For Quick Alerts
  ALLOW NOTIFICATIONS  
  For Daily Alerts

  'ನೋ ಕಾಂಪ್ರೊಮೈಸ್' ಅಂದಿದಕ್ಕೆ ಸಿನಿಮಾದಿಂದ ಹೊರದಬ್ಬಿದ್ರು: ಕೆಟ್ಟ ಅನುಭವ ಬಿಚ್ಚಿಟ್ಟ ಗೋಲ್ಡನ್ ಸ್ಟಾರ್ ನಾಯಕಿ

  |

  ಕಾಸ್ಟಿಂಗ್ ಕೌಚ್ ಸಮಸ್ಯೆ ನಿನ್ನೆಮೊನ್ನೆಯದಲ್ಲ. ಅನೇಕ ವರ್ಷಗಳಿಂದ ಕಾಸ್ಟಿಂಗ್ ಕೌಚ್ ಎನ್ನುವ ಪಿಡುಗು ಚಿತ್ರರಂಗವನ್ನು ಆವರಿಸಿದೆ. ಆದರೆ ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿಚಾರ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಟಿ ಮಣಿಯರು ತಮಗಾದ ಕೆಟ್ಟ ಅನುಭವನ್ನು ಬಹಿರಂಗಪಡಿಸುತ್ತಿದ್ದಾರೆ. ಮಿ ಟೂ ಅಭಿನಯದ ಮೂಲಕ ಕಾಸ್ಟಿಂಗ್ ಕೌಚ್ ವಿರುದ್ಧ ಸಮರಸಾರಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ 'ಮುಂಜಾನೆ' ಸಿನಿಮಾದಲ್ಲಿ ಮಿಂಚಿದ್ದ ಬಾಲಿವುಡ್ ನಟಿ ಮಂಜರಿ ಫಡ್ನೀಸ್ ಈಗ ತನಗಾದ ಕೆಟ್ಟ ಅನುಭವನನ್ನು ಹೇಳಿಕೊಂಡಿದ್ದಾರೆ. ಗೋವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಮಂಜರಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

  'ಆಡಿಷನ್ ವೇಳೆ ರೇಪ್ ಸೀನ್ ಮಾಡಿ' ಎಂದರಂತೆ: ಕೆಟ್ಟ ಅನುಭವ ಹಂಚಿಕೊಂಡ ನಟಿ'ಆಡಿಷನ್ ವೇಳೆ ರೇಪ್ ಸೀನ್ ಮಾಡಿ' ಎಂದರಂತೆ: ಕೆಟ್ಟ ಅನುಭವ ಹಂಚಿಕೊಂಡ ನಟಿ

  'ಇಂಟರ್ ಡಿಪೆಂಡೆನ್ಸ್' ಸಿನಿಮಾ ಪ್ರಮೊಶನ್ ಗಾಗಿ ಮಂಜರಿ ಆಗಮಿಸಿದ್ದರು. ಈ ಸಮಯದಲ್ಲಿ 15 ವರ್ಷದ ಸುದೀರ್ಘ ಪಯಣದ ಬಗ್ಗೆ ಮಾತನಾಡಿದ್ದಾರೆ. "ಪ್ರಸಿದ್ಧಿ ನಿರ್ಮಾಪಕರು ಮತ್ತು ಸ್ಟಾರ್ಸ್ ಸಿನಿಮಾಗಳಿಗೆ ಸಹಿ ಮಾಡಿದ್ದೆ. ಆದರೆ ಯಾವಾಗ ಅವರು ಕಾಂಪ್ರೊಮೈಸ್ ಮಾಡಿಕೊಳ್ಳಬೇಕಾಗುತ್ತೆ ಎಂದು ಹೇಳಿದರೊ ಆಗ ಸಿನಿಮಾದಿಂದ ಹೊರಬರಬೇಕಾಯಿತು. ಕಾಂಪ್ರೊಮೈಸ್ ಆಗಲು ಒಪ್ಪದಿದ್ದಾಗ ನಿರ್ಮಾಪಕರೇ ಚಿತ್ರದಿಂದ ಹೊರದಬ್ಬಿದ್ದು ಇದೆ. ಇದರಿಂದ ನಾನು ಖ್ಯಾತ ನಿರ್ಮಾಪಕರು ಮತ್ತು ಸ್ಟಾರ್ಸ್ ಜೊತೆ ನಟಿಸುವ ಅವಕಾಶ ಕಳೆದುಕೊಂಡೆ. ಕಮರ್ಶಿಯಲ್ ಚಿತ್ರಗಳು ಕೈತಪ್ಪಿ ಹೋದವು. ನಂತರ ಕಡಿಮೆ ಬಜೆಟ್ ಸಿನಿಮಾಗಳನ್ನು ಮಾಡುತ್ತ ಬಂದೆ. ಆದರೆ ಆ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಆಗಿಲ್ಲ. ಇದರಿಂದ ನಾನು ದೀರ್ಘಕಾಲ ಖಿನ್ನತೆಗೆ ಒಳಗಾಗಿದ್ದೆ" ಎಂದು ಹೇಳಿದ್ದಾರೆ.

  "ಸೋಲು-ಗೆಲವು ಇದ್ದಿದ್ದೆ. ಪ್ರತಿಯೊಬ್ಬರು ವೃತ್ತಿಜೀವನದಲ್ಲಿ ಸೋಲನ್ನು ಅನುಭವಿಸಿರುತ್ತಾರೆ. ಅಮಿತಾಬ್ ಬಚ್ಚನ್ ಮತ್ತು ಶಾರುಖ್ ಖಾನ್ ಅಂತವರ ಸಿನಿಮಾಗಳೆ ಸೋತಿವೆ" ಎಂದಿದ್ದಾರೆ.

  ಕೆಲವು ದಕ್ಷಿಣ ಭಾರತೀಯ ನಿರ್ಮಾಪಕರು ನನಗೆ ಕಾಂಪ್ರೊಮೈಸ್ ಆಗುವಂತೆ ಹೇಳಿದ್ದರು. ನಾನು ನಿನ್ನನ್ನು ನಿಮ್ಮ ಸಿನಿಮಾಗೆ ಆಯ್ಕೆ ಮಾಡಿದರೆ ನನಗೇನು ಸಿಗುತ್ತೆ? ಎಂದು ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ನನ್ನ ಬಳಿ ಕೇಳಿದ್ದರು. ಅದಕ್ಕೆ ನಾನು ನನ್ನನು ನಿಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡರೆ ಪಾತ್ರಕ್ಕಾಗಿ ನಾನು ಹಾರ್ಡ್ ವರ್ಕ್ ಮಾಡುತ್ತಾರೆ, ಎಂದು ಹೇಳಿದೆ" ಎಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಂಜರಿ ಹೇಳಿಕೊಂಡಿದ್ದಾರೆ.

  ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?

  ಸದ್ಯ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ಮಂಜರಿ ಹಳೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. "ಈಗ ಇದನ್ನೆಲ್ಲ ನೆನಪಿಸಿಕೊಂಡರೆ ಫನ್ನಿ ಅನಿಸುತ್ತೆ. ಆದರೆ ಅಂದು ನನಗದು ತುಂಬ ಕಷ್ಟವಾಗಿತ್ತು. ಮಾನಸಿಕವಾಗಿ ತುಂಬ ಯಾತನೆ ಅನುಭವಿಸಿದ್ದೀನಿ" ಎಂದು ಹೇಳಿದ್ದಾರೆ.

  English summary
  Bollywood actress manjari phadnis faced casting couch problem from Producers and star actors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X