ ನನ್ನ ಗೆಳೆಯ/ಗೆಳತಿಯರಿಗೆಲ್ಲಾ ವಿನಂತಿಸಿಕೊಂಡಿದ್ದೇನೆ. ನಾನೀಗ ಚೆನ್ನಾಗಿಯೇ ಇದ್ದೇನೆ. ಮುಂದೆಯೂ ಚೆನ್ನಾಗಿರುತ್ತೇನೆ. ಈ ಬಗ್ಗೆ ಯಾವುದೇ ಆತಂಕಬೇಡ. ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು" ಎಂದು ಪದೇಪದೇ ವಿನಂತಿಸಿಕೊಂಡಿದ್ದರು. (ಏಜೆನ್ಸೀಸ್)

More from Filmibeat

English summary
Actress Manisha Koirala, who has gone recently to USA for treatment of her ovarian cancer and the actress has underwent a successful surgery in New York on Monday, December 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X