ಮನೋಜ್ ಬಾಜಪೇಯಿ ವೃತ್ತಿ ಜೀವನದ ಬಗ್ಗೆ ಜ್ಯೋತಿಷಿ ಹೇಳಿದ್ದು ನಿಜವಾಯ್ತು!

ಮನೋಜ್ ಬಾಜಪೇಯಿ ಹಿಂದಿಯ ಅದ್ಭುತ ನಟರಲ್ಲಿ ಒಬ್ಬರು. ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟಿಸಿರುವ ಮನೋಜ್ ಬಾಜಪೇಯಿ ತಾವು ನಟಿಸಿದ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತ.

ಸಿನಿಮಾಗಳಲ್ಲಿ ತಮ್ಮ ನಟನೆಯಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದ ಮನೋಜ್ ಬಾಜಪೇಯಿ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮತ್ತೊಮ್ಮೆ ತಮ್ಮ ಅಭಿನಯ ಚಾತುರ್ಯ ಸಾಬೀತು ಮಾಡಿದ್ದಾರೆ.

ಮನೋಜ್ ಬಾಜಪೇಯಿ ಎಷ್ಟೇ ಪ್ರತಿಭಾವಂತರಾಗಿದ್ದರೂ ಸಹ ಅವರ ವೃತ್ತಿ ಬದುಕು ಬಹು ವರ್ಷ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿಯೇ ಇತ್ತು. 2000 ದಶಕದ ಆರಂಭದಲ್ಲಿ ಹಾಲಿವುಡ್ ಅವಕಾಶವೊಂದು ಮನೋಜ್‌ಗೆ ದೊರೆತು ಇನ್ನೇನು ಮನೋಜ್ ಜೀವನ ಬದಲಾಯಿತು ಎಂದುಕೊಳ್ಳುವಾಗಲೇ ಸಿನಿಮಾ ನಿಂತು ಹೋಯಿತು. ಆದರೆ ಆ ಬಗ್ಗೆ ಜ್ಯೋತಿಷಿ ಒಬ್ಬರು ತಮಗೆ ಮೊದಲೇ ಹೇಳಿದ್ದರು ಅವರು ಹೇಳಿದಂತೆಯೇ ಆಗ ಘಟನೆ ನಡೆಯಿತು ಎಂದು ಮನೋಜ್ ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ.

2003ರಲ್ಲಿ ಮನೋಜ್‌ಗೆ 'ಪಿಂಜರ್' ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ದೊರಕಿತು ಅದರ ಬೆನ್ನಲ್ಲೆ ಹಾಲಿವುಡ್‌ ಸಿನಿಮಾ ಒಂದರಲ್ಲಿ ಮುಖ್ಯ ಪಾತ್ರ ಮನೋಜ್‌ಗೆ ಸಿಕ್ಕಿತ್ತು. ಎನ್‌ಆರ್‌ಐ ಒಬ್ಬರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಸಿನಿಮಾದಲ್ಲಿ ಖ್ಯಾತ ಹಾಲಿವುಡ್ ಫ್ರ್ಯಾಂಕ್ ಲ್ಯಾಂಗೆಲ್ಲ, 'ಎಕ್ಸ್‌-ಮ್ಯಾನ್' ಖ್ಯಾತಿಯ ನಟಿ ಲಿನ್ ಕೊಲಿನ್ಸ್, ಜಸ್ಟಿನ್ ಥೆರೋಕ್ಸ್ ಇದ್ದರು. ಸಿನಿಮಾದ ಚಿತ್ರೀಕರಣ ಜೈಪುರದಲ್ಲಿ ನಡೆಯುತ್ತಿತ್ತು.

ದೊಡ್ಡ ಜ್ಯೋತಿಷಿ ಒಬ್ಬರನ್ನು ಭೇಟಿಯಾಗಿದ್ದೆ: ಮನೋಜ್

ದೊಡ್ಡ ಜ್ಯೋತಿಷಿ ಒಬ್ಬರನ್ನು ಭೇಟಿಯಾಗಿದ್ದೆ: ಮನೋಜ್

ಮನೋಜ್ ಹೇಳಿರುವಂತೆ, ''ರಾಷ್ಟ್ರಪ್ರಶಸ್ತಿ ಸ್ವೀಕರಿಸಿ ಜೈಪುರದಲ್ಲಿ ಹಾಲಿವುಡ್ ಸಿನಿಮಾದ ಚಿತ್ರೀಕರಣಕ್ಕೆ ತೆರಳಿದ್ದೆ. ಆ ಸಿನಿಮಾದ ಬಳಿಕ ವೃತ್ತಿ ಜೀವನ ದೊಡ್ಡ ಹಂತಕ್ಕೆ ಏರಲಿದೆ ಎಂಬುದು ನನ್ನ ನಿರೀಕ್ಷೆ ಆಗಿತ್ತು. ಚಿತ್ರೀಕರಣದ ಮಧ್ಯ ಬಿಡುವಿನ ವೇಳೆಯಲ್ಲಿ ಗೆಳೆಯ, ನಟ ಶ್ರೀವಲ್ಲಭ ವ್ಯಾಸ್‌ ಮನೆಗೆ ಭೇಟಿ ನೀಡಿದೆ. ಅವರ ತಂದೆ ಬಹಳ ಖ್ಯಾತಿ ಜ್ಯೋತಿಷಿ ಆಗಿದ್ದರು. ಜೈಸಲ್ಮೇರ್ ರಾಜನಿಗೆ ಅವರ ಕುಟುಂಬದವರು ಆಸ್ಥಾನ ಜ್ಯೋತಿಷಿಗಳಾಗಿದ್ದರು'' ಎಂದಿದ್ದಾರೆ.

ಸಿನಿಮಾದಿಂದ ಉಪಯೋಗವಿಲ್ಲ ಎಂದಿದ್ದ ಜ್ಯೋತಿಷಿ

ಸಿನಿಮಾದಿಂದ ಉಪಯೋಗವಿಲ್ಲ ಎಂದಿದ್ದ ಜ್ಯೋತಿಷಿ

''ಗೆಳೆಯ ಶ್ರೀವಲ್ಲಭ ವ್ಯಾಸ್‌ ಬಲವಂತ ಮಾಡಿ ನನ್ನ ಕುಂಡಲಿಯನ್ನು ಅವರ ತಂದೆಗೆ ತೋರಿಸುವಂತೆ ಹೇಳಿದರು ನಾನು ಅಂತೆಯೇ ತೋರಿಸಿದೆ. ಅಂದೇ ಅವರು ಹೇಳಿದರು ಈಗಿರುವ ನಿನ್ನ ವೃತ್ತಿ ಬದುಕಿನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಈಗ ಹೇಗಿದೆಯೋ ಹಾಗೆಯೇ ಮುಂದೆ ಸಾಗಲಿದೆ ಎಂದರು. ಆದರೆ ನಾನು ನಟಿಸುತ್ತಿದ್ದ ಹಾಲಿವುಡ್ ಸಿನಿಮಾದ ಬಗ್ಗೆ ನನಗೆ ವಿಶ್ವಾಸವಿತ್ತು. ಹಾಗಾಗಿ ಅವರನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡಿ ಎಂದು ವಿನಂತಿಸಿಕೊಂಡೆ'' ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಮನೋಜ್.

ಸಿನಿಮಾ ಬಿಡುಗಡೆ ಆಗಲೇ ಇಲ್ಲ: ಮನೋಜ್

ಸಿನಿಮಾ ಬಿಡುಗಡೆ ಆಗಲೇ ಇಲ್ಲ: ಮನೋಜ್

''ಅವರು ಮತ್ತೊಮ್ಮೆ ನೋಡಿ ಈ ಸಿನಿಮಾ ಬಿಡುಗಡೆ ಆಗುವುದಿಲ್ಲ. ನಿನಗೆ ಈ ಸಿನಿಮಾದಿಂದ ಯಾವ ಲಾಭವೂ ಆಗುವುದಿಲ್ಲ ಎಂದು ಖಚಿತವಾಗಿ ಹೇಳಿದರು. ಆಗ ನಾನು ಅವರ ಮಾತನ್ನು ನಂಬಿರಲಿಲ್ಲ. ಸಿನಿಮಾದ ಚಿತ್ರೀಕರಣ ಪೂರ್ಣವಾಯಿತು ಆದರೆ ಆ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ಆ ಸಿನಿಮಾದಿಂದ ನನ್ನ ವೃತ್ತಿ ಜೀವನಕ್ಕೆ ಯಾವ ಲಾಭವೂ ಆಗಲಿಲ್ಲ'' ಎಂದು ನೆನಪು ಮಾಡಿಕೊಂಡಿದ್ದಾರೆ ಮನೋಜ್.

ಆಫರ್‌ಗಳು ಬರುತ್ತಿವೆ, ಆದರೆ ಒಪ್ಪಿಕೊಳ್ಳುತ್ತಿಲ್ಲ: ಮನೋಜ್

ಆಫರ್‌ಗಳು ಬರುತ್ತಿವೆ, ಆದರೆ ಒಪ್ಪಿಕೊಳ್ಳುತ್ತಿಲ್ಲ: ಮನೋಜ್

ಆ ಘಟನೆ ನಡೆದು ಎರಡು ದಶಕವಾಗಿದೆ ಆದರೆ ಮನೋಜ್‌ ಯಾವ ಹಾಲಿವುಡ್ ಸಿನಿಮಾದಲ್ಲಿಯೂ ನಟಿಸಿಲ್ಲ. 2020ರ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿರುವಂತೆ ಹಾಲಿವುಡ್‌ನಿಂದ ಆಫರ್‌ಗಳು ಬರಲು ಆರಂಭವಾಗಿದೆ ಆದರೆ ತಾವು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದು, ಒಳ್ಳೆಯ ಕತೆ, ಒಳ್ಳೆಯ ಪಾತ್ರವರ್ಗ, ಒಳ್ಳೆಯ ಪ್ರೊಡಕ್ಷನ್ ಸಂಸ್ಥೆ ಸಿಕ್ಕರಷ್ಟೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರು.

ಮಲಯಾಳಂ ಸಿನಿಮಾಕ್ಕೆ ಪಾದಾರ್ಪಣೆ

ಮಲಯಾಳಂ ಸಿನಿಮಾಕ್ಕೆ ಪಾದಾರ್ಪಣೆ

'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ಯಶಸ್ಸು ಕಂಡಿರುವ ಖುಷಿಯಲ್ಲಿರುವ ಮನೋಜ್, ಸೀಸನ್ 3ಗೆ ತಯಾರಾಗಿದ್ದಾರೆ. ಸೀಸನ್ 3ಗೆ ದೊಡ್ಡ ಮೊತ್ತದ ಸಂಭಾವನೆಯನ್ನೇ ಮನೋಜ್ ಕೇಳಿದ್ದಾರೆ. ಅದರ ಜೊತೆಗೆ 'ಡಯಲ್ 100', ಮಲಯಾಳಂನ 'ಕುರುಪ್', 'ಡಿಸ್‌ಪ್ಯಾಚ್' ಸಿನಿಮಾಗಳಲ್ಲಿಯೂ ಮನೋಜ್ ನಟಿಸುತ್ತಿದ್ದಾರೆ.

More from Filmibeat

English summary
Actor Manoj Bajpayee recalled a astrologer said about his career and his Hollywood debut. Once Manoj acted in a Hollywood movie but that movie not released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X