For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್'ನಲ್ಲಿ ನೆಚ್ಚಿನ ಸ್ಟಾರ್ ಯಾರೆಂದು ಬಹಿರಂಗ ಪಡಿಸಿದ ಮನೋಜ್ ಬಾಜಪೇಯಿ

  |

  'ದಿ ಫ್ಯಾಮಿಲಿ ಮ್ಯಾನ್-2' ವೆಬ್ ಸರಣಿ ಬಿಡುಗಡೆಯಾಗಿ ಒಂದು ತಿಂಗಳಾಗುತ್ತಾ ಬಂದರೂ ವೆಬ್ ಸರಣಿಯ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಎಲ್ಲಿ ನೋಡಿದ್ರೂ 'ದಿ ಫ್ಯಾಮಿಲಿ ಮ್ಯಾನ್-2' ಸರಣಿಯದ್ದೆ ಮಾತು. ನಟ ಮನೋಜ್ ಬಾಜಪೇಯಿ, ಸಮಂತಾ ಅಕ್ಕಿನೇನಿ, ಪ್ರಿಯಾಮಣಿ ಸೇರಿದಂತೆ ಪ್ರತಿಯೊಬ್ಬರ ಪಾತ್ರಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಶ್ರೀಕಾಂತ್ ತಿವಾರಿಯಾಗಿ ನಟ ಮನೋಜ್ ಬಾಜಪೇಯಿ ಚಿತ್ರಾಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮೊದಲ ಸರಣಿಯಂತೆ ಎರಡನೇ ಸರಣಿಯಲ್ಲೂ ಮನೋಜ್ ಅಬ್ಬರಿಸಿದ್ದಾರೆ. ಇನ್ನು ಮನೋಜ್ ಬಾಜಪೇಯಿ ಪತ್ನಿ ಸುಚಿತ್ರಾ ಪಾತ್ರದಲ್ಲಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಮಗಳು ಧೃತಿ ಪಾತ್ರದಲ್ಲಿ ಪಾತ್ರದಲ್ಲಿ ಅಶ್ಲೇಷಾ ಠಾಕೂರ್ ನಟಿಸಿದ್ರೆ, ಮಗ ಅಥರ್ವ್ ಆಗಿ ವೇದಾಂತ್ ಸಿನ್ಹಾ ಮಿಂಚಿದ್ದಾರೆ. ಶ್ರೀಕಾಂತ್ ತಿವಾರಿಯ ಕುಟುಂಬ ಈಗ ಸಿನಿ ಜಗತ್ತಿನ ಸೆಂಟರ್ ಆಫ್ ದಿ ಅಟ್ರ್ಯಾಕ್ಷನ್ ಆಗಿದೆ.

  'ದಿ ಫ್ಯಾಮಿಲಿ ಮ್ಯಾನ್-2' ಚಿತ್ರೀಕರಣ ವೇಳೆ ತಮಿಳಿನ ಆ ಖ್ಯಾತ ನಟನನ್ನು ಭೇಟಿಯಾಗಿದ್ದೇಕೆ ಮನೋಜ್?'ದಿ ಫ್ಯಾಮಿಲಿ ಮ್ಯಾನ್-2' ಚಿತ್ರೀಕರಣ ವೇಳೆ ತಮಿಳಿನ ಆ ಖ್ಯಾತ ನಟನನ್ನು ಭೇಟಿಯಾಗಿದ್ದೇಕೆ ಮನೋಜ್?

  ಈ ವೆಬ್ ಸರಣಿಯಲ್ಲಿ ದೊಡ್ಡ ಪಾತ್ರವರ್ಗವಿದೆ. ಇದರಲ್ಲಿ ಮನೋಜ್ ಬಾಜಪೇಯಿ ನೆಚ್ಚಿನ ಕೋ ಸ್ಟಾರ್ ಎನ್ನುವುದು ಈಗ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಮನೋಜ್ ಹಂಚಿಕೊಂಡಿದ್ದಾರೆ. ಮನೋಜ್ ಬಾಜಪೇಯಿ ನೆಚ್ಚಿನ ಕೋ ಸ್ಟಾರ್ ಮತ್ಯಾರು ಅಲ್ಲ ಮಗಳ ಪಾತ್ರದಲ್ಲಿ ನಟಿಸಿದ್ದ ಅಶ್ಲೇಷಾ ಠಾಕೂರ್.

  17 ವರ್ಷದ ನಟಿ ಆಶ್ಲೇಷಾ ವೆಬ್ ಸರಣಿಯಲ್ಲಿ ಧೃತಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚಿಗೆ ಅಶ್ಲೇಷಾ ಟ್ವಿಟ್ಟರ್ ನಲ್ಲಿ ವೆಬ್ ಸರಣಿಯ ಮೇಕಿಂಗ್ ದೃಶ್ಯಗಳನ್ನು ಹಂಚಿಕೊಂಡಿದ್ದರು. ಇದನ್ನು ರಿಟ್ವೀಟ್ ಮಾಡಿರುವ ಮನೋಜ್ ಬಾಜಪೇಯಿ "ವೆಬ್ ಸರಣಿಯ ಸೆಟ್ ನಲ್ಲಿ ಅತ್ಯಂತ ನೆಚ್ಚಿನ ನಟಿ ಆಶ್ಲೇಷಾ" ಎಂದು ಬರೆದುಕೊಂಡಿದ್ದಾರೆ.

  Manoj Bajpayee picks his favourite Co star in The Family Man series
  ರಶ್ಮಿಕಾ ಜೊತೆ ಸೆಲ್ಫಿ ಗಾಗಿ ಪೊಲೀಸರು ಏನ್ ಮಾಡಿದ್ರು ನೋಡಿ | Rashmika Mandanna | Filmibeat Kannada

  'ದಿ ಫ್ಯಾಮಿಲಿ ಮ್ಯಾನ್-2' ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಪಾರ್ಟ್-3 ಸದ್ದು ಮಾಡುತ್ತಿದೆ. ಈಗಾಗಲೇ ಪಾರ್ಟ್-3 ಬಗ್ಗೆ ಸುಳಿವು ನೀಡಿರುವ ಮನೋಜ್ ಬಾಜಪೇಯಿ ಇನ್ನೊಂದೂವರೆ ವರ್ಷದಲ್ಲೇ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಬಹುಬೇಡಿಕೆಯ ವೆಬ್ ಸರಣಿಯ ಪಾರ್ಟ್-3 ನಲ್ಲೂ ಶ್ರೀಕಾಂತ್ ತಿವಾರಿ ಕುಟುಂಬ ಹೀಗೆ ಮುಂದುವರೆಯುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Bollywood Actor Manoj Bajpayee picks his favourite Co star in The Family Man series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X