"ಟೂ ಪೀಸ್ ಬಿಕಿನಿ ತೊಡುವಂತೆ ಒತ್ತಾಯಿಸಿದ್ದ ಫೋಟೊಗ್ರಫರ್"; ಕಹಿ ಅನುಭವ ಬಿಚ್ಚಿಟ್ಟ ಮನಿಷಾ
ಚಿತ್ರರಂಗದಲ್ಲಿ ನಟ-ನಟಿಯರಿಗೆ ಸಾಕಷ್ಟು ಅವಮಾನಗಳಾಗುತ್ತವೆ. ಅದನ್ನೆಲ್ಲಾ ಮೆಟ್ಟಿ ಗೆದ್ದು ಬಂದವರೇ ಹೆಚ್ಚು. ಅದರಲ್ಲೂ ನಟಿಯರು ತೊಡುವ ಬಟ್ಟೆ ಕಾರಣಕ್ಕೆ ಬಹಳ ಕಸಿವಿಸಿ, ಅವಮಾನಗಳನ್ನೆಲ್ಲಾ ಎದುರಿಸುವಂತಾಗುತ್ತದೆ. ಬಾಲಿವುಡ್ ಖ್ಯಾತ ನಟಿ ಮನಿಷಾ ಕೊಯಿರಾಲಾ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎದುರಿಸಿದ ಕಹಿ ಅನುಭವ ಹಂಚಿಕೊಂಡಿದ್ದಾರೆ.
'ಹೀರಾಮಂಡಿ' ವೆಬ್ ಸೀರಿಸ್‌ನಲ್ಲಿ ನಟಿಸಿ ಮನಿಷಾ ಮೋಡಿ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಐತಿಹಾಸಿಕ ಸೀರಿಸ್‌ನಲ್ಲಿ ಮಲ್ಲಿಕಾಜಾನ್ ಆಗಿ ಲೀಡ್ ರೋಲ್‌ನಲ್ಲಿ ಆಕೆ ನಟಿಸಿದ್ದಾರೆ. ಮೇ 1 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸೀರಿಸ್ ರಿಲೀಸ್ ಆಗಿತ್ತು. ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಸೇರಿದಂತೆ ಹಲವರು ನಟಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮನಿಷಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"ನಾನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಒಮ್ಮೆ ಫೋಟೋಶೂಟ್ ಮಾಡಿಸುವಂತೆ ಹೇಳಿದ್ದರು. ಫೇಮಸ್ ಫೋಟೋಗ್ರಫರ್ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅಂದು ಫೋಟೊಶೂಟ್ ಮಾಡಿಸಲು ಹೋಗಿದ್ದೆ. ಆಗ ಆತ ನನ್ನನ್ನು ನೋಡಿ ನೀವೇ ಮುಂದಿನ ಸೂಪರ್ ಸ್ಟಾರ್ ಎಂದ. ಬಳಿಕ ಟೂ ಪೀಸ್ ಬಿಕಿನಿ ಕೊಟ್ಟು ಧರಿಸಿ ಬನ್ನಿ ಫೋಟೊ ಕ್ಲಿಕ್ಕಿಸುತ್ತೇನೆ ಎಂದ. ನಾನು ಒಪ್ಪದಾಗ ಬಹಳ ಒತ್ತಾಯಿಸಿದ"
"ಸರ್, ನಾನು ಬೀಚ್‌ಗೆ ಹೋಗಾದ ಅಥವಾ ಈಜಲು ಹೋದಾಗ ಮಾತ್ರ ಸ್ವಿಮ್ ಸೂಟ್ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎನ್ನುವುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಆತನಿಗೆ ಹೇಳಿದ್ದೆ" ಎಂದು ಆ ಘಟನೆಯನ್ನು ಮನಿಷಾ ಕೊಯಿರಾಲಾ ನೆನಪಿಸಿಕೊಂಡಿದ್ದಾರೆ.
ಮಾತು ಮುಂದುವರೆಸಿದ ಮನಿಷಾ "ನಾನು ಆತ ಹೇಳಿದಂತೆ ಕೇಳದೇ ಇದ್ದಾಗ ಆತ ಹೇಳಿದ ಒಂದು ಮಾತು ನನಗೆ ಇನ್ನು ನೆನಪಿದೆ. "ಮಣ್ಣು ಹದವಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ?" ಎಂದು ಆತ ಹೇಳಿದ್ದ. ಇದು ಅಂಥ ಕೆಲವರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ಫೋಟೊಗ್ರಫರ್ ನನ್ನ ಫೋಟೋ ಕ್ಲಿಕ್ಕಿಸಲು ಬಂದಿದ್ದ. ಆತನಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅತನ ತಿಳಿವಳಿಕೆ ಆ ರೀತಿ ಇತ್ತು. ಅದಕ್ಕೆ ಹಾಗೆ ವರ್ತಿಸಿದ" ಎಂದು ಮನಿಷಾ ಆ ಘಟನೆಯನ್ನು ವಿವರಿಸಿದ್ದಾರೆ.
ನೇಪಾಳದಲ್ಲಿ ಹುಟ್ಟಿ ಬೆಳೆದ ಮನಿಷಾ ಬಳಿಕ ಬಾಲಿವುಡ್ ಪ್ರವೇಶಿಸಿದರು. 'ಸೌದಾಗರ್' ಹಿಂದಿಯಲ್ಲಿ ಆಕೆ ನಟಿಸಿದ ಮೊದಲ ಚಿತ್ರ. ಅದಕ್ಕೂ ಮುನ್ನ ಒಂದು ನೇಪಾಳಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. '1942; ಎ ಲವ್ ಸ್ಟೋರಿ' ಚಿತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಬಾಂಬೆ', 'ಅಕೇಲೇ ಹೂಂ ಅಕೇಲೇ ತುಮ್', 'ಖಮೋಶಿ: ದಿ ಮ್ಯೂಸಿಕಲ್', 'ದಿಲ್‌ಸೇ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಮನಿಷಾ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಗಮನ ಸೆಳೆದರು. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದಾರೆ.


Click it and Unblock the Notifications











